ಗರ್ಭಿಣಿ ಹೆಂಡ್ತಿಯನ್ನೇ ಹತ್ಯೆ ಮಾಡಿದನೇ ಗಂಡ, ಅಪ್ರಾಪ್ತ ಬಾಲಕಿ ಕುಟುಂಬಸ್ಥರ ಆರೋಪವೇನು?

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಅಪ್ರಾಪ್ತೆಯನ್ನ ಮದುವೆಯಾಗಿ ಗರ್ಭಿಣಿ ಮಾಡಿ ಗಂಡನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ, ಬಿಪಿ ಲೋ ಆಗಿ ಮಗಳು ಮೃತಪಟ್ಟಿದ್ದಾಳೆ ಎಂದು ಗಂಡ ಸಾಹಿಲ್ ಬಾಲಕಿಯ ಪೋಷಕರಿಗೆ ಕರೆ ಮಾಡಿದ್ದ. ಸ್ಥಳಕ್ಕೆ ಹೋಗಿ ನೋಡಿದಾಗ ಬಾಲಕಿ ಕತ್ತಲ್ಲಿ ಕಪ್ಪು ಕಲೆಗಳು ಕಂಡು ಕೊಲೆಯ ಶಂಕೆ ವ್ಯಕ್ತವಾಗಿದೆ.

ಗರ್ಭಿಣಿ ಹೆಂಡ್ತಿಯನ್ನೇ ಹತ್ಯೆ ಮಾಡಿದನೇ ಗಂಡ, ಅಪ್ರಾಪ್ತ ಬಾಲಕಿ ಕುಟುಂಬಸ್ಥರ ಆರೋಪವೇನು?
ಆರೋಪಿ ಗಂಡ, ಮೃತ ಅಪ್ರಾಪ್ತ ಬಾಲಕಿ
Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 15, 2024 | 4:18 PM

ಬೆಳಗಾವಿ, ಮಾ.15: ಅಪ್ರಾಪ್ತೆಯನ್ನ ಮದುವೆಯಾಗಿ ಗರ್ಭಿಣಿ ಮಾಡಿ ಗಂಡನೇ ಕೊಲೆ ಮಾಡಿರುವ ಆರೋಪ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಕೇಳಿಬಂದಿದೆ. ಹತ್ತು ತಿಂಗಳ ಹಿಂದೆ 17 ವರ್ಷದ ಅಪ್ರಾಪ್ತೆಯನ್ನ ಸಾಹಿಲ್ ಬಾಗೇವಾಡಿ ಮದುವೆ ಆಗಿದ್ದ. ಸದ್ಯ ನಾಲ್ಕು ತಿಂಗಳ ಗರ್ಭಿಣಿ ಕೂಡ ಆಗಿದ್ದಳು. ಮದುವೆ ಆದ ಬಳಿಕ ಗಂಡ ಸಾಹಿಲ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಈ ಹಿನ್ನಲೆ ಆಕೆಯ ಗಂಡ ಮತ್ತು ಅತ್ತೆ-ಮಾವ ಸೇರಿ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಬಾಲಕಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಲೋ ಬಿಪಿಯಿಂದ ಮೃತಪಟ್ಟಿದ್ದಾಳೆ ಎಂದು ಕರೆ ಮಾಡಿದ್ದ ಗಂಡ ಸಾಹಿಲ್

ಇನ್ನು ಬಿಪಿ ಲೋ ಆಗಿ ಮಗಳು ಮೃತಪಟ್ಟಿದ್ದಾಳೆ ಎಂದು ಗಂಡ ಸಾಹಿಲ್ ಬಾಲಕಿಯ ಪೋಷಕರಿಗೆ ಕರೆ ಮಾಡಿದ್ದ. ಸ್ಥಳಕ್ಕೆ ಹೋಗಿ ನೋಡಿದಾಗ ಬಾಲಕಿ ಕತ್ತಲ್ಲಿ ಕಪ್ಪು ಕಲೆಗಳು ಕಂಡು ಕೊಲೆಯ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿದ ಬಳಿಕ ಬಿಪಿ ಲೋ ಆಗಿದೆ ಎಂದು ಸುಳ್ಳು ಹೇಳ್ತಿದ್ದಾರೆ ಎಂದು ಬಾಲಕಿ ಕುಟುಂಬಸ್ಥರ ಆರೋಪ ಮಾಡುತ್ತಿದ್ದಾರೆ. ಅಪ್ರಾಪ್ತ ಗರ್ಭಿಣಿ ಸಾವು ಹಿನ್ನೆಲೆ ತಹಶೀಲ್ದಾರ್ ಸಿದ್ದರಾಯ ಬೋಸಗಿ ಶವಾಗಾರಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ಯಾದಗಿರಿ: ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಕೊಚ್ಚಿ ಪತ್ನಿಯ ಭೀಕರ ಕೊಲೆ; ತಪ್ಪಿಸಲು ಹೋದ ಮಗನ ಮೇಲೂ ಹಲ್ಲೆ

ಗಂಡ ಸಾಹಿಲ್ ಸೇರಿ ಏಳು ಜನರ ವಿರುದ್ಧ ಕೇಸ್ ದಾಖಲು

ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸ್ ಕಾಯ್ದೆಯಡಿ ಗಂಡ ಸಾಹಿಲ್ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಮಗಳ ಮದುವೆ ಮಾಡಿದ ಹಿನ್ನೆಲೆ ಬಾಲಕಿ ತಂದೆ-ತಾಯಿ ವಿರುದ್ಧವೂ ಕೇಸ್ ದಾಖಲಾಗಿದ್ದು, ಈಗಾಗಲೇ ಗಂಡ ಸಾಹಿಲ್ ಸೇರಿ ಆರು ಜನರನ್ನ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ