Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ರೋರಾ ಥಾಯ್ ಸ್ಪಾ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ

ಬೆಂಗಳೂರಿನ ರೋರಾ ಥಾಯ್ ಸ್ಪಾ (ಮಸಾಜ್​ ಪಾರ್ಲರ್​) ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಆರೋಪಿಗಳು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಸದ್ಯ ವಿಚಾರ ಬೆಳಕಿಗೆ ಬಂದಿದ್ದು, ಪೊಲೀಸರು ದಾಳಿ ಮಾಡಿದ್ದಾರೆ.

ಬೆಂಗಳೂರಿನ ರೋರಾ ಥಾಯ್ ಸ್ಪಾ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ
ಸಾಂದರ್ಭಿಕ ಚಿತ್ರ
Follow us
Shivaprasad
| Updated By: ವಿವೇಕ ಬಿರಾದಾರ

Updated on: Feb 25, 2024 | 11:20 AM

ಬೆಂಗಳೂರು, ಫೆಬ್ರವರಿ 25: ನಗರದ ಥಾಯ್ ಸ್ಪಾ ಹೆಸರಿನ ವೇಶ್ಯಾವಾಟಿಕೆ ಅಡ್ಡೆ ಮೇಲೆ ಯಲಹಂಕ ನ್ಯೂಟೌನ್ ಪೊಲೀಸರು (Police) ದಾಳಿ ಮಾಡಿದ್ದು, ಆಂಜನೇಯಗೌಡ, ಹರೀಶ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು ಏಳು ಜನ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ರೋರಾ ಲಕ್ಸುರಿ ಥಾಯ್ ಸ್ಪಾ (ಮಸಾಜ್​ ಪಾರ್ಲರ್​) ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ (Prostitution racket) ನಡೆಸುತ್ತಿದ್ದರು. ಆರೋಪಿಗಳು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಈ ವಿಚಾರ ತಿಳಿದ ಈಶಾನ್ಯ ವಿಭಾಗದ ಡಿಸಿಪಿ, ಯಲಹಂಕ ನ್ಯೂಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟಿ ಕೋಟಿ ಹಣದಾಸೆಗೆ ವೇಶ್ಯಾವಾಟಿಕೆ ಆರಂಭಿಸಿದ ಟೆಕ್ಕಿ

ಒಂದೂವರೆ ಲಕ್ಷ ಸಂಬಳದ ಕೆಲಸದಲ್ಲಿದ್ದ ಟೆಕ್ಕಿ ಹಣದ ದಾಹಕ್ಕೆ ಬಿದ್ದು ಸ್ಟಾಕ್ ಮಾರ್ಕೆಟ್​ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ಲಕ್ಷಲಕ್ಷ ಸಾಲವನ್ನು ಮಾಡಿದ್ದನು. ಆದರೆ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದ ಈತ ಕೆಲಸಕ್ಕೆ ಗುಡ್​ಬೈ ಹೇಳಿ ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿ ಮಾಡಿ ಹಣ ಸಂಪಾದಿಸುತ್ತಿದ್ದನು. ನಂತರ ಕೋಟ್ಯಾಂತರ ರೂಪಾಯಿ ಸಂಪಾದಿಸುಲು ಈ ಟೆಕ್ಕಿ ವೇಶ್ಯಾವಾಟಿಕೆ ದಂಧೆಯ ಹಾದಿ ಹಿಡಿದ್ದನು.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ವೈಶಾಕ್​ಗೆ ವೇತನಕ್ಕೇನು ಕೊರತೆ ಇರಲಿಲ್ಲ. ತಿಂಗಳಿಗೆ ಒಂದೂವರೆ ಲಕ್ಷರೂಪಾಯಿ ಸಂಬಳ ಪಡೆಯುತ್ತಿದ್ದನು. ಹೈಟೆಕ್ ಲೈಫ್​ ಸಾಗಿಸುತ್ತಿದ್ದನು. ಆದರೆ ಸ್ಟಾಕ್ ಮಾರ್ಕೆಟ್ ಹುಚ್ಚಿಗೆ ಬಿದ್ದ ವೈಶಾಕ್ ಅದರಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದನು. ಅಲ್ಲದೆ, ಲಕ್ಷ ಲಕ್ಷ ಸಾಲ ಮಾಡಿದ್ದನು.

ಟೆಕ್ನಾಲಜಿಯಲ್ಲಿ ತಂತ್ರಾಜ್ಞಾನದಲ್ಲಿ ಜ್ಞಾನ ಹೊಂದಿದ್ದ ವೈಶಾಕ್, ಉತ್ತಮ ವೇತನದ ಕಲಸ ಬಿಟ್ಟು ತಲೆ ಕೆಡಿಸಿಕೊಂಡಿದ್ದನು. ನಂತರ ಹಣ ಸಂಪಾದಿಸಲು ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿಪಡಿಸಿ ಅದರಲ್ಲಿ ವಿವಾಹವಾಗಲು ಇಚ್ಚಿಸುತ್ತಿರುವ ಯುವಕ-ಯುವತಿಯರನ್ನ ಆ್ಯಡ್ ಮಾಡಿ ಸಂಪರ್ಕ ಕಲ್ಪಿಸುತ್ತಿದ್ದನು. ಇಬ್ಬರಿಗೂ ಪರಸ್ಪರ ಕಾಂಟ್ಯಾಕ್ಟ್ ಮಾಡಿಸಲು ಹಣ ಪಡೆಯುತ್ತಿದ್ದನು. ಹೀಗೆ ಉತ್ತಮ ರೀತಿಯಲ್ಲಿ ಬ್ಯುಸಿನೆಸ್ ಸಾಗುತ್ತಿದ್ದಂತೆ ಬಿಟೆಕ್ ಮುಗಿಸಿದ್ದ ಗೋವಿಂದರಾಜು ಎಂಬಾತ ಈ ಆ್ಯಪ್​ಗೆ ಎಂಟ್ರಿಕೊಟ್ಟಿದ್ದನು. ಆ್ಯಪ್​ನ ಪ್ರೈವಸಿ ವರ್ಕ್ ನೋಡಿ ಶಾಕ್ ಆಗಿದ್ದ ಗೋವಿಂದರಾಜು, ವೈಶಾಕ್​ನನ್ನು ಸಂಪರ್ಕಿಸಿ ಮ್ಯಾಟ್ರಿಮೋನಿ ಕೆಲಸದ ಬದಲು ವೇಶ್ಯಾವಾಟಿಕೆ ದಂಧೆ ನಡೆಸುವಂತೆ ಖತರ್ನಾಕ್ ಐಡಿಯಾ ಕೊಟ್ಟಿದ್ದನು.

ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ; ಯುವತಿ ರಕ್ಷಣೆ

ಅಲ್ಲದೆ, ವಿದೇಶಿ ಮಹಿಳೆಯರಿಗೆ ಸಖತ್ ಡಿಮ್ಯಾಂಡ್ ಇದೆ, ಕೋಟಿ ಕೋಟಿ ಹಣ ಮಾಡಬಹುದು ಎಂದು ಮೈಂಡ್ ವಾಶ್ ಮಾಡಿದ್ದನು. ಅದಾಗಲೇ ಗೋವಿಂದರಾಜು ವಿದೇಶಿ ಪಿಂಪ್ ಜೊತೆ ಸಂಪರ್ದದಲ್ಲಿದ್ದನು. ಆಕೆಯಿಂದ ವಿದೇಶಿ ಯುವತಿಯರು ಸಿಗುತ್ತಾರೆ. ನೀನು ಕಾಂಟೆಕ್ಟ್​​ನಲ್ಲಿ ಗ್ರಾಹಕರನ್ನು ಹುಡುಕು ಎಂದು ವೈಶಾಕ್​ಗೆ ಹೇಳಿದ್ದನು. ಕೋಟಿಕೋಟಿ ಹಣ ಸಂಪಾದಿಸಲು ದಂಧೆಗೆ ಇಳಿದ ವೈಶಾಗ್​ಗೆ ಗೋವಿಂದರಾಜು ಆತನ ಆ್ಯಪ್​ನಲ್ಲಿದ್ದ ಕೆಲವು ಕಸ್ಟಮರ್​ಗಳನ್ನು ಹುಡುಕಿ ಕೊಡುತ್ತಿದ್ದನು. ದಿನ ಕಳೆದಂತೆ ಈ ದಂಧೆಯಿಂದ ಹೆಚ್ಚಿನ ಹಣ ಬರುವುದನ್ನು ನೋಡಿದ ವೈಶಾಕ್, ಇತರೆ ಇಬ್ಬರೊಂದಿಗೆ ಸೇರಿಕೊಂಡು ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನು.

ರಷ್ಯಾ, ಖಜಕಿಸ್ತಾನ ಸೇರಿ ಬೇರೆ ಬೇರೆ ದೇಶಗಳಿಂದ ಯುವತಿಯರನ್ನು ಕರೆಸುತ್ತಿದ್ದರು. ಈ ವಿಚಾರ ತಿಳಿದ ಬೆಂಗಳೂರು ನಗರದ ಬಯ್ಯಪ್ಪನಹಳ್ಳಿ ಠಾಣಾ ಪೊಲೀಸರು, ಆರೋಪಿಗಳಾದ ವಿದೇಶಿ ಮಹಿಳೆ​, ಗೋವಿಂದರಾಜು ಹಾಗೂ ವೈಶಾಕ್​ನನ್ನ ಬಂಧಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್