ಬೆಂಗಳೂರು, ನವೆಂಬರ್ 9: ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ನನ್ನು (rowdy sheeter) ಬರ್ಬರ ಹತ್ಯೆ ಮಾಡಿ ಆರು ದುಷ್ಕರ್ಮಿಗಳು ಪರಾರಿ ಆಗಿರುವಂತಹ ಘಟನೆ ಚುಂಚನಘಟ್ಟ ಮುಖ್ಯರಸ್ತೆಯಲ್ಲಿ ರಾತ್ರಿ 9.30ರ ಸುಮಾರಿಗೆ ನಡೆದಿದೆ. ಕೋಣನಕುಂಟೆ ಠಾಣಾ ವ್ಯಾಪ್ತಿಯ ಸಹದೇವ್ ಮೃತ ರೌಡಿಶೀಟರ್. ಟೀ ಕುಡಿಯಲು ಬೇಕರಿ ಬಳಿ ಬಂದಿದ್ದಾಗ ಮೂರು ಬೈಕ್ಗಳಲ್ಲಿ ಬಂದಿದ್ದ 6 ದುಷ್ಕರ್ಮಿಗಳ ಗ್ಯಾಂಗ್ನಿಂದ ಸಹದೇವ್ ಮೇಲೆ ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಕೊಲೆಯಾದ ಸಹದೇವ್ ಪತ್ನಿ ಸೌಮ್ಯ ಹೇಳಿಕೆ ನೀಡಿದ್ದು, 9 ಗಂಟೆಗೆ ವಿಚಾರ ಗೊತ್ತಾಯ್ತು. ನನ್ನ ಗಂಡ ಸಂಜೆ ಮನೆಯಿಂದ ಹೊರಟರು. ಸುಮಾರು 10 ಗಂಟೆಯಾದರು ಬರಲಿಲ್ಲ. ಪೊಲೀಸರು ಫೋನ್ ಮಾಡಿ ವಿಚಾರ ತಿಳಿಸಿದರು. ಮದುವೆ ಆಗಿ ಮೂರು ವರ್ಷದಿಂದ ಇಲ್ಲೇ ಇದ್ದೀವಿ. ಒಂಭತ್ತು ಗಂಟೆಗೆ ಬಂದು ಹತ್ಯೆ ಮಾಡಿದ್ದಾರೆ. ಐದು ಜನ ಬಂದು ಅಟ್ಯಾಕ್ ಮಾಡಿದ್ದಾರೆ. ಗಾಡಿನಲ್ಲಿ ಬಂದು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆನೇಕಲ್: ಬೆಂಗಳೂರು ಹೊರವಲಯ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುಗಳೂರಿನಲ್ಲಿ ಕಳೆದೊಂದು ವಾರದ ಹಿಂದೆ ಮೃತದೇಹವೊಂದು ಪತ್ತೆಯಾಗಿತ್ತು. ದಕ್ಷಿಣ ಪಿನಾಕಿನಿ ನದಿ ನೀರು ಹರಿದು ಹೋಗುವ ಬ್ರೀಡ್ಜ್ ಮೇಲಿಂದ ವ್ಯಕ್ತಿಯನ್ನ ಹಂತಕರು ಕೊಲೆ ಮಾಡಿ ಹೊಳೆಗೆ ಎಸೆದು ಹೋಗಿದ್ದರು.
ಇದನ್ನೂ ಓದಿ: ನಿರ್ಜನ ಪ್ರದೇಶದಲ್ಲಿ ಡ್ರಾಪ್ ಕೊಡುವ ಮುಂಚೆ ಹುಷಾರ್: ಅರಣ್ಯದೊಳಗೆ ಎಳೆದೊಯ್ದು ಸಾವಿರಾರು ರೂ. ಸುಲಿಗೆ
ಅಪರಿಚಿತ ಶವದ ಹಿಂದೆ ಬಿದ್ದಿದ್ದ ಸರ್ಜಾಪುರ ಪೊಲೀಸರು ಅದು ಕೆಆರ್ಪುರದ ಅಯ್ಯಾಪ್ಪನಗರ ನಿವಾಸಿ ಚೇತನ್ ಎಂದು ಪತ್ತೆ ಹಚ್ಚಿದ್ದರು. ಸರ್ಜಾಪುರ ಪೊಲೀಸರ್ ಆರೋಪಿಗಳ ಜಾಡು ಹಿಡಿದು ಹೊರಟಾಗ್ಲೇ ಅದೊಂದು ಸ್ಪಾನಲ್ಲಿ ಕೆಲಸ ಮಾಡ್ತಿದ್ದ ಬ್ಯೂಟಿ ಆಂಟಿಯ ಮಸಲತ್ತು ಬಯಲಾಗಿತ್ತು.
ತನ್ನ ಗಂಡ, ಅತ್ತೆ ಮಾವನನ್ನೇ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣದಲ್ಲಿ ಬ್ಯೂಟಿ ಆಂಟಿ ಶೋಭಾ ಜೈಲು ಸೇರಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು. ಕೆಆರ್ಪುರಂ ಸಮೀಪದ ಟಿಸಿ ಪಾಳ್ಯದ ಸ್ಪಾ ಒಂದರಲ್ಲಿ ಕೆಲಸ ಮಾಡ್ಕೊಂಡಿದ್ದ ಈಕೆಗೆ ಅಷ್ಟರಲ್ಲೇ ಕೆಆರ್ ಪುರಂ ಅಯ್ಯಪ್ಪನಗರ ನಿವಾಸಿ ಚೇತನ್ ಪರಿಚಯವಾಗಿದ್ದ.
ಇದನ್ನೂ ಓದಿ: ಊರ ಜಾತ್ರೆ ಸಿದ್ಧತೆ ವೇಳೆ ಗಲಾಟೆ; ಪರಿಚಿತರಿಂದಲೇ ಯುವಕನ ಕೊಲೆ
ಈ ಪರಿಚಯ ಮಂಚದ ಮೇಲೆ ಏರೋವರೆಗೂ ಮುಂದುವರಿದಿತ್ತು. ಇವೆಲ್ಲದರ ಮಧ್ಯೆ ಶೋಭಾ ಆಂಟಿಗೆ ಮಾಲೂರಿನ ಸತೀಶ್ ಎಂಬಾತ ಕೂಡ ಪರಿಚಯವಾಗಿದ್ದ. ಈ ಪರಿಚಯ ಸಹ ಮತ್ತೊಂದು ಹಂತದ ಆತ್ಮೀಯತೆಗೆ ಕಾರಣವಾಗಿತ್ತು. ಒಂದೇ ಸಮಯಕ್ಕೆ ಇಬ್ಬರನ್ನೂ ಮ್ಯಾನೇಜ್ ಮಾಡೋದು ಶೋಭಾಗೆ ಕಷ್ಟವಾಗತೊಡಗಿತ್ತು. ಕೊನೆಗೆ ಶೋಭಾ ಆಂಟಿಗೆ ಇಬ್ಬರಲ್ಲೊಬ್ಬರನ್ನು ದೂರ ಮಾಡೋದು ಅನಿವಾರ್ಯವಾಗಿ ಹೋಗಿತ್ತು.
ಚೇತನ್ ದೂರ ಇಟ್ಟು ಸತೀಶ್ ಜೊತೆಗೆ ಮುಂದುವರಿಯುವ ನಿರ್ಧಾರಕ್ಕೆ ಬಂದಿದ್ದಳು ಶೋಭಾ. ಆದರೆ ಚೇತನ್ನ ಆಟದಿಂದ ಹೊರಗಿಡ್ಬೇಕು ಅನ್ನೋ ಕಾರಣಕ್ಕೆ, ಸತೀಶ್ ಬಳಿ ತನಗೆ ಚೇತನ್ನಿಂದ ತೊಂದರೆ ಆಗ್ತಿದೆ ಅಂತ ಹೇಳಿಕೊಂಡಿದ್ದಳು. ರೊಚ್ಚಿಗೆದ್ದ ಸತೀಶ್, ಚೇತನ್ ಕಥೆ ಮುಗಿಸಿ ಬಿಡುವ ಎಂದು ಹೇಳಿದ್ದ. ಶೋಭಾ, ಸತೀಶ್ ಹಾಗೂ ಸಹಚರ ಶಶಿಕುಮಾರ್ ಸೇರಿ ಒಟ್ಟು ನಾಲ್ವರು ಕೊಲೆ ಮಾಡಲು ಮಾಸ್ಟರ್ ಪ್ಲಾನ್ ಒಂದು ರೂಪಿಸಿದ್ರು. ಅದರಂತಯೇ ಶೋಭಾ ಚೇತನ್ ನ ಹೊಸಕೋಟೆ ಬಳಿಯ ಬಾರ್ಗೆ ಕರೆಸಿಕೊಂಡು ಕಂಠಪೂರ್ತಿ ಕುಡಿಸಿದ್ದಳು. ಕೊನೆಗೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸರ್ಜಾಪುರದ ಮುಗಳೂರಿನ ಬ್ರೀಡ್ಜ್ ಬಳಿ ಕರ್ಕೊಂಡು ಬಂದು ಮಚ್ಚಿನಿಂದ ಹೊಡೆದು ಕೊಲೆ ಮಾಡಿ ದಕ್ಷಿಣ ಪಿನಾಕಿನಿ ನದಿ ನೀರು ಹರಿಯುವ ಹೊಳೆಗೆ ಮೃತದೇಹ ಎಸೆದು ಹೋಗಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:11 am, Thu, 9 November 23