Bengaluru News: ಬನಶಂಕರಿ 6ನೇ ಹಂತ ರಸ್ತೆಯಲ್ಲಿ ವೀಲಿಂಗ್ ಸಾಹಸ ಮಾಡಿದ ಬಾಲಕ ಅರೆಸ್ಟ್

|

Updated on: May 23, 2023 | 6:54 PM

ರಸ್ತೆಯಲ್ಲಿ ವೀಲಿಂಗ್ ಮತ್ತು ಬೈಕ್ ಸ್ಟಂಟ್ ಮಾಡಿದ ಹದಿಹರೆಯದ ಬಾಲಕನೊಬ್ಬನನ್ನು ಬೆಂಗಳೂರು ಸಂಚಾರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Bengaluru News: ಬನಶಂಕರಿ 6ನೇ ಹಂತ ರಸ್ತೆಯಲ್ಲಿ ವೀಲಿಂಗ್ ಸಾಹಸ ಮಾಡಿದ ಬಾಲಕ ಅರೆಸ್ಟ್
ಬನಶಂಕರಿ 6ನೇ ಹಂತ ರಸ್ತೆಯಲ್ಲಿ ವೀಲಿಂಗ್ ಸಾಹಸ ಮಾಡಿದ ಬಾಲಕ ಅರೆಸ್ಟ್
Follow us on

ಬೆಂಗಳೂರು: ರಸ್ತೆಯಲ್ಲಿ ವೀಲಿಂಗ್ ಮತ್ತು ಬೈಕ್ ಸ್ಟಂಟ್ (Wheelie and Bike stunts) ಮಾಡಿದ ಹದಿಹರೆಯದ ಬಾಲಕನೊಬ್ಬನನ್ನು ಬೆಂಗಳೂರು ಸಂಚಾರ ಪೊಲೀಸರು (Bengaluru traffic police) ಮಂಗಳವಾರ ಬಂಧಿಸಿದ್ದಾರೆ. ಬನಶಂಕರಿ 6ನೇ ಹಂತದ ರಸ್ತೆಯಲ್ಲಿ ಬಾಲಕ ಬೈಕ್ ಸ್ಟಂಟ್ ಮಾಡುತ್ತಿರುವ ವಿಡಿಯೋವನ್ನು ಪ್ರಯಾಣಿಕರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ‘ಐ ಚೇಂಜ್ ಹೆಮ್ಮಿಗೆಪುರ’ ಎಂಬ ಟ್ವಿಟರ್​​ ಹ್ಯಾಂಡಲ್​​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಬೈಕ್ ಸ್ಟಂಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು.

ಅದರಂತೆ, ಕ್ರಮ ಕೈಗೊಂಡಿರುವ ತಲಘಟ್ಟಪುರ ಸಂಚಾರಿ ಪೊಲೀಸರು ವಿಡಿಯೋದಲ್ಲಿ ಕಾಣಿಸಿದ್ದ ವ್ಯಕ್ತಿಯನ್ನು ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕರು ಮತ್ತು ವಾಹನ ಸವಾರನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ’ ಎಂದು . ‘ಐ ಚೇಂಜ್ ಹೆಮ್ಮಿಗೆಪುರ’ ಟ್ವಿಟರ್​​ ಹ್ಯಾಂಡಲ್​ನ ಟ್ವೀಟ್​ಗೆ ತಲಘಟ್ಟಪುರ ಸಂಚಾರಿ ಪೊಲೀಸ್​ ಟ್ವಿಟರ್​ ಹ್ಯಾಂಡಲ್​ನಿಂದ ಪ್ರತಿಕ್ರಿಯಿಸಲಾಗಿದೆ.


ಇದನ್ನೂ ಓದಿ: Bangalore news: ಮೋಜು ಮಸ್ತಿಗಾಗಿ ಬೆಂಗಳೂರು, ತಮಿಳುನಾಡಿನಲ್ಲಿ ಬೈಕ್ ಕಳವು ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಬೈಕ್ ಸ್ಟಂಟ್‌ಗಳ ಹಾವಳಿ ಹೆಚ್ಚುತ್ತಿರುವುದು ಇತ್ತೀಚೆಗೆ ಕಂಡುಬಂದಿದೆ. ವೀಲಿಂಗ್ ಮಾಡಿದ ಎರಡು ಘಟನೆಗಳು ಏಪ್ರಿಲ್‌ನಲ್ಲಿ ವರದಿಯಾಗಿದೆ. ಈ ಎರಡೂ ಘಟನೆಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ