ಆನೇಕಲ್​: ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

| Updated By: ರಮೇಶ್ ಬಿ. ಜವಳಗೇರಾ

Updated on: Feb 25, 2024 | 5:15 PM

2017ರಲ್ಲಿ ನಡೆದಿದ್ದ ಮನೋಜ್ ಅಲಿಯಾಸ್​ ಬಬ್ಲು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಐದು ವರ್ಷ ಜೈಲಿನಲ್ಲಿದ್ದನು. ಇತ್ತೀಚಿಗೆ 7-8 ತಿಂಗಳ ಹಿಂದೆ ಬಿಡುಗಡೆಯಾಗಿ ಹೊರಗೆ ಬಂದಿದ್ದನು. ಪ್ರತಿಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಕೊಲೆಯಾದ ಮನೋಜ್​ ಸಹಚರರು ಇಂದು (ಫೆ.24) ವಿಜಯ ಕುಮಾರ್​ನನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆನೇಕಲ್​: ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಕೊಲೆಯಾದ ವಿಜಯ್ ಕುಮಾರ್
Follow us on

ಆನೇಕಲ್​, ಫೆಬ್ರವರಿ 25: ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಮರಸೂರು ಗ್ರಾಮದಲ್ಲಿ ನಡೆದಿದೆ. ವಿಜಯ್ ಕುಮಾರ್ (27) ಕೊಲೆಯಾದ ಯುವಕ. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 2017ರಲ್ಲಿ ನಡೆದಿದ್ದ ಮನೋಜ್ ಅಲಿಯಾಸ್​ ಬಬ್ಲು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಐದು ವರ್ಷ ಜೈಲಿನಲ್ಲಿದ್ದನು. ಇತ್ತೀಚಿಗೆ 7-8 ತಿಂಗಳ ಹಿಂದೆ ಬಿಡುಗಡೆಯಾಗಿ ಹೊರಗೆ ಬಂದಿದ್ದನು. ಪ್ರತಿಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಕೊಲೆಯಾದ ಮನೋಜ್​ ಸಹಚರರು, ಇಂದು (ಫೆ.25) ನಸುಕಿನ ಜಾವ 4 ಗಂಟೆ ಸುಮಾರಿಗೆ, ವಿಜಯ ಕುಮಾರ್​ನನ್ನು ಕರೆದೊಯ್ದು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ತನ್ನ ಮಗನನ್ನು ಮನೋಜ್ ಕುಮಾರ್ ಸಹೋದರ ಅರ್ಜುನ್ ಕೊಲೆ ಮಾಡಿದ್ದಾನೆಂದು ವಿಜಯ್ ಕುಮಾರ್​ ತಂದೆ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್​ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಹೆಂಡ್ತಿ ಜತೆ ಮಲಗಿದ್ದಾಗಲೇ ರೌಡಿಶೀಟರ್ ಹತ್ಯೆ: ಪರಪ್ಪನ ಅಗ್ರಹಾರ ಜೈಲಲೇ ರೂಪಿಸಲಾಗಿತ್ತು ಕೊಲೆ ಸಂಚು

ಬಿಟೆಕ್ ವಿದ್ಯಾರ್ಥಿ ಶವವಾಗಿ ಪತ್ತೆ

ಆನೇಕಲ್​ ತಾಲೂಕಿನ ತೆಲಗರಹಳ್ಳಿ ಗ್ರಾಮದ ಬಳಿಯ ನೀಲಗಿರಿ ತೋಪಿನಲ್ಲಿ ಕಾಣೆಯಾಗಿದ್ದ ತಮಿಳುನಾಡು ಮೂಲದ ಬಿಟೆಕ್ ವಿದ್ಯಾರ್ಥಿಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿ ಹರ್ಷಿತ್​ ಕೊಟ್ನಾಲಾ (22) ಮೃತ ದುರ್ದೈವಿ.

ಹರ್ಷಿತ್​ ಕೊಟ್ನಾಲಾ ತಮಿಳುನಾಡಿನ ಗುಮ್ಮಳಾಪುರದ ಅಲಯನ್ಸ್​​ ವಿವಿಯ ಬಿಟೆಕ್ ವಿದ್ಯಾರ್ಥಿಯಾಗಿದ್ದು, ಫೆ.21ರಂದು ವಿವಿ ಹಾಸ್ಟೆಲ್​ನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತಮಿಳುನಾಡಿನ ತಳಿ‌ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸ್ಥಳಕ್ಕೆ ಆನೇಕಲ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:10 am, Sun, 25 February 24