ಹೊಸ ವರ್ಷಾಚರಣೆಗೆ ನಶೆ ಏರಿಸಲು 100 ಕೋಟಿ ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಸಪ್ಲೈ! ಸ್ಪೆಷಲ್ ಡ್ರೈವ್​​ಗೆ ಸಜ್ಜಾದ ನಗರ ಪೊಲೀಸರು

| Updated By: Digi Tech Desk

Updated on: Dec 14, 2023 | 5:04 PM

ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಸಜ್ಜಾಗುತ್ತಿದ್ದು, ಪಬ್​ಗಳು ಭರ್ಜರಿ ತಯಾರಿ ಆರಂಭಿಸಿವೆ. ನಗರವಾಸಿಗಳು ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗುತ್ತಿರುವ ನಡುವೆ ನಶೆ ಏರಿಸಲು ಬೆಂಗಳೂರಿಗೆ ಬರೋಬ್ಬರಿ 100 ಕೋಟಿ ಮೌಲ್ಯದ ಡ್ರಗ್ಸ್​ ಪೂರೈಕೆ ಮಾಡಲಾಗುತ್ತಿದೆ ಎಂಬ ಅಂಶ ನಗರ ಪೊಲೋಸರಿಗೆ ಮಾಹಿತಿ ತಿಳಿದುಬಂದಿದ್ದು, ಸ್ಪೆಷಲ್ ಡ್ರೈವ್ ನಡೆಸಲು ಸಜ್ಜಾಗಿದ್ದಾರೆ.

ಹೊಸ ವರ್ಷಾಚರಣೆಗೆ ನಶೆ ಏರಿಸಲು 100 ಕೋಟಿ ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಸಪ್ಲೈ! ಸ್ಪೆಷಲ್ ಡ್ರೈವ್​​ಗೆ ಸಜ್ಜಾದ ನಗರ ಪೊಲೀಸರು
ಹೊಸ ವರ್ಷಾಚರಣೆಗೆ ನಶೆ ಏರಿಸಲು ಬೆಂಗಳೂರಿಗೆ ಪೂರೈಕೆಯಾಗುತ್ತಿದೆ 100 ಕೋಟಿ ಮೌಲ್ಯದ ಡ್ರಗ್ಸ್! (ಸಾಂದರ್ಭಿಕ ಚಿತ್ರ)
Image Credit source: Shutterstock
Follow us on

ಬೆಂಗಳೂರು, ಡಿ.14: ಸನೀಹದಲ್ಲಿರುವ ಹೊಸ ವರ್ಷ 2024 ಅನ್ನು ಸ್ವಾಗತಿಸಲು ಜನರು ಕಾತರರಾಗಿದ್ದಾರೆ. ಬೆಂಗಳೂರಿನಲ್ಲಿ (Bengaluru) ಹೊಸ ವರ್ಷಾಚರಣೆಯಲ್ಲಿ (New Year 2024) ಮೋಜು ಮಸ್ತಿ ಜೋರಾಗಿಯೇ ಇರುತ್ತದೆ. ಈ ನಡುವೆ ಯುವ ಜನತೆಯನ್ನು ಗುರಿಯಾಗಿಸಿ ಅದರಲ್ಲೂ ದೊಡ್ಡವರ ಮಕ್ಕಳಿಗೆ ನಶೆ ಏರಿಸಲು ನಗರಕ್ಕೆ ಬರೋಬ್ಬರಿ 100 ಕೋಟಿ ಮೌಲ್ಯದ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದ್ದು, ಪೊಲೀಸರು ಸ್ಪೆಷಲ್ ಡ್ರೈವ್ ನಡೆಸಲು ಸಜ್ಜಾಗಿದ್ದಾರೆ.

ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು, ಕತ್ತಲ ಲೋಕದ ಮತ್ತೇರಿಸಲು ಮಾದಕಲೋಕ ಕೂಡ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್​ಗೆ ಭಾರೀ ಬೇಡಿಕೆ ಇರುವ ಹಿನ್ನೆಲೆ ನಗರಕ್ಕೆ 100 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸಾಗಿಸಲು ಪ್ಲ್ಯಾನ್ ಮಾಡಲಾಗಿದೆ. ಸಂಘಟಿತ ವಿದೇಶಿ ಗುಂಪುಗಳು ಡ್ರಗ್ ಡಿಲೀಂಗ್ ನಡೆಸುತ್ತಿದ್ದು, ಏಳೆಂಟು ಗುಂಪುಗಳಿಂದ ನೂರಾರು ಕೋಟಿ ಮೌಲ್ಯದ ಡ್ರಗ್ ಸಾಗಿಸಲಾಗುತ್ತಿದೆ.

ಇದನ್ನೂ ಓದಿ: ಹೊಸ ವರ್ಷ ಹೊಸ್ತಿಲಲ್ಲಿ ಹೆಚ್ಚಾದ ಡ್ರಗ್ಸ್ ದಂಧೆ; ಪೊಲೀಸ್ ಆಯುಕ್ತರಿಂದ ಸಿಟಿ ಪೊಲೀಸರಿಗೆ ಹೊಸ ಟಾಸ್ಕ್

ನಗರದ ಹೊರವಲಯದ ವಿಲಾ, ಫಾರ್ಮ್ಸ್, ಐಷಾರಾಮಿ ಹೋಟೆಲ್​ಗಳನ್ನು ಡ್ರಗ್ ಪೆಡ್ಲರ್​ಗಳು ಟಾರ್ಗೆಟ್ ಮಾಡಿದ್ದು, ಹೊಸ ವರ್ಷಕ್ಕೆ 10 ದಿನಗಳ ಬಾಕಿ ಇರುವಂತೆ ದೊಡ್ಡವರ ಮಕ್ಕಳ ಮೋಜಿಗೆ ಡ್ರಗ್ಸ್ ಸರಬರಾಜು ಆಗಲಿದೆ. ಹೊರ ರಾಜ್ಯಗಳಿಂದಲೂ ಒಂದುಷ್ಟು ಜನರು ಮತ್ತೇರಿಸಲು ನಗರಕ್ಕೆ ಆಗಮಿಸುತ್ತಿದ್ದಾರೆ. ವಿದೇಶದಿಂದಲೂ ಬರುವ ಮಂದಿಗೂ ಬೆಂಗಳೂರಿನಲ್ಲಿ ಸಿಗುವ ಡ್ರಗ್ ಹಾಟ್ ಫೇವರೇಟ್ ಆಗಿದೆ.

ನಗರಕ್ಕೆ ಹಲವು ಮಾದರಿಯಲ್ಲಿ ಡ್ರಗ್ಸ್ ಪೂರೈಕೆ ಮಾಡಲು ಡ್ರಗ್ಸ್ ಪೆಡ್ಲರ್​ಗಳು ಪ್ಲ್ಯಾನ್ ಮಾಡಿಕೊಂಡರೆ, ಇತ್ತ ನಗರ ಪೊಲೀಸರು ನಗರದಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರವಾಸ, ವಿದ್ಯಾಭ್ಯಾಸ, ಉದ್ಯಮದ ಹೆಸರಲ್ಲಿ ವೀಸಾ ಪಡೆದು ಬಂದ ಪೆಡ್ಲರ್​ಗಳು ಕೊರಿಯರ್, ಬೈರೋಡ್ ಮೂಲಕ ಅಕ್ರಮವಾಗಿ ಡ್ರಗ್ ಸರಬರಾಜು ಮಾಡುತ್ತಿದ್ದಾರೆ. ಹೀಗೆ ಬಂದ ಡ್ರಗ್ಸ್​​ ಸೀಕ್ರೇಟ್ ಟಾಸ್ಕ್​​ ಮೂಲಕ ಗಣ್ಯರ ಮಕ್ಕಳು ಕೂಡ ಭಾಗಿಯಾಗಲಿರುವ ಡ್ರಗ್ಸ್ ಪಾರ್ಟಿಗಳಲ್ಲಿ ಗ್ರಾಹಕರಿಗೆ ಡೆಲಿವರಿ ಮಾಡಲಾಗುತ್ತದೆ.

ಇದನ್ನೂ ಓದಿ: ಹೊಸ ವರ್ಷಕ್ಕೆಂದು ಮಾರಾಟಕ್ಕೆ ಡ್ರಗ್ಸ್ ತಂದಿದ್ದ ಆಫ್ರಿಕಾ ಮೂಲದ ಆರೋಪಿ ಬಂಧನ, 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಡ್ರಗ್ಸ್ ಪಾರ್ಟಿಗೆ ಬ್ರೇಕ್ ಹಾಕಲು ಪೊಲೀಸ್ ಆಯುಕ್ತರ ಸೂಚನೆ

ಡ್ರಗ್ಸ್ ಪಾರ್ಟಿಗೆ ಬ್ರೇಕ್ ಹಾಕಲು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಭೆ ನಡೆಸಿದ ಅವರು, ಡ್ರಗ್ ವಿರುದ್ಧ ಸ್ಪೆಷಲ್ ಡ್ರೈವ್​​ ನಡೆಸುವಂತೆ ಸೂಚಿಸಿದ್ದಾರೆ. ಅದರಂತೆ, ಮಾದಕ ಲೋಕವನ್ನು ಮಟ್ಟಹಾಕಲು ಪೊಲೀಸರು ಸಜ್ಜಾಗುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Thu, 14 December 23