AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನ ಶ್ವಾನಪ್ರೇಮ ಸಹಿಸದೆ ಪತ್ನಿಯೇ ಬಿಟ್ಟು ಹೋದರಂತೆ, ಆದರೆ ನಾಯಿಗಳ ಮೇಲಿನ ಆತನ ಪ್ರೀತಿ ಮತ್ತಷ್ಟು ದೃಢವಾಗಿದೆ

ಬೇಸರದ ಸಂಗತಿ ಅಂದ್ರೆ ಶ್ವಾನ ಪ್ರೇಮಿ ಡೋರ್ಜಿ ನಾಯಿ ಪ್ರೀತಿ ನೋಡಲಾಗದೆ ಇವರ ಪತ್ನಿ ಇವರನ್ನು ಬಿಟ್ಟು ಹೋಗಿದ್ದಾರಂತೆ. ಆದರೆ ಸ್ಥಳೀಯರು ಕೈಲಾದ ಸಹಾಯ ಮಾಡುತ್ತಾರೆ. ಇವರ ಅಕ್ಕ ಡೋಲ್ಮಾ ಈ ನಾಯಿಗಳ ಆರೈಕೆಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಾರೆ. ಹಾಗಾಗಿ ನಾಯಿ ಆರೈಕೆ ಕೇಂದ್ರಕ್ಕೆ ಡೋಲ್ಮಾ ಅಂತಾನೇ ಹೆಸರಿಟ್ಟಿದ್ದಾರೆ.

ಗಂಡನ ಶ್ವಾನಪ್ರೇಮ ಸಹಿಸದೆ ಪತ್ನಿಯೇ ಬಿಟ್ಟು ಹೋದರಂತೆ, ಆದರೆ ನಾಯಿಗಳ ಮೇಲಿನ ಆತನ ಪ್ರೀತಿ ಮತ್ತಷ್ಟು ದೃಢವಾಗಿದೆ
ಶ್ವಾನಪ್ರೇಮದಿಂದ ಪತ್ನಿ ದೂರವಾದರಂತೆ, ಆದರೂ ನಾಯಿ ಆರೈಕೆ ಮುಂದುವರಿಸಿದ ಗಂಡ
Gopal AS
| Edited By: |

Updated on:Jan 15, 2024 | 12:28 PM

Share

ಬೀದಿ ನಾಯಿಗಳೆಂದ್ರೆ ಮಾರು ದೂರ ಹೋಗುವವರೇ ಹೆಚ್ಚು. ಅದಕ್ಕೆ ಪ್ರೀತಿ ಆರೈಕೆ ಕೊಡೋರು ಬಹಳ ಕಮ್ಮಿ. ಆದ್ರೆ ಇಲ್ಲೊಬ್ಬ ವ್ಯಕ್ತಿ ಇದ್ದಾನೆ. ಆತನ ಶ್ವಾನ ಪ್ರೇಮ ನೋಡಿದ್ರೆ ಎಂತಹವರೂ ಅಚ್ಚರಿ ಪಡ್ತಾರೆ. ಒಂದೆಡೆ ಕಾಲುಗಳಲ್ಲಿ ಶಕ್ತಿಯೇ ಇಲ್ಲದೆ ಲಕ್ವ ಹೊಡೆದು ಚಲಿಸಲೂ ಆಗದೆ ತೆವಳುತ್ತಿರೋ ನಾಯಿಮರಿಗಳು. ಅದರ ಪಕ್ಕದಲ್ಲೇ ಖಾಯಿಲೆಗೆ ತುತ್ತಾಗಿ ದೇಹದಲ್ಲಿ ರೋಮವೇ ಇಲ್ಲದೆ ಅಸಹ್ಯ ಹುಟ್ಟಿಸುವ ನಾಯಿಗಳು, ಮತ್ತೊಂದೆಡೆ ಕೈಯೇ ಇಲ್ಲದೆ ಅಂಗವಿಕಲವಾಗಿರುವ ನಾಯಿ… ಒಂದಾ ಎರಡಾ.. ಒಂದೊಂದು ನಾಯಿಯದ್ದೂ ಒಂದೊಂದು ದುರಂತ ಕಥೆ.. ಅಕ್ಷರಶಃ ನಾಯಿ ಪಾಡು ಇವುಗಳದ್ದು.

ಆದ್ರೆ ಈ ನಾಯಿಗಳದ್ದು ಅದ್ಯಾವ ಜನುಮದ ಅದೃಷ್ಟವೋ ಏನೋ.. ಈ ಜನ್ಮದಲ್ಲಿ ಇವುಗಳ ಅಸಾಹಾಯಕ ಸ್ಥಿತಿಯಲ್ಲೂ ದೇವರಂತೆ ವ್ಯಕ್ತಿಯೊಬ್ಬ ಸಿಕ್ಕಿದ್ದಾನೆ. ಅವನೇ ಕಾಲ್​ಸಂಗ್ ಡೋರ್ಜಿ… ಹೌದು ಡೋರ್ಜಿ ಅದೆಂತಹ ನಾಯಿ ಪ್ರೇಮಿ ಅಂದ್ರೆ ಆ ನಾಯಿ ಅದೆಂತಹದ್ದೇ ಅಸಹ್ಯ ಪರಿಸ್ಥಿತಿಯಲ್ಲಿರಲಿ. ಆದ್ರೆ ಈತನಿಗೆ ಮಾತ್ರ ಅದು ಆತನ ಮಗುವಿನಂತೆ ಮೈಸೂರು ಕೊಡಗು ಗಡಿಯಲ್ಲಿರೋ ಬೈಲುಕೊಪ್ಪ ಟಿಬೆಟಿಯನ್​ ನಿರಾಶ್ರಿತರ ಶಿಬಿರದಲ್ಲಿ ಕಾಲ್​ಸಂಗ್ ಡೋರ್ಜಿ ಅನಾಥ ಬೀದಿ ನಾಯಿಮರಿಗಳ ಆಶ್ರಯ ಕೇಂದ್ರ ಸ್ಥಾಪಿಸಿದ್ದಾರೆ.

ಇಲ್ಲಿ 40ಕ್ಕೂ ಅಧಿಕ ನಾಯಿಗಳಿವೆ. ಎಲ್ಲವೂ ಬೀದಿನಾಯಿಗಳೆ. ಬಹಳಷ್ಟು ನಾಯಿಗಳು ಅನಾಥವಾಗಿ ವಿವಿಧ ತೊಂದರೆಗೆ ಸಿಲುಕಿಕೊಂಡವುಗಳು. ಕೊಪ್ಪ, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ ಹೀಗೆ ವಿವಿಧ ಸ್ಥಳಗಳಿಂದ ಈ ನಾಯಿಗಳನ್ನು ರಕ್ಷಿಸಿ ತಂದು ತಮ್ಮ ಆಶ್ರಯತಾಣದಲ್ಲಿ ಸಾಕುತ್ತಿದ್ದಾರೆ. ಬರೇ ಆಹಾರ ಆಶ್ರಯ ಮಾತ್ರವಲ್ಲ ಅನಾರೋಗ್ಯಪೀಡಿತ ನಾಯಿಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನ ಕೂಡ ಇವರೇ ನೀಡ್ತಾರೆ.

ಇವರ ಬಳಿಕ 40ಕ್ಕೂ ಅಧಿಕ ನಾಯಿಗಳಿವೆ. ಒಂದು ನಾಯಿಯನ್ನ ರಕ್ಷಿಸಿ ತಂದ ಬಳಿಕ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸಂತಾನಹರಣ ಚಿಕಿತ್ಸೆ ಮಾಡುತ್ತಾರೆ. ಬಳಿಕ ಯಾರಿಗಾದ್ರೂ ದಾನ ನೀಡ್ತಾರೆ. ಇವರ ಬಳಿ ಬಹುತೇಕ ನಾಯಿಗಳು ಅನಾರೋಗ್ಯಪೀಡಿತವಾಗಿಯೇ ಬರುತ್ತವೆ. ಆದ್ರೆ ಒಮ್ಮೆ ಇವರ ಬಳಿ ಬಂದ ಬಳಿಕ ಅದಕ್ಕೆ ಚಿಕಿತ್ಸೆ ನೀಡಿ ಸುಧಾರಿಸುತ್ತಾರೆ. ಪ್ರತಿಯೊಂದು ನಾಯಿಗೂ ಹೆಸರಿಡುತ್ತಾರೆ. ಯಜಮಾನ ಬಂದ ತಕ್ಷಣ ಪ್ರತಿಯೊಂದು ನಾಯಿಯೂ ಖುಷಿಯಿಂದ ಇವರ ಬಳಿ ಓಡೋಡಿ ಬಂದು ಮುದ್ದಾಡುತ್ತಾವೆ. ದಿನಕ್ಕೆ ಮೂರು ಹೊತ್ತು ಅತ್ಯುತ್ತಮ ದರ್ಜೆಯ ಆಹಾರವನ್ನೇ ನೀಡುತ್ತಾರೆ.

Also Read: ರಾಜ್ಯದೆಲ್ಲೆಡೆ ಸಂಕ್ರಾಂತಿ ಸಂಭ್ರಮ: ಆದ್ರೆ ರಾಮನಗರ ಕರಿ ಕಬ್ಬು ಬೆಲೆ ಕುಸಿತ, ರೈತರಿಗೆ ನಿರಾಸೆ

ಬೇಸರದ ಸಂಗತಿ ಅಂದ್ರೆ ಇವರ ನಾಯಿ ಪ್ರೀತಿ ನೋಡಲಾಗದೆ ಇವರ ಪತ್ನಿ ಇವರನ್ನು ಬಿಟ್ಟು ಹೋಗಿದ್ದಾರಂತೆ. ಇವರ ನಾಯಿ ಪ್ರೀತಿ ನೋಡಿದ ಸ್ಥಳೀಯರು ತಾವೂ ಕೈಲಾದ ಸಹಾಯ ಮಾಡುತ್ತಾರೆ. ತಿಂಗಳಿಗೆ ಇವರಿಗೆ ಈ ನಾಯಿಗಳ ಪಾಲನೆ ಪೋಷಣೆ, ಕಟ್ಟಡ ಬಾಡಿಗೆ ಸೇರಿ 70 ಸಾವಿರ ರೂ ಖರ್ಚಾಗುತ್ತದೆ. ಇವರ ಅಕ್ಕ ಡೋಲ್ಮಾ ಈ ನಾಯಿಗಳು ಆರೈಕೆಗೆ ಪ್ರತಿ ತಿಂಗಳು ಸಾಕಷ್ಟು ಹಣ ಕಳುಹಿಸುತ್ತಾರೆ. ಹಾಗಾಗಿ ನಾಯಿ ಆರೈಕೆ ಕೇಂದ್ರಕ್ಕೆ ಡೋಲ್ಮಾ ಅಂತಾನೇ ಹೆಸರಿಟ್ಟಿದ್ದಾರೆ.

ಆರೋಗ್ಯವಂತ ನಾಯಿಗಳನ್ನ ಸಾಕುವುದೇ ಕಷ್ಟ. ಸಾಕಿದ್ರೂ ಅಬ್ಬಬ್ಬಾ ಅಂದ್ರೆ ಎರಡೋ ಮೂರೋ ನಾಯಿಗಳನ್ನ ಸಾಕಬಹುದು. ಆದ್ರೆ ಇಂತಹ ಅನಾರೋಗ್ಯ ಪೀಡಿತ ಬೀದಿನಾಯಿಗಳನ್ನ ಇಷ್ಟೊಂದು ಅಗಾಧ ಸಂಖ್ಯೆಯಲ್ಲಿ ಸಾಕುವುದು ಅಂದ್ರೆ ಆತ ದೇವತಾ ಮನುಷ್ಯನೇ ಆಗಿರಬೇಕು ಅಲ್ಲವೆ? ತಮ್ಮ ಈ ನಿಸ್ವಾರ್ಥ ಸೇವೆಗೆ ಸಹಾಯ ಮಾಡುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:28 pm, Mon, 15 January 24

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ