ವಂಟಮೂರಿಯಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಚಾರ್ಜ್​​ಶೀಟ್ ಸಲ್ಲಿಕೆಗೆ CID ಸಿದ್ಧತೆ, ಆರೋಪಿಗಳ ವಿರುದ್ಧವೇ ಮಗಳ ಹೇಳಿಕೆ

| Updated By: Rakesh Nayak Manchi

Updated on: Jan 24, 2024 | 12:29 PM

ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಡಿಸೆಂಬರ್ 11 ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಇಡೀ ರಾಜ್ಯವೇ ಬೆಚ್ಚಿಬೀಳಿಸುತ್ತು. ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸುವ ಒತ್ತಡ ಬಂದ ಹಿನ್ನೆಲೆ ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತಿಸಿತ್ತು. ಅದರಂತೆ, ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಒಂದೂವರೆ ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಚಾರ್ಜ್​ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.

ವಂಟಮೂರಿಯಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಚಾರ್ಜ್​​ಶೀಟ್ ಸಲ್ಲಿಕೆಗೆ CID ಸಿದ್ಧತೆ, ಆರೋಪಿಗಳ ವಿರುದ್ಧವೇ ಮಗಳ ಹೇಳಿಕೆ
ವಂಟಮೂರಿಯಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಚಾರ್ಜ್​​ಶೀಟ್ ಸಲ್ಲಿಕೆಗೆ CID ಸಿದ್ಧತೆ, ಆರೋಪಿಗಳ ವಿರುದ್ಧವೇ ಮಗಳ ಹೇಳಿಕೆ
Follow us on

ಬೆಳಗಾವಿ, ಜ.24: ಜಿಲ್ಲೆಯ ನ್ಯೂ ವಂಟಮೂರಿ (New Vantamuri) ಗ್ರಾಮದಲ್ಲಿ ಡಿಸೆಂಬರ್ 11 ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಇಡೀ ರಾಜ್ಯವೇ ಬೆಚ್ಚಿಬೀಳಿಸುತ್ತು. ಪ್ರಕರಣದ ತನಿಖೆ ಸಿಐಡಿಗೆ (CID) ಒಪ್ಪಿಸುವ ಒತ್ತಡ ಬಂದ ಹಿನ್ನೆಲೆ ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತಿಸಿತ್ತು. ಅದರಂತೆ, ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಒಂದೂವರೆ ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಚಾರ್ಜ್​ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.

ಇದೇ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್​​ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಯುವತಿ ಹೇಳಿಕೆಯೇ ಬ್ರಹ್ಮಾಸ್ತ್ರವಾಗಿದೆ. ಹಲ್ಲೆ ನಡೆಸಿದ ಆರೋಪಿಗಳಾದ ತಂದೆ ಮತ್ತು ಚಿಕ್ಕಪ್ಪನ ವಿರುದ್ಧವೇ ಯುವತಿ ಹೇಳಿಕೆ ದಾಖಲಿಸಿದ್ದಾರೆ. ನಾನು ಪ್ರೀತಿ ಮಾಡಿಯೇ ಯುವಕನ ಜೊತೆ ಹೋಗಿದ್ದೇನೆ. ನಮ್ಮಪ್ಪ, ಚಿಕ್ಕಪ್ಪ ಸೇರಿ ಪ್ರಿಯಕರನ ಮನೆ ಧ್ವಂಸ ಮಾಡಿ ಹಲ್ಲೆ ಮಾಡುತ್ತಿರುವುದಾಗಿ ಕರೆಮಾಡಿ ಹೇಳಿದ್ದಾಗಿ ಹೇಳಿಕೆ ನೀಡಿದ್ದಾಳೆ. ಪ್ರಕರಣ ಸಂಬಂಧ ಒಟ್ಟು 1,500 ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್​ಶೀಟ್​​ ಸಿದ್ಧಪಡಿಸಲಾಗಿದ್ದು, 40 ಜನರನ್ನ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.

ಇದನ್ನೂ ಓದಿ: ರೊಟ್ಟಿ ಖರೀದಿ ವೇಳೆ ಪ್ರೇಮಾಂಕುರ; ಪ್ರಿಯಕರನ ಹಣ ಖರ್ಚು ಮಾಡಿಸಿ ಮರಳಿ ಗಂಡನೂರಿಗೆ ಹೋದ ಮಹಿಳೆ

ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದ ಸಿಐಡಿ ತನಿಖಾ ತಂಡ 15 ದಿನಗಳ ಕಾಲ ಬೆಳಗಾವಿಯಲ್ಲಿ ಬೀಡು ಬಿಟ್ಟಿತ್ತು. ಸಂತ್ರಸ್ಥ ಮಹಿಳೆ ಹಾಗೂ ಸ್ಥಳೀಯ ವೃದ್ದೆಯೊಬ್ಬರು ಕೊಟ್ಟಿರುವ ಹೇಳಿಕೆಯೇ ಪ್ರಮುಖ ಸಾಕ್ಷ್ಯವನ್ನಾಗಿ ಮಾಡಲಾಗಿದೆ. ಆರೋಪಿಯ ಮಗಳ ಸುದೀರ್ಘ ಹೇಳಿಕೆಯನ್ನೂ ತನಿಖಾ ತಂಡ ದಾಖಲಿಸಿಕೊಂಡಿದೆ. ಇದರ ಜೊತೆಗೆ ಟೆಕ್ನಿಕಲ್ ಎವಿಡೆನ್ಸ್​ಗಳನ್ನ ಕೂಡ ಸಂಗ್ರಹಿಸಿದೆ. ಹೈಕೋರ್ಟ್ ಸೂಚನೆ ಹಿನ್ನೆಲೆ ಮೊಬೈಲ್ ದೃಶ್ಯದಲ್ಲಿ ಕಂಡುಬಂದವರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು.

ಚಾರ್ಜ್ ಶೀಟ್​ನಲ್ಲಿ ಉಲ್ಲೇಖವಾಗಿರುವ ಪ್ರಮುಖ ಅಂಶಗಳು

ಮದುವೆ ನಿಶ್ಚಯವಾಗಿದ್ದ ಮಗಳು ಪ್ರಿಯಕರನ ಜೊತೆಗೂಡಿ ಓಡಿಹೋಗಿದ್ದೇ ಯುವಕನ ತಾಯಿ ಮೇಲೆ ಹಲ್ಲೆಗೆ ಕಾರಣ ಎಂಬುದನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಮರ್ಯಾದೆ ಹೋಯ್ತು ಎಂಬ ಪ್ರಚೋದಿತರ ಮಾತುಗಳಿಂದಾಗಿ ಅರೋಪಿತರು ಹಲ್ಲೆ ನಡೆಸಿದ್ದಾರೆ. ಮದುವೆ ಸಿದ್ಧತೆ ಮಾಡಿಕೊಂಡಿದ್ದಾಗಲೇ ಯುವತಿ ಓಡಿಹೋದ ಹಿನ್ನಲೆ ಚಿಕ್ಕಪ್ಪ ಹಾಗೂ ತಂದೆಯು ದುರುದ್ದೇಶದಿಂದಲೇ ಮಾಡಿರುವುದಾಗಿ ಹೇಳಿಕೆ ದಾಖಲಿಸಲಾಗಿದೆ.

ಸಂಬಂಧಿಕರ ಮಾತುಗೊಳಿಂದ ಪ್ರಚೋದನೆಗೊಂಡು ಜಾತಿಯ ವಿಚಾರವೆತ್ತಿ ಮಹಿಳೆಯನ್ನ ವಿವಸ್ತ್ರ ಮಾಡಿ ಹಲ್ಲೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣೆಯ ತನಿಖೆಯ ರಿಪೋರ್ಟ್ ಪಡೆದುಕೊಂಡಿರುವ ಸಿಐಡಿ ಆ ಬಗ್ಗೆಯೂ ಉಲ್ಲೇಖಿಸಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ