AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಸುಂದರ್​ಬನ್ಸ್​ನಲ್ಲಿದ್ದ ಹುಲಿಯು ನಾಪತ್ತೆಯಾದ ನಾಲ್ಕು ತಿಂಗಳ ನಂತರ ಬಾಂಗ್ಲಾದೇಶದ ದ್ವೀಪವೊಂದರಲ್ಲಿ ಪತ್ತೆಯಾಯಿತು!

ಅರಣ್ಯ ಸಂರಕ್ಷಣ ಸಿಬ್ಬಂದಿಗೆ ಅದರ ಚಲನವಲನಗಳ ಬಗ್ಗೆ ಗೊತ್ತಾಗಲು ಮತ್ತು ಹುಲಿ-ಮಾನವ ನಡುವಿನ ಸಂಬಂಧವನ್ನು ಅವಲೋಕಿಸಲು ಈ ಗಂಡುಹುಲಿಗೆ ಡಿಸೆಂಬರ್ 2020ರಲ್ಲಿ ರೇಡಿಯೊ-ಕಾಲರ್ ಹಾಕಲಾಗಿತ್ತು.

ಭಾರತದ ಸುಂದರ್​ಬನ್ಸ್​ನಲ್ಲಿದ್ದ ಹುಲಿಯು ನಾಪತ್ತೆಯಾದ ನಾಲ್ಕು ತಿಂಗಳ ನಂತರ ಬಾಂಗ್ಲಾದೇಶದ ದ್ವೀಪವೊಂದರಲ್ಲಿ ಪತ್ತೆಯಾಯಿತು!
ಭಾರತದಿಂದ ಬಾಂಗ್ಲಾದೇಶಕ್ಕೆ ಹೋದ ಹುಲಿ ಇದೇ
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on:Jun 08, 2021 | 6:49 PM

Share

ಭಾರತದ ಸುಂದರ್​ಬನ್ಸ್​ನಲ್ಲಿ ಕುತ್ತಿಗೆಗೆ ರೇಡಿಯೋ-ಕಾಲರ್ ಬಿಗಿಸಿಕೊಂಡಿದ್ದ ಹುಲಿಯೊಂದು ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಹೆಚ್ಚು ಕಡಿಮೆ 100 ಕಿಮೀಗಳಷ್ಟು ದೂರವನ್ನು ಸವೆಸಿ ಬಾಂಗ್ಲಾದೇಶದ ಕಾಡುಪ್ರದೇಶದಲ್ಲಿರುವ ದ್ವೀಪವೊಂದರಲ್ಲಿ ಪತ್ತೆಯಾಗಿದೆ. ಭಾರತದ ನೆರೆ ರಾಷ್ಟ್ರಕ್ಕೆ ಕಾಲಿಡುವ ಮುಂಚೆ ಈ ಹುಲಿಯು ಒಂದು ಕಿಲೋಮೀಟರ್​ಗಿಂತ ಜಾಸ್ತಿ ಅಗಲವಿರುವ ಕೆಲ ನದಿಗಳೂ ಸೇರಿದಂತೆ ಹಲವಾರು ಅಡೆತಡೆಗಳನ್ನು ದಾಟಿಕೊಂಡು ಹೋಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯ ವನ್ಯಸಂರಕ್ಷಣಾಧಿಕಾರಿ ವಿಕೆ ಯಾದವ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಅರಣ್ಯ ಸಂರಕ್ಷಣ ಸಿಬ್ಬಂದಿಗೆ ಅದರ ಚಲನವಲನಗಳ ಬಗ್ಗೆ ಗೊತ್ತಾಗಲು ಮತ್ತು ಹುಲಿ-ಮಾನವ ನಡುವಿನ ಸಂಬಂಧವನ್ನು ಅವಲೋಕಿಸಲು ಈ ಗಂಡುಹುಲಿಗೆ ಡಿಸೆಂಬರ್ 2020ರಲ್ಲಿ ರೇಡಿಯೊ-ಕಾಲರ್ ಹಾಕಲಾಗಿತ್ತು.

ತನ್ನ ನಾಲ್ಕು-ತಿಂಗಳ ಪಯಣದಲ್ಲಿ ಹುಲಿಯು ಎಲ್ಲೂ ಮಾನವ ವಾಸಿಸುವ ಪ್ರದೇಶಗಳನ್ನು ಪ್ರವೇಶಿಸಿಲ್ಲ ಎಂದು ಯಾದವ್ ಹೇಳಿದ್ದಾರೆ.

ಭಾರತದಲ್ಲಿ ಒಂದಷ್ಟು ದಿನ ಓಡಾಡಿದ ಬಳಿಕ ಹುಲಿಯು, ಬಾಂಗ್ಲಾದೇಶದ ಸುಂದರ್​ಬನ್ಸ್​ನಲ್ಲಿರುವ ತಲ್ಪಟ್ಟಿ ದ್ವೀಪವನ್ನು ಪ್ರವೇಶಿಸುವ ಮೊದಲು ಛೋಟೋ, ಹರಿಖಾಲಿ, ಬೊರೊಹರಿಖಾಲಿ, ಮತ್ತು ರೈಮಂಗಲ್ ನದಿಗಳನ್ನು ದಾಟಿತು, ಎಂದು ಯಾದವ್ ಹೇಳಿದ್ದಾರೆ. ಈ ಹುಲಿಯು ಅರಣ್ಯಾಧಿಕಾರಿಗಳು ಟ್ಯಾಗಿಂಗ್ ಮಾಡುವುದಕ್ಕೋಸ್ಕರ ಸೆರೆ ಹಿಡಿಯುವ ಮೊದಲು ಬಾಂಗ್ಲಾದೇಶದ ಕಾಡುಗಳಲ್ಲಿ ವಾಸವಾಗಿದ್ದಿರಬಹುದು, ಎಂದು ಸಹ ಅವರು ಹೇಳಿದರು.

ಕಳೆದ ವರ್ಷ ಸದರಿ ಹುಲಿಗೆ ರೋಡಿಯೋ-ಕಾಲರ್ ಹಾಕಿದ ನಂತರ ಅದರ ಬಗ್ಗೆ ಮಹಿತಿಯನ್ನು ಹಂಚಿಕೊಂಡಿದ್ದ ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ಮಂಗಳವಾರ ಬೆಳಗ್ಗೆ ಹುಲಿಯ ಕುರಿತು ಟ್ವೀಟ್ ಮಾಡಿದ್ದಾರೆ.

‘ಈ ಹುಲಿಯು ಭಾರತದಿಂದ 100 ಕಿಮೀ ಪ್ರಯಾಣ ಮಾಡಿ ವೀಸಾ ಇಲ್ಲದೆ ಬಾಂಗ್ಲಾದೇಶವನ್ನು ತಲುಪಿದೆ! ತನ್ನ ಪ್ರಯಾಣದ ಅವಧಿಯಲ್ಲಿ ಅದು ಗುಡ್ಡಗಾಡು ಪ್ರದೇಶ, ದ್ವೀಪ ಮತ್ತು ಸಾಗರಗಳನ್ನು ದಾಟಿಕೊಂಡು ಹೋಗಿದೆ,’ ಎಂದು ಕಾಸ್ವಾನ್ ಟ್ವೀಟ್​ ಮಾಡಿದ್ದಾರೆ.

ಕಳೆದ ವರ್ಷ ಅವರು ಹುಲಿಗೆ ರೇಡಿಯೋ-ಕಾಲರ್ ತೊಡಿಸುವಾಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದ ಪೋಸ್ಟನ್ನು ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ಹುಲಿಯ ಪಯಣದ ವಿವರಗಳನ್ನು ಯಾದವ್ ಅವರು ಇಂಗ್ಲಿಷ್ ಮಾಧ್ಯಮವೊಂದರ ಜೊತೆ ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ ಡಿಸೆಂಬರ್ 27 ಮತ್ತು ಮೇ 11 ರ ನಡುವೆ ಹುಲಿಯು ಮೂರು ದ್ವೀಪಗಳು- ಭಾರತದ ಸುಂದರಬನ್ಸ್​ನಲ್ಲಿರುವ ಹರಿಭಂಗ, ಖತುವಾಝೂರಿ ಮತ್ತು ಬಾಂಗ್ಲಾದೇಶದಲ್ಲಿರುವ ತಲ್ಪಟ್ಟಿಗಳನ್ನು ದಾಟಿದೆ.

ಮೇ 11 ರ ನಂತರ ಅದಕ್ಕೆ ಬಿಗಿದಿದ್ದ ರೇಡಿಯೋ-ಕಾಲರ್ ಸಿಗ್ನಲ್​ ರವಾನಿಸುವುದನ್ನು ನಿಲ್ಲಿಸಿತು. ಅದರ ಕೊನೆಯ ಲೊಕೇಶನ್ ಪತ್ತೆಯಾಗಿದ್ದು ಬಾಂಗ್ಲಾದೇಶದ ತಲ್ಪಟ್ಟಿ ದ್ವೀಪದಲ್ಲಿ.

ಒಂದು ಪಕ್ಷ ಹುಲಿ ಸತ್ತರೆ ಸಾವಿನ ಬಗ್ಗೆ ಸಿಗ್ನಲ್ ನೀಡುವ ಸೆನ್ಸರ್ ಗ್ಯಾಡ್ಗೆಟ್ ಸಹ ಅದಕ್ಕೆ ಬಿಗಿಯಲಾಗಿತ್ತು. ಆದರೆ ಅದರೆ ಪ್ರಮೇಯ ಉದ್ಭವಿಸಲಿಲ್ಲ. ಆದರೆ ರೆಡಿಯೋ-ಕಾಲರ್​ನಿಂದ ಅದು ಬದುಕಿರುವ ಬಗ್ಗೆಯೂ ನಮಗೆ ಯಾವುದೇ ಸಿಗ್ನಲ್​ ಸಿಗಲಿಲ್ಲ. ಪ್ರಾಯಶಃ ಅದು ಹುಲಿಯ ಕುತ್ತಿಗೆಯಿಂದ ಜಾರಿ ಬಿದ್ದಿರಬಹುದು, ಎಂದು ಯಾದವ್ ಪತ್ರಿಕೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: Tiger Attack | ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ, ಕಾರ್ಯಾಚರಣೆಗೆ ಸಾಕಾನೆಗಳನ್ನು ಕರೆಸಿದ ಅರಣ್ಯ ಇಲಾಖೆ

Published On - 6:48 pm, Tue, 8 June 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್