ಬೆಂಗಳೂರು: ಬೆಳಗ್ಗೆ ಕೆಲಸಕ್ಕೆ ಸೇರಿದ, ಮಧ್ಯಾಹ್ನ ಮಾಲೀಕನ ಮಗಳನ್ನೆ ಕಿಡ್ನ್ಯಾಪ್ ಮಾಡಿದ!

Bengaluru Crime News: ಕೆಲಸಕ್ಕೆ ಸೇರಿದ ದಿನವೇ ಮಧ್ಯಾಹ್ನದ ವೇಳೆಗೆ ಚಾಕಲೇಟ್ ಕೊಡಿಸ್ತೇನೆಂದು ಮಗುವನ್ನ ಪುಸಲಾಯಿಸಿ ಕರೆದುಕೊಂಡು ವಸೀಂ ಪರಾರಿಯಾಗಿದ್ದಾನೆ ಎಂದು ಶಫೀವುಲ್ಲಾ ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ಶಫೀವುಲ್ಲಾ ಬನಶಂಕರಿ ಪೊಲೀಸ್ ಠಾಣೆಗೆ ಹಾಗೂ ಪೊಲೀಸ್ ಕಮಿಷನರ್ ಬಿ‌.ದಯಾನಂದ್ ಅವರಿಗೆ ದೂರು ನೀಡಿದ್ದಾರೆ.

ಬೆಂಗಳೂರು: ಬೆಳಗ್ಗೆ ಕೆಲಸಕ್ಕೆ ಸೇರಿದ, ಮಧ್ಯಾಹ್ನ ಮಾಲೀಕನ ಮಗಳನ್ನೆ ಕಿಡ್ನ್ಯಾಪ್ ಮಾಡಿದ!
ಸಾಂದರ್ಭಿಕ ಚಿತ್ರ
Edited By:

Updated on: Jan 04, 2024 | 8:43 AM

ಬೆಂಗಳೂರು, ಜನವರಿ 4: ವ್ಯಕ್ತಿಯೊಬ್ಬ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿ ಅದೇ ದಿನ ಮಧ್ಯಾಹ್ನ ಮಾಲೀಕನ 4 ವರ್ಷದ ಮಗಳನ್ನೇ ಅಪಹರಿಸಿಕೊಂಡು (Kidnap Case) ಹೋದ ಘಟನೆ ಬೆಂಗಳೂರಿನ (Bengaluru) ಬನಶಂಕರಿ ಠಾಣೆ (Banashankari Police Station) ವ್ಯಾಪ್ತಿಯ ಕಾವೇರಿಪುರದಲ್ಲಿ ಇತ್ತೀಚೆಗೆ ನಡೆದಿದೆ. ಡಿಸೆಂಬರ್ 28ರಂದು ಆರೋಪಿಯು ಕೃತ್ಯ ಎಸಗಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ವಸೀಂ ಎಂದು ಗುರುತಿಸಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬನಶಂಕರಿ ಠಾಣೆ ವ್ಯಾಪ್ತಿಯ ಕಾವೇರಿಪುರದಲ್ಲಿರುವ ಶಫೀವುಲ್ಲ ಎಂಬುವವರ ಫರ್ನಿಚರ್ ಶಾಪ್​ಗೆ ಆರೋಪಿ ವಸೀಂ ಡಿಸೆಂಬರ್ 28ರ ಬೆಳಗ್ಗೆ ಕೆಲಸಕ್ಕೆ ಸೇರಿದ್ದಾನೆ. ಈ ಹಿಂದೆ ಶಫೀವುಲ್ಲಾರ ಬಳಿ ಕೆಲಸ ಮಾಡಿ ಬಿಟ್ಟುಹೋಗಿದ್ದ ಆರೋಪಿ ವಸೀಂ, ಡಿಸೆಂಬರ್ 28 ರಂದು ಮತ್ತೆ ಬಂದು ಕೆಲಸ ಕೊಡಿ ಎಂದು ಅಂಗಲಾಚಿದ್ದ. ಕಣ್ಣಿರು ಹಾಕಿ ಕೆಲಸ ಕೊಡಿ ಎಂದು ಮನವಿ ಮಾಡಿದ್ದರಿಂದ ಮನಕರಗಿ ಶಫೀವುಲ್ಲಾ ಆತನಿಗೆ ಕೆಲಸ ಕೊಟ್ಟಿದ್ದರು. ಬಳಿಕ ಆತ ಕೆಲಸಕ್ಕೆ ಸೇರಿದ್ದ.

ಕೆಲಸಕ್ಕೆ ಸೇರಿದ ದಿನವೇ ಮಧ್ಯಾಹ್ನದ ವೇಳೆಗೆ ಚಾಕಲೇಟ್ ಕೊಡಿಸ್ತೇನೆಂದು ಮಗುವನ್ನ ಪುಸಲಾಯಿಸಿ ಕರೆದುಕೊಂಡು ವಸೀಂ ಪರಾರಿಯಾಗಿದ್ದಾನೆ ಎಂದು ಶಫೀವುಲ್ಲಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ: ತಿಂಗಳಲ್ಲಿ ಎರಡನೇ ಪ್ರಕರಣ

ಸದ್ಯ ಘಟನೆ ಸಂಬಂಧ ಶಫೀವುಲ್ಲಾ ಬನಶಂಕರಿ ಪೊಲೀಸ್ ಠಾಣೆಗೆ ಹಾಗೂ ಪೊಲೀಸ್ ಕಮಿಷನರ್ ಬಿ‌.ದಯಾನಂದ್ ಅವರಿಗೆ ದೂರು ನೀಡಿದ್ದಾರೆ.

ಶಫೀವುಲ್ಲಾ ಪತ್ನಿಯಿಂದ ವಿಚ್ಛೇದನ ಪಡೆದು ಮಗಳೊಂದಿಗೆ ವಾಸವಾಗಿದ್ದರು. ಸದ್ಯ ಮಗಳನ್ನು ನೆನೆದು ದುಃಖಿತರಾಗಿದ್ದಾರೆ. ಕಿಡ್ನಾಪ್ ಕೇಸ್ ದಾಖಲಿಸಿರುವ ಬನಶಂಕರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ