ಆಂಧ್ರದ ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ಪ್ರಕರಣ: ಮೂವರು ಅರೆಸ್ಟ್

| Updated By: Rakesh Nayak Manchi

Updated on: Dec 10, 2022 | 1:15 PM

ಆಂಧ್ರದ ರೌಡಿಶೀಟರ್ ಶಿವಶಂಕರ್ ರೆಡ್ಡಿ ಸೇರಿದಂತೆ ಇಬ್ಬರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೆ.ಆರ್​.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದ ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ಪ್ರಕರಣ: ಮೂವರು ಅರೆಸ್ಟ್
ಪರಾರಿಯಾಗುತ್ತಿರುವ ಆರೋಪಿಗಳು ಮತ್ತು ಗುಂಡಿನ ದಾಳಿಯಿಂದ ಗಾಯಗೊಂಡ ರೌಡಿಶೀಟರ್ ಶಿವಶಂಕರ್ ರೆಡ್ಡಿ
Follow us on

ಬೆಂಗಳೂರು: ನಗರದಲ್ಲಿ ಆಂಧ್ರದ ರೌಡಿಶೀಟರ್ ಶಿವಶಂಕರ್ ರೆಡ್ಡಿ ಸೇರಿದಂತೆ ಇಬ್ಬರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ (Fire case) ಸಂಬಂಧ ಮೂವರು ಆರೋಪಿಗಳನ್ನು ಕೆ.ಆರ್​.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ (Andra Pradesh) ಮದನಪಲ್ಲಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಶಿವಶಂಕರ್ ರೆಡ್ಡಿ ಮತ್ತು ಡ್ರೈವರ್ ಅಶೋಕ್ ರೆಡ್ಡಿ ಮೇಲೆ ಡಿಸೆಂಬರ್ 8ರಂದು ಗುಂಡಿನ ದಾಳಿ ನಡೆದಿತ್ತು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪುರಂ ಠಾಣಾ ಪೊಲೀಸರು, ಆರೋಪಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚನೆ ಮಾಡಿದ್ದರು. ಅದರಂತೆ ತನಿಖೆ ಆರಂಭಿಸಿದ ಪೊಲೀಸರು ಹೈವೇ ರಸ್ತೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಹೊಸಕೋಟೆಯಿಂದ ಆಂಧ್ರಪ್ರದೇಶಕ್ಕೆ ತೆರಳಿರುವುದು ತಿಳಿದುಬಂದಿದೆ. ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಹಳೆ ದ್ವೇಷದ ಹಿನ್ನಲೆ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ರೌಡಿಶೀಟರ್ ಶಿವಶಂಕರ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಯುವ ಮುಂಚಿನ ಸಿಸಿಟಿವಿ ಫುಟೇಜ್ ಲಭ್ಯ!

ಏನಿದು ಪ್ರಕರಣ?

ಶಿವಶಂಕರ್ ರೆಡ್ಡಿ ಹಾಗೂ ಬೈರಾ ರೆಡ್ಡಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ದ್ವೇಷ ಹೊಂದಿತ್ತು. ಅದರಂತೆ 17ನೇ ವಯಸ್ಸಿನಲ್ಲಿ ಮೊದಲ ಕೊಲೆ ಮಾಡಿದ್ದ ಶಿವಶಂಕರ್ ರೆಡ್ಡಿ, 18ನೇ ವಯಸ್ಸಿನಲ್ಲಿ ಎರಡನೇ ಕೊಲೆ ಮಾಡಿದ್ದನು. ಬಳಿಕ 23ನೇ ವರ್ಷದಲ್ಲಿ ಮೂರನೇ ಕೊಲೆ ಮಾಡಿದ್ದ. 2021ರಲ್ಲಿ ಶಿವಶಂಕರ್ ವಿರುದ್ಧ ಕೊಲೆ ಯತ್ನ ಪ್ರಕರಣ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಂಡಿನ ಸದ್ದು: ಬಿಲ್ಡರ್ ಹಾಗೂ ಕಟ್ಟಡ ಮಾಲೀಕನ ಮೇಲೆ ಆಂಧ್ರ ಗ್ಯಾಂಗ್​ನಿಂದ ಫೈರಿಂಗ್

ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಶಿವಶಂಕರ್ ರೆಡ್ಡಿ, ಜೈಲಿನಿಂದ ಹೊರಬಂದ ನಂತರ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ. ತನನ್ನು ವಿರೋಧಿ ಗ್ಯಾಂಗ್ ಕೊಲೆ ಮಾಡುವ ಭಯದಿಂದ ಮದನಪಲ್ಲಿಗೆ ಹೆಚ್ಚು ತೆರಳದೆ ಬೆಂಗಳೂರಿನ ಕೆ.ಆರ್.ಪುರದಲ್ಲಿ ನೆಲೆಸಿದ್ದ. ಈತನನ್ನು ಮುಗಿಸಲೆಂದೇ ಆಂಧ್ರದಿಂದ ಬೆಂಗಳೂರಿಗೆ ಬಂದ ಆರೋಪಿಗಳು, ಕೆ.ಆರ್ ಪುರದಲ್ಲಿದ್ದ ಶಿವಶಂಕರ್ ರೆಡ್ಡಿ ಮತ್ತು ಆತನ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿತ್ತು. ಸದ್ಯ ಶಿವಶಂಕರ್ ರೆಡ್ಡಿ ಆತನ ಕಾರು ಚಾಲಕ ಪಾಣಪ್ರಾಯದಿಂದ ಪಾರಾಗಿದ್ದಾರೆ. ಮೂವರನ್ನು ಬಂಧಿಸಿದ ಪೊಲೀಸರು ಹೆಚ್ಚಿನ‌ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Sat, 10 December 22