ಶತ್ರುಗಳ ಗುಂಡಿಗೂ ಬಗ್ಗದ ಯೋಧ ಯುವತಿಯ ಲವ್​ ಬಲೆಗೆ ಬಿದ್ದು ದುರಂತ ಅಂತ್ಯಕಂಡ

ನಮ್ಮ ದೇಶ ನೆಮ್ಮದಿಯಾಗಿ ಇರಲು ಸೈನಿಕರು ತಮ್ಮ ಪ್ರಾಣವನ್ನೇ ಮುಡಿಪಾಗಿಡುತ್ತಾರೆ. ಶತ್ರವಿನ ಬಂದೂಕಿನ ಗುಂಡುಗಳಿಗೆ ಎದೆಯೊಡ್ಡಿ ಹೋರಾಡುವ ಸೈನಿಕರೆಂದರೆ ಎಲ್ಲರೂ ಹೆಮ್ಮೆ ಪಡುತ್ತಾರೆ. ಆದರೆ, ಇಲ್ಲೊಬ್ಬ ಯುವತಿ, ದೇಶ ಸೇವೆ ಮಾಡಿಬಂದು ನೆಮ್ಮದಿಯಾಗಿ ಕುಟುಂಬದ ಜೊತೆ ಇದ್ದ ನಿವೃತ್ತ ಸೈನಿಕನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಕೊನೆಗೆ ಆತ ಜೀವ ಕಳೆದುಕೊಳ್ಳುವಂತೆ ಮಾಡಿದ್ದಾಳೆ. ಅಷ್ಟಕ್ಕೂ ಆಗಿದ್ದೇನು? ಆ ಯುವತಿ ಮಾಡಿದ್ದೇನು? ನಿವೃತ್ತ ಸೈನಿಕನ ಜೀವನದಲ್ಲಿ ಆಟವಾಡದ ಪ್ರೀತಿಯ ನಾಟಕದ ಕಹಾನಿ ಇಲ್ಲಿದೆ.

ಶತ್ರುಗಳ ಗುಂಡಿಗೂ ಬಗ್ಗದ ಯೋಧ ಯುವತಿಯ ಲವ್​ ಬಲೆಗೆ ಬಿದ್ದು ದುರಂತ ಅಂತ್ಯಕಂಡ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 09, 2023 | 8:50 AM

ಕೊಡಗು, (ನವೆಂಬರ್ 09): ದೇಶದ ಗಡಿ ಕಾಯುತ್ತಿದ್ದ ವೀರ ಯೋಧ ( soldier) ಉಗ್ರರು ಹಾಗೂ ದೇಶಕ್ಕೆ ಒಳನುಸುಳುವ ಕ್ರಿಮಿಗಳ ಬಂದೂಕಿನ ಗುಂಡಿಗೂ ಬಗ್ಗದೇ ದೇಶ ಸೇವೆ ಮಾಡಿ ಬಂದಿದ್ದ. ಆದ್ರೆ, ನಿವೃತ್ತ ಸೈನಿಕ ಯುವತಿ ಪ್ರೀತಿಯ (Love) ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಹೌದು.. ಫೇಸ್‌ಬುಕ್‌ನಲ್ಲಿ(Facebook) ಪರಿಚಯ ಮಾಡಿಕೊಂಡ ಜೀವಿತಾ ಎನ್ನುವಾಕೆ ವೀರ ಯೋಧನಿಗೆ ನೀನೇ ನನ್ನ ಹೀರೋ, ನೀನೇ ನನ್ನ ಪ್ರೇರಣೆ ಎಂದು ಹೇಳಿಕೊಂಡು ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾಳೆ. ಜಿಲ್ಲೆಯ ಮಡಿಕೇರಿ ನಗರದ ಉಕ್ಕುಡ ನಿವಾಸಿ ನಿವೃತ್ತ ಯೋಧ ಸಂದೇಶ್ (38) ಮಹಿಳೆಯ ಹನಿಟ್ರ್ಯಾಪ್​ಗೆ(honeytrap ) ಹೆದರಿ ಡೆತ್​ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ. ಆದ್ರೆ, ನಿನ್ನೆ(ನವೆಂಬರ್ 08) ಮನೆ ಸಮೀಪದ ಪಂಪಿನ ಕೆರೆಯಲ್ಲಿ ಸಂದೇಶ್ ಪತ್ತೆಯಾಗಿದೆ.

ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ನಿವೃತ್ತ ಸೈನಿಕ

ಡೆತ್​ನೋಟ್​ ಬರೆದಿಟ್ಟು ನಿವೃತ್ತ ಯೋಧ (soldier) ನಾಪತ್ತೆ ಆಗಿದ್ದು, ಜೊತೆಗೆ ತನ್ನನ್ನು ಮಹಿಳೆಯೊಬ್ಬಳು ಹನಿಟ್ರ್ಯಾಪ್ ಮಾಡಿರುವುದಾಗಿ ಆರೋಪ ಮಾಡಿದ್ದ. ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದ ಮಾಜಿ ಸೈನಿಕ ಸಂದೇಶ್ ತನ್ನ ಸಾವಿಗೆ ಜೀವಿತ, ಆಕೆಯನ್ನು ಬೆಂಬಲಿಸುತ್ತಿದ್ದ ಪೊಲೀಸ್ ಸತೀಶ್ ಹಾಗೂ ರೆಸಾರ್ಟ್ ಮಾಲೀಕ ಸತ್ಯ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟು ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಸ್ಥಳೀಯರು ಸುತ್ತಮುತ್ತಲಿನ ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಯಾವುದೇ ಪ್ರಯೋಜನ ಆಗದೇ ಇದ್ದ ಸಂದರ್ಭದಲ್ಲಿ ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮತ್ತು ತಂಡದವರನ್ನು ಕರೆಸಿ ಮೃತದೇಹದ ಶೋಧ ಕಾರ್ಯವನ್ನು ಮಾಡಲಾಗಿತ್ತು. 1 ಗಂಟೆಗೂ ಅಧಿಕ ಕಾಲ ಕರೆಯಲ್ಲಿ ಆಕ್ಸಿಜನ್‌ನೊಂದಿಗೆ ಶೋಧ ಕಾರ್ಯ ನಡೆಸಲಾಗಿದ್ದು, ಈ ವೇಳೆ ಮಾಜಿ ಯೋಧನ ಮೃತ ದೇಹ ಪತ್ತೆಯಾಗಿದೆ. ಆದ್ರೆ, ಮಾಜಿ ಯೋಧ ಕಣ್ಮರೆಯಾಗಿ 30 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಬುಧವಾರ ರಾತ್ರಿ 8:20 ರ ಸುಮಾರಿಗೆ ಕೆರೆಯ 40 ಆಡಿ ಆಳದಲ್ಲಿ ಸಂದೇಶ್ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಡೆತ್​ನೋಟ್​ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ: ಹನಿಟ್ರ್ಯಾಪ್, ಪೊಲೀಸ್​ನಿಂದ ಮಾನಸಿಕ‌ ಕಿರುಕುಳ ಆರೋಪ

ಯೋಧನಿಗೆ ಮದುವೆ ಆಗಿದ್ದರೂ ಯುವತಿಯ ಅಂದ- ಚಂದ ಹಾಗೂ ಆಕೆಯ ಮಾತಿಗೆ ಮರುಳಾಗಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ. ಆದರೆ, ಈತನಿಗೆ ಮದುವೆಯಾಗಿ ಹೆಂಡತಿಯಿದ್ದರೂ ತನ್ನೊಂದಿಗೆ ಸಲುಗೆಯಿಂದ ನಡೆದುಕೊಂಡ ಎಲ್ಲ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಯುವತಿ ಬ್ಲ್ಯಾಕ್‌ಮೇಲ್‌ ಮಾಡಲು ಮುಂದಾಗಿದ್ದಾಳೆ. ಇದಕ್ಕೆ ತನ್ನ ಸ್ನೇಹಿತರಿಂದಲೂ ಸಾಥ್‌ ಪಡೆದಿದ್ದಾಳೆ.

ನಿವೃತ್ತ ಯೋಧನ ಪತ್ನಿಯ ಆರೋಪವೇನು?

ಯುವತಿಯ ಬ್ಲ್ಯಾಕ್‌ಮೇಲ್‌ ಯೋಧನ ನಿವೃತ್ತಿಯ ನಂತರವೂ ಬರುವ ಸೆಟಲ್‌ಮೆಂಟ್‌ ಹಣ ಸೇರಿದಂತೆ 50 ಲಕ್ಷ ರೂ. ಹಣ ನೀಡುವಂತೆ ಬೆದರಿಕೆ ಹಾಕಿದ್ದಾಳೆ. ಆದರೆ, ಯೋಧ ತನಗೆ ಮದುವೆಯಾಗಿದ್ದರೂ ಯುವತಿಯ ಪ್ರೀತಿಯ ಬಲೆಗೆ ಸಿಲುಕಿ ಒದ್ದಾಡುತ್ತಿದ್ದನು. ಇದೆಲ್ಲವನ್ನೂ ತನ್ನ ಪತ್ನಿ ಯಶೋಧರೊಂದಿಗೆ ಹೇಳಿಕೊಂಡಿದ್ದನು. ಆದರೆ, ಲೇಡಿಯ ಕಾಟವನ್ನು ತಾಳಲಾರದೆ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯೋಧನ ಪತ್ನಿ ಯಶೋಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ತನ್ನ ಗಂಡನ ವಿರುದ್ಧ ಜೀವಿತಾ ಹನಿಟ್ರ್ಯಾಪ್‌ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:32 am, Thu, 9 November 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ