ರೊಟ್ಟಿ ಖರೀದಿ ವೇಳೆ ಪ್ರೇಮಾಂಕುರ; ಪ್ರಿಯಕರನ ಹಣ ಖರ್ಚು ಮಾಡಿಸಿ ಮರಳಿ ಗಂಡನೂರಿಗೆ ಹೋದ ಮಹಿಳೆ
ಇದು ಒಂದು ರೊಟ್ಟಿಯಿಂದಾದ ಪ್ರೀತಿ ಪ್ರೇಮದ ರಿಯಲ್ ಸ್ಟೋರಿ. ರೊಟ್ಟಿ ಖರೀದಿಗೆ ಹೋಗಿದ್ದಾಗ ವಿವಾಹಿತ ಪುರುಷನಿಗೆ ವಿವಾಹಿತ ಮಹಿಳೆ ಮೇಲೆ ಲವ್ ಆಗಿದೆ. ಗಂಡನಿಂದ ದೂರ ಉಳಿದು ಪ್ರಿಯಕರನೊಂದಿಗೆ ಬಳ್ಳಾರಿಯಲ್ಲಿ ನೆಲೆಸಿದ್ದಳು. ಪ್ರಿಯಕರನೊಂದಿಗೆ ಇದ್ದುಕೊಂಡು ಭರ್ಜರಿ ಹಣ ಖರ್ಚು ಮಾಡಿ ಕೊನೆಗೆ ಮಹಿಳೆ ಮರಳಿ ಪತಿಯೊಂದಿಗೆ ಹೋಗಿದ್ದಾಳೆ. ಇತ್ತ, ಮಹಿಳೆಗಾಗಿ ಪ್ರಿಯಕರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಬಳ್ಳಾರಿ, ಜ.24: ಇದು ಒಂದು ರೊಟ್ಟಿಯಿಂದಾದ ಪ್ರೀತಿ ಪ್ರೇಮದ ರಿಯಲ್ ಸ್ಟೋರಿ. ರೊಟ್ಟಿ ಖರೀದಿಗೆ ಹೋಗಿದ್ದಾಗ ವಿವಾಹಿತ ಪುರುಷನಿಗೆ ವಿವಾಹಿತ ಮಹಿಳೆ ಮೇಲೆ ಲವ್ ಆಗಿದೆ. ಗಂಡನಿಂದ ದೂರ ಉಳಿದು ಪ್ರಿಯಕರನೊಂದಿಗೆ ಬಳ್ಳಾರಿಯಲ್ಲಿ (Ballari) ನೆಲೆಸಿದ್ದಳು. ಪ್ರಿಯಕರನೊಂದಿಗೆ ಇದ್ದುಕೊಂಡು ಭರ್ಜರಿ ಹಣ ಖರ್ಚು ಮಾಡಿ ಕೊನೆಗೆ ಮಹಿಳೆ ಮರಳಿ ಪತಿಯೊಂದಿಗೆ ಹೋಗಿದ್ದಾಳೆ ಮಾರಾಯ್ರೆ.
ಮಹಾರಾಷ್ಟ್ರದ ಸಾಂಗ್ಲಿಯ ಜತ್ತ ತಾಲೂಕಿನ ಮುಚ್ಚಂಡಿ ಗ್ರಾಮದ ಸಿದ್ದಗೊಂಡ ಸೌದತ್ತಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಹೀಗಿದ್ದರೂ ರೊಟ್ಟಿ ತರಲೆಂದು ಹೋದ ಸೌದತ್ತಿಗೆ ರೊಟ್ಟಿ ಮಾಡುವ ಸುಜಾತಾಳ ಮೇಲೆ ಪ್ರೇಮಾಂಕುರವಾಗಿದೆ. ಈಕೆಗೂ ಮದುವೆಯಾಗಿ ಒಂದು ಮಗುವಿದೆ.
ಇದನ್ನೂ ಓದಿ: ಗಂಡನ ಶ್ವಾನಪ್ರೇಮ ಸಹಿಸದೆ ಪತ್ನಿಯೇ ಬಿಟ್ಟು ಹೋದರಂತೆ, ಆದರೆ ನಾಯಿಗಳ ಮೇಲಿನ ಆತನ ಪ್ರೀತಿ ಮತ್ತಷ್ಟು ದೃಢವಾಗಿದೆ
ರೊಟ್ಟಿ ತರಲು ಹೋಗುತ್ತಿದ್ದಾಗ ಸುಜಾತಾ ಮತ್ತು ಸೌದತ್ತಿ ಮೇಲೆ ಬೆಳೆದ ಸಲುಗೆ ಪ್ರೀತಿಗೆ ತಿರುಗಿದೆ. ಅದರಂತೆ ಸಜಾತ ತನ್ನ ಗಂಡನನ್ನು ಬಿಟ್ಟು ಸೌದತ್ತಿ ಜೊತೆ ಓಡಿ ಬಂದಿದ್ದಳು. ಹೀಗೆ ಓಡಿ ಬಂದ ವಿವಾಹಿತ ಜೋಡಿ ಹಕ್ಕಿ ಕಳೆದ ಆರು ತಿಂಗಳಿನಿಂದ ಬಳ್ಳಾರಿಯಲ್ಲಿ ನೆಲೆಸಿದ್ದರು. ಇತ್ತ, ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ಮಹೇಶ್ ಮಹಾರಾಷ್ಟ್ರ ಸಾಂಗ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಅದರಂತೆ ಮಹಿಳೆಯನ್ನು ಪ್ರಿಯಕರನ ಜೊತೆ ಪತ್ತೆ ಹಚ್ಚಿದ ಸಾಂಗ್ಲಿ ಪೊಲೀಸರು ರಾಜಿ ಪಂಚಾಯ್ತಿ ನಡೆಸಿದ್ದಾರೆ. ಈ ವೇಳೆ ತಾನು ಸಿದ್ದಗೊಂಡ ಸೌದತ್ತಿ ಜೊತೆಗೆ ಹೋಗುತ್ತೇನೆ ಎಂದಿದ್ದಾಳೆ. ಅದರಂತೆ, ಸಾಂಗ್ಲಿ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಸುಜಾತಾಳನ್ನು ಸೌದತ್ತಿ ಬಳ್ಳಾರಿಗೆ ಕರೆದುಕೊಂಡು ಬಂದಿದ್ದಾನೆ.
ಹೀಗೆ ಸೌದತ್ತಿ ಜೊತೆಗಿದ್ದ ಸುಜಾತ ಅಲ್ಲಿಗೆ ಇಲ್ಲಿಗೆ ಎಂದು ಸುತ್ತಾಡಿ, ವಿಮಾನದಲ್ಲೂ ಪ್ರಯಾಣ ಮಾಡಿ ಭರ್ಜರಿ ಹಣ ಖರ್ಚು ಮಾಡಿಸಿದ್ದಾಳೆ. ಕೊನೆಗೆ ತನ್ನ ಗಂಡನಿಗೆ ದೂರವಾಣಿ ಕರೆ ಮಾಡಿ ಮರಳಿ ಗಂಡನ ಜೊತೆ ಹೋಗಿದ್ದಾಳೆ. ಇತ್ತ, ತನ್ನ ಪ್ರೇಯಸಿ ಬೇಕು ಅಂತಾ ಸಿದ್ದಗೊಂಡ ಸೌದತ್ತಿ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರೇಯಸಿ ಸುಜಾತ ಹುಡುಕಾಟಕ್ಕಾಗಿ ಕಚೇರಿ ಕಚೇರಿ ಅಲೆಯುತ್ತಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ