ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರಿಂದ 12 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 1,019ಕ್ಕೂ ಹೆಚ್ಚು ಪುಟಗಳ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, 10 ಜನರ ವಿರುದ್ಧ ಅತ್ಯಾಚಾರ ಆರೋಪದಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇಬ್ಬರು ಯುವತಿಯರ ವಿರುದ್ಧ ಅಕ್ರಮ ವಲಸೆ ಆರೋಪದಡಿಯೂ ಸಾಕ್ಷ್ಯಾಧಾರಗಳ ಸಹಿತ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಯಡಿ ಮೇ 27ರಂದು ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ದೌರ್ಜನ್ಯ ನಡೆದಿದ್ದು, ಕೇವಲ 5 ವಾರಗಳಲ್ಲೇ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಅರೋಪಿಗಳು ಹಾಗು ಸಂತ್ರಸ್ತೆ ಎಲ್ಲರೂ ಬಾಂಗ್ಲಾದೇಶದವರು. ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದಿದ್ದರು ಎನ್ನುವುದು ಬಹಿರಂಗವಾಗಿದೆ. ಹಣದ ವಿಚಾರಕ್ಕೆ ಯುವತಿ ಮೇಲೆ ಹಲ್ಲೆ ಮಾಡಿ ಕೃತ್ಯವೆಸಗಿದ್ದಾರೆ. ತನಿಖೆ ವೇಳೆ ಒಟ್ಟು ಮೂವತ್ತಕ್ಕು ಹೆಚ್ಚು ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಈ ಪೈಕಿ ಆರು ಜನ ಪ್ರತ್ಯಕ್ಷ ಸಾಕ್ಷಿಗಳಿಂದ 164 ಹೇಳಿಕೆಗಳನ್ನು ದಾಖಲು ಮಾಡಿಸಲಾಗಿದೆ.
ಕೃತ್ಯ ನಡೆದ ಸ್ಥಳ ಹಾಗು ವಿಡಿಯೋದಲ್ಲಿ ಪ್ರಮುಖ ಸಾಕ್ಷಿಗಳು ಪತ್ತೆ
ಎಲ್ಲರು ಕೃತ್ಯ ನಡೆದ ಸಮಯದಲ್ಲಿ ಒಟ್ಟಿಗೆ ಇದ್ದರು ಎಂಬುದಕ್ಕೆ ವಿಡಿಯೋ ಹಾಗು ಮೊಬೈಲ್ ನೆಟ್ವರ್ಕ್ನಿಂದ ಖಚಿತವಾಗಿದೆ. ಎಲ್ಲರೂ ಬಾಂಗ್ಲಾದೇಶದವರೆ ಎಂಬುದಕ್ಕೆ ದಾಖಲೆಗಳು ಲಭ್ಯವಾಗಿದೆ. ಅರೋಪಿಗಳು ಬಾಂಗ್ಲಾದೇಶದಲ್ಲಿ ಇರುವವರ ಜೊತೆಗೆ ನಿರಂತರ ಫೋನ್ ಸಂಪರ್ಕದಲ್ಲಿದ್ದರು. ಯುವತಿಗೆ ನಡೆಸಿದ್ದ ಮೆಡಿಕಲ್ ಟೆಸ್ಟ್ ಹಾಗು ಅರೋಪಿತರಿಗೆ ನಡೆಸಿದ್ದ ಮೆಡಿಕಲ್ ಟೆಸ್ಟ್ನಲ್ಲಿ ಕೃತ್ಯ ನಡೆದಿರುವುದು ಖಚಿತವಾಗಿದೆ. ಕೂದಲು, ರಕ್ತ, ಉಗುರಿನ ಮಾದರಿಗಳನ್ನು ಕಲೆ ಹಾಕಲಾಗಿತ್ತು. ಕಲೆ ಹಾಕಿದ್ದ ಮಾದರಿಗಳಿಂದಲು ಅತ್ಯಾಚಾರ ನಡೆದಿರುವುದು ಹಾಗು ನಡೆಸಿರುವ ಅರೋಪಿಗಳು ಇವರೆ ಎಂಬುದು ಪಕ್ಕಾ ಆಗಿದೆ.
ಇದನ್ನೂ ಓದಿ:
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ 11 ಜನ ವಿದ್ಯಾರ್ಥಿಗಳ ಬಂಧನ; ಉತ್ತರ ವಿಭಾಗದ ಪೊಲೀಸರಿಂದ ವಿಚಾರಣೆ
(Bangladeshi young woman gangrape case Charge sheet submission against 12 accused by Bengaluru Police)