ರೌಡಿಶೀಟರ್ ಶಿವಶಂಕರ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಯುವ ಮುಂಚಿನ ಸಿಸಿಟಿವಿ ಫುಟೇಜ್ ಲಭ್ಯ!
ಶೂಟೌಟ್ ನಡೆಯುವ ಸ್ವಲ್ಪ ಮುಂಚೆ ಲಭ್ಯವಾಗಿರುವ ಸಿಸಿಟಿವಿ ಫುಟೇಜ್ ನಲ್ಲಿ ಶಿವಶಂಕರ್ ರೆಡ್ಡಿಯ ಬೈಕನ್ನು ಆರೋಪಿಗಳು ಹಿಂಬಾಲಿಸುತ್ತಿರುವುದು ಕಾಣಿಸುತ್ತದೆ.
ಬೆಂಗಳೂರು: ಗುರುವಾರದಂದು ಬೆಂಗಳೂರಿನ ಕೆ ಆರ್ ಪುರಂನಲ್ಲಿ (KR Puram) ನಡೆದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾಗಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ರೌಡಿ ಶೀಟರ್ ಶಿವಶಂಕರ ರೆಡ್ಡಿ (Shiva Shankar Reddy) ಮೇಲೆ ಮೂವರು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಶಿವಶಂಖರ ರೆಡ್ಡಿ ಮತ್ತು ಅವನ ಸಹಚರನನ್ನು (accomplice) ಆಸ್ಪತ್ರೆ ಗೆ ದಾಖಲಿಸಲಾಗಿದೆ. ಶೂಟೌಟ್ ನಡೆಯುವ ಸ್ವಲ್ಪ ಮುಂಚೆ ಲಭ್ಯವಾಗಿರುವ ಸಿಸಿಟಿವಿ ಫುಟೇಜ್ ನಲ್ಲಿ ಶಿವಶಂಕರ್ ರೆಡ್ಡಿಯ ಬೈಕನ್ನು ಆರೋಪಿಗಳು ಹಿಂಬಾಲಿಸುತ್ತಿರುವುದು ಕಾಣಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 10, 2022 12:45 PM
Latest Videos