ಚಾಕೋಲೇಟ್​ನಲ್ಲಿ ಶಾಲಾಮಕ್ಕಳಿಗೆ ಡ್ರಗ್ಸ್​! ಅಂತಾರಾಷ್ಟ್ರೀಯ ದಂಧೆಕೋರ ಸಿಸಿಬಿ ಬಲೆಗೆ

ಬೆಂಗಳೂರು: ಸ್ವರ್ಗ ಸಮಾನವಾಗಿದ್ದ ಸುಂದರ ಬೆಂಗಳೂರಿನಲ್ಲಿ ಯಾಕೋ ಇತ್ತೀಚೆಗೆ ಈ ಡ್ರಗ್ಸ್​ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಅಂತಾರಾಷ್ಟ್ರೀಯ ದಂಧೆಕೋರ ಪೀಡೆ ಜಾಸ್ತಿಯಾಗಿದೆ. ಇದಕ್ಕೆ ಸಿಸಿಬಿಲ್ಲಿರುವ ಖಡಕ್​ ಅಧಿಕಾರಿ ಸಂದೀಪ್​ ಪಾಟೀಲರಂತಹ ಖಡಕ್​ ಅಧಿಕಾರಿಗಳು ಕಡಿವಾಣ ಹಾಕಲೇಬೇಕಿದೆ. ಇತ್ತೀಚೆಗೆ ಏನಾಗಿದೆ ಅಂದ್ರೆ ಕೆನಡಾದಿಂದ ತರಿಸಿ ನಗರದಲ್ಲಿ ಹಶೀಶ್, ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು​ ದಂಧೆಕೋರನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡಾರ್ಕ್ ನೆಟ್ ಮೂಲಕ ವ್ಯವಹಾರ ಮಾಡುತ್ತಿದ್ದ ಅತೀಫ್ ಸಲೀಂನನ್ನು ಸುದ್ದಗುಂಟೆ ಪಾಳ್ಯದಲ್ಲಿ ಅರೆಸ್ಟ್ ಮಾಡಲಾಗಿದೆ. […]

ಚಾಕೋಲೇಟ್​ನಲ್ಲಿ ಶಾಲಾಮಕ್ಕಳಿಗೆ ಡ್ರಗ್ಸ್​! ಅಂತಾರಾಷ್ಟ್ರೀಯ ದಂಧೆಕೋರ ಸಿಸಿಬಿ ಬಲೆಗೆ
ಸಾಧು ಶ್ರೀನಾಥ್​

Updated on: Nov 29, 2019 | 2:43 PM

ಬೆಂಗಳೂರು: ಸ್ವರ್ಗ ಸಮಾನವಾಗಿದ್ದ ಸುಂದರ ಬೆಂಗಳೂರಿನಲ್ಲಿ ಯಾಕೋ ಇತ್ತೀಚೆಗೆ ಈ ಡ್ರಗ್ಸ್​ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಅಂತಾರಾಷ್ಟ್ರೀಯ ದಂಧೆಕೋರ ಪೀಡೆ ಜಾಸ್ತಿಯಾಗಿದೆ. ಇದಕ್ಕೆ ಸಿಸಿಬಿಲ್ಲಿರುವ ಖಡಕ್​ ಅಧಿಕಾರಿ ಸಂದೀಪ್​ ಪಾಟೀಲರಂತಹ ಖಡಕ್​ ಅಧಿಕಾರಿಗಳು ಕಡಿವಾಣ ಹಾಕಲೇಬೇಕಿದೆ. ಇತ್ತೀಚೆಗೆ ಏನಾಗಿದೆ ಅಂದ್ರೆ ಕೆನಡಾದಿಂದ ತರಿಸಿ ನಗರದಲ್ಲಿ ಹಶೀಶ್, ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು​ ದಂಧೆಕೋರನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಡಾರ್ಕ್ ನೆಟ್ ಮೂಲಕ ವ್ಯವಹಾರ ಮಾಡುತ್ತಿದ್ದ ಅತೀಫ್ ಸಲೀಂನನ್ನು ಸುದ್ದಗುಂಟೆ ಪಾಳ್ಯದಲ್ಲಿ ಅರೆಸ್ಟ್ ಮಾಡಲಾಗಿದೆ. ಆರೋಪಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದ. ಚಾಕೋಲೇಟ್ ರೀತಿಯಲ್ಲಿ ಗಾಂಜಾ ಮತ್ತು ಮಾದಕ ವಸ್ತು​ ಅನ್ನು ಬೆರಸಿ ಸ್ಕೂಲ್ ಮಕ್ಕಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಅಮೆಜಾನ್ ಡೆಲಿವರಿ ರೀತಿ ಮಾರಾಟ:
ಒಂದು ಚಾಕೋಲೇಟ್​ಗೆ ಒಂದೂವರೆ ಸಾವಿರ ರೂಪಾಯಿಗೆ ಮಾರಾಟ ಮಾಡ್ತಿದ್ರು. Wickr me ಎಂಬ ಆ್ಯಪ್  ಮೂಲಕ ಆನ್​ಲೈನ್​ನಲ್ಲಿ ಆರ್ಡರ್ ಮಾಡಿ, ಮಾರಾಟ ಮಾಡುತ್ತಿದ್ದರು. ಮಿಲ್ಕ್ ಪೌಡರ್ ಬಾಕ್ಸ್ ಮೂಲಕ ಅಮೆಜಾನ್ ಡೆಲಿವರಿ ರೀತಿಯಲ್ಲಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿತ್ತು. ಸದ್ಯ ಸಿಸಿಬಿ ಪೊಲೀಸರು ಅಂತಾರಾಷ್ಟ್ರೀಯ ಮಾರ್ಕೆಟ್​ನಲ್ಲಿ 1 ಕೋಟಿ ಬೆಲೆ ಬಾಳುವ ಮಾದಕ ವಸ್ತು​ ವಶಪಡಿಸಿಕೊಂಡಿದ್ದಾರೆ.

Published On - 12:22 pm, Fri, 29 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us