ಡಂಬಲ್ಸ್ನಿಂದ ಹೊಡೆದು ಪತ್ನಿಯ ಕೊಂದ ಪತಿ; ಹತ್ಯೆಗೂ ಮುನ್ನ ಪೊಲೀಸರಿಗೆ ಕರೆ ಮಾಡಿದ ಪತಿ
ಡಂಬಲ್ಸ್ನಿಂದ ಹೊಡೆದ ಪತಿಯಿಂದ ಪತ್ನಿ ಲಿದಿಯಾ ಹತ್ಯೆ ಪ್ರಕರಣ ಸಂಬಂಧ ಹೇಳಿಕೆ ನೀಡಿದ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಲಾಟೆ ನಡೆಯುತ್ತಿದೆ ಎಂದು ಕರೆ ಬಂದಿತ್ತು. ಹೊಯ್ಸಳ ಸಿಬ್ಬಂದಿ ಮನೆಗೆ ತೆರಳಿ ಪರಿಶೀಲಿಸಿದಾಗ ಶವ ಕಂಡಿದೆ ಎಂದಿದ್ದಾರೆ.
ಬೆಂಗಳೂರು: ಸಾರ್ ನಮ್ಮ ಮನೆಯಲ್ಲಿ ಕೌಟುಂಬಿಕ ಕಲಹ (Family dispute) ಏರ್ಪಟ್ಟಿದೆ, ದಯವಿಟ್ಟು ಬನ್ನಿ ಎಂದು ಪೊಲೀಸರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾನೆ. ಅದರಂತೆ ಮನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರು ದೌಡಾಯಿಸಿ ನೋಡಿದಾಗ ಗೃಹಿಣಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವುದನ್ನು (Husband Kills Wife) ನೋಡಿ ಶಾಕ್ ಆಗಿದ್ದಾರೆ. ಹೌದು, ಈ ಘಟನೆ ನಡೆದಿರುವುದು ಹೊಯ್ಸಳನಗರದಲ್ಲಿ. ಮಕ್ಕಳು ಶಾಲೆಗೆ ಹೋದ ನಂತರ ದಂಪತಿ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದೆ. ಇಬ್ಬರ ನಡುವೆ ಆರಂಭವಾದ ವಾಗ್ವಾದ ಬಳಿಕ ತಾರಕಕ್ಕೇರಿದೆ. ಪರಿಣಾಮ ಕೋಪಗೊಂಡ ಪತಿ ಡಂಬಲ್ಸ್ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಇನ್ನು, ಘಟನೆ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್, ಬೆಳಗ್ಗೆ 10.30ಕ್ಕೆ ಹೊಯ್ಸಳನಗರದಿಂದ ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಗಲಾಟೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕೂಡಲೇ ಹೊಯ್ಸಳ ಸಿಬ್ಬಂದಿ ಮನೆಗೆ ತೆರಳಿ ಪರಿಶೀಲಿಸಿದಾಗ ಶವ ಕಂಡಿದೆ ಎಂದಿದ್ದಾರೆ. ಹತ್ಯೆಯಾಗಿರುವ ಮಹಿಳೆ ಲಿದಿಯಾಗೆ ಮೂವರು ಮಕ್ಕಳಿದ್ದಾರೆ. ಮಕ್ಕಳು ಶಾಲೆಗೆ ತೆರಳಿದ ನಂತರ ಮನೆಯಲ್ಲಿ ಜಗಳವಾಗಿ ಹತ್ಯೆ ಮಾಡಲಾಗಿದೆ. ಮನೆಯಲ್ಲೇ ಇದ್ದ ಡಂಬಲ್ಸ್ನಿಂದ ಹೊಡೆದು ಈ ಕೃತ್ಯ ಎಸಗಲಾಗಿದೆ. ಸದ್ಯ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ಮುಳುಗಿ ಸಾವು
ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ನಡೆದಿದೆ. ಮಣಿಕಂಠ (14), ಹರ್ಷವರ್ಧನ (9) ಸಾವನ್ನಪ್ಪಿದ ಬಾಲಕರು. ಅಂಬಾದೇವಿ ಜಾತ್ರೆಗೆ ಬಂದಿದ್ದ ಚೌಡಿಕಿ ಕುಟುಂಬದ ಮೂವರು ಮಕ್ಕಳು ಬಹಿರ್ದೆಸೆಗೆ ತೆರಳಿದ್ದರು. ಈ ವೇಳೆ ಇಬ್ಬರು ಮಣಿಕಂಠ ಮತ್ತು ಹರ್ಷವರ್ಧನ ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದರೆ ಮತ್ತೋರ್ವ ಬಾಲ ಅಪಾಯದಿಂದ ಪಾರಾಗಿದ್ದಾನೆ. ಸಾವನ್ನಪ್ಪಿದವರಲ್ಲಿ ಓರ್ವ ಬಾಲಕ ಹಿರಿಯನಾಗಿದ್ದು, ಮತ್ತೋರ್ವ ಕಿರಿಯವನಾಗಿದ್ದಾನೆ. ಪ್ರಾಣಾಪಾಯದಿಂದ ಪಾರಾದ ಬಾಲಕ ಮಧ್ಯದವನಾಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Thu, 2 February 23