AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ನ್ಯೂಸ್​: ಶ್ರೀಕಾಂತ್ ಪೂಜಾರಿ ವಿರುದ್ಧದ ಕೇಸ್ ಲಿಸ್ಟ್​​ನಲ್ಲಿ ಟ್ವಿಸ್ಟ್; ಪೊಲೀಸ್ ಕಾರ್ಯವೈಖರಿ ಮೇಲೆ ಸಂಶಯ

ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಬಂಧನದ ವಿಚಾರ ದೊಡ್ಡ ಸುದ್ದಿಯಾಗುತ್ತಿದ್ದಂತೆ ಅಲರ್ಟ್ ಆದ ಸರ್ಕಾರ ಹಾಗೂ ಪೊಲೀಸರು ಶ್ರೀಕಾಂತ್ ವಿರುದ್ಧ ದಾಖಲಾದ ಪ್ರಕರಣಗಳ ಪಟ್ಟಿ ಬಿಡಿಗಡೆ ಮಾಡಿದರು. ಹೀಗೆ ಬಿಡುಗಡೆ ಮಾಡಿದ ಕೇಸ್ ಲಿಸ್ಟ್​ನಲ್ಲಿ‌ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ಕಾರ್ಯವೈಖರಿ ಅನುಮಾನಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ ನ್ಯೂಸ್​: ಶ್ರೀಕಾಂತ್ ಪೂಜಾರಿ ವಿರುದ್ಧದ ಕೇಸ್ ಲಿಸ್ಟ್​​ನಲ್ಲಿ ಟ್ವಿಸ್ಟ್; ಪೊಲೀಸ್ ಕಾರ್ಯವೈಖರಿ ಮೇಲೆ ಸಂಶಯ
ಪೊಲೀಸರ ಕಾರ್ಯವೈಖರಿ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿದ ಪೊಲೀಸರೇ ಬಿಡುಗಡೆ ಮಾಡಿದ ಶ್ರೀಕಾಂತ್ ಪೂಜಾರಿ ವಿರುದ್ಧದ ಕೇಸ್ ಲಿಸ್ಟ್​
ಶಿವಕುಮಾರ್ ಪತ್ತಾರ್
| Updated By: Digi Tech Desk|

Updated on:Jan 04, 2024 | 11:45 AM

Share

ಹುಬ್ಬಳ್ಳಿ, ಜ.4: ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ (Shrikanth Poojari) ಬಂಧನದ ವಿಚಾರ ದೊಡ್ಡ ಸುದ್ದಿಯಾಗುತ್ತಿದ್ದಂತೆ ಅಲರ್ಟ್ ಆದ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸರು ಶ್ರೀಕಾಂತ್ ವಿರುದ್ಧ ದಾಖಲಾದ ಪ್ರಕರಣಗಳ ಪಟ್ಟಿ ಬಿಡಿಗಡೆ ಮಾಡಿದರು. ಹೀಗೆ ಬಿಡುಗಡೆ ಮಾಡಿದ ಕೇಸ್ ಲಿಸ್ಟ್​ನಲ್ಲಿ‌ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ಕಾರ್ಯವೈಖರಿ ಅನುಮಾನಕ್ಕೆ ಕಾರಣವಾಗಿದೆ.

ರಾಮಜನ್ಮಭೂಮಿಗಾಗಿ 1992 ರಲ್ಲಿ ನಡೆದ ಹೋರಾಟದ ವೇಳೆ ನಡೆದ ಗಲಭೆ ‌ವಿಚಾರವಾಗಿ ಶ್ರೀಕಾಂತ್ ಪೂಜಾರಿ ವಿರುದ್ಧ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸದ್ಯ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದ ಜನವರಿ 22 ರಂದು ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ನಡುವೆ ಪ್ರಕರಣವನ್ನು ರೀಓಪನ್ ಮಾಡಿದ ಪೊಲೀಸರು ಶ್ರೀಕಾಂತ್​ನನ್ನು ಬಂಧಿಸಿದ್ದಾರೆ.

ಇದು ಹಿಂದೂ ಸಂಘಟನೆಗಳು ಹಾಗೂ ವಿಪಕ್ಷ ಬಿಜೆಪಿ ಆಕ್ರೋಶಕ್ಕೆ ಕಾರಣವಾಯಿತು. ರಾಮ ಜನ್ಮಭೂಮಿ ಹೋರಾಟಗಾರದ ಬಂಧನ ದೊಡ್ಡಮಟ್ಟದಲ್ಲಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸರು ಅಲರ್ಟ್ ಆದರು. ಅದರಂತೆ ಶ್ರೀಕಾಂತ್ ಪೂಜಾರಿ ಮೇಲಿನ ಕ್ರೈಂ ರೆಕಾರ್ಡ್ ಅನ್ನು ಪೊಲೀಸರು ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: 56000 ಬಾಕಿ ಪ್ರಕರಣ ಬಿಟ್ಟು ಹುಬ್ಬಳ್ಳಿ ಕಡೆ ತಲೆಹಾಕಿದ್ದೇಕೆ: ಕಾಂಗ್ರೆಸ್ ಸರ್ಕಾರಕ್ಕೆ ಆರ್ ಅಶೋಕ ಪ್ರಶ್ನೆ

1992 ರಲ್ಲಿ ಜೈಲಿಗೆ ಹೋಗಿ ಬಂದಿದ್ದ ಶ್ರೀಕಾಂತ್ ಪೂಜಾರಿ ವಿರುದ್ಧ 1994 ರಿಂದ 2014 ವರೆಗೆ ಒಟ್ಟು 12 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಇದರಲ್ಲಿ ಮೂರು ದೊಂಬಿ ಗಲಭೆ ಕೇಸ್, ಎಂಟು ಅಬಕಾರಿ ಕಾಯ್ದೆಯಡಿ ಸಾರಾಯಿ ಮಾರಾಟ ಪ್ರಕರಣ, ಒಂದು ಮಟ್ಕಾ‌ ಜೂಜಾಟ ಪ್ರಕರಣ ಸೇರಿದೆ.

ಆದರೆ, ಪೊಲೀಸರು ಬಿಡುಗಡೆ ಮಾಡಿದ ಈ ಪ್ರಕರಣಗಳ ಪಟ್ಟಿ ಮತ್ತೊಂದು ಟ್ವಿಸ್ಟ್ ನೀಡಿದೆ. ಶ್ರೀಕಾಂತ್ ಪೂಜಾರಿ ಬಂಧನ‌ ದೀರ್ಘ ಕಾಲದ ಬಾಕಿ ಉಳಿಸಿಕೊಂಡ‌ ಪ್ರಕರಣ ಎಂದಿದ್ದ ಪೊಲೀಸರು, ಶ್ರೀಕಾಂತ್ ಪೂಜಾರಿಯನ್ನು ಮೂರು ಬಾರಿ ಠಾಣೆಗೆ ‌ಕರೆಸಿ‌ ಮುಚ್ಚಳಿಕೆ ಕರೆಸಿಕೊಳ್ಳತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಮುಂಜಾಗ್ರತಾ ಕ್ರಮವಾಗಿ 2004, 2009 ಹಾಗೂ 2018 ರಲ್ಲಿ ಶ್ರೀಕಾಂತ್ ಪೂಜಾರಿಯನ್ನ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಯಾವುದ ಪ್ರಕರಣದಲ್ಲಿ ಶ್ರೀಕಾಂತ್ ಪೂಜಾರಿ ತಲೆಮರೆಸಿಕೊಂಡಿರಲಿಲ್ಲ. ಠಾಣೆಗೆ ಹಾಜರಾದಾಗಲೂ ಬಂಧಿಸಿರಲಿಲ್ಲ. ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ತಲೆ‌ ಎತ್ತುತ್ತಿರುವಾಗಲೇ‌ ಬಂಧನ ಮಾಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Thu, 4 January 24

ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್
ಜನರ ಸಮಸ್ಯೆ ಪರಿಹಾರಕ್ಕೆ ಆ್ಯಪ್​: ವಿನೂತನ ಪ್ರಯತ್ನಕ್ಕೆ ಕೈಹಾಕಿದ ಶಾಸಕ
ಜನರ ಸಮಸ್ಯೆ ಪರಿಹಾರಕ್ಕೆ ಆ್ಯಪ್​: ವಿನೂತನ ಪ್ರಯತ್ನಕ್ಕೆ ಕೈಹಾಕಿದ ಶಾಸಕ
ಭೀಮಾ ನದಿಯಲ್ಲಿ ಭಾರೀ ಪ್ರವಾಹ: 2 ದೇಗುಲಗಳು ಸಂಪೂರ್ಣ‌ ಮುಳುಗಡೆ
ಭೀಮಾ ನದಿಯಲ್ಲಿ ಭಾರೀ ಪ್ರವಾಹ: 2 ದೇಗುಲಗಳು ಸಂಪೂರ್ಣ‌ ಮುಳುಗಡೆ