ಮ್ಯಾಟ್ರಿಮೋನಿಯಲ್ಲಿ ಯುವತಿಯರ ಪರಿಚಯ: ಲಕ್ಷಾಂತರ ಹಣ ಕಸಿದ ವಂಚಕ ದೆಹಲಿಯಲ್ಲಿ ಅರೆಸ್ಟ್

ತಾನು ಕನ್ಸಟ್ರಕ್ಷನ್ ವ್ಯವಹಾರ ಮಾಡುತ್ತಿದ್ದು ತುರ್ತಾಗಿ ಹಣದ ಅವಶ್ಯಕತೆ ಇದೆ ಎನ್ನುತ್ತಿದ್ದ. ಈತನನ್ನ ನಂಬುತ್ತಿದ್ದ ಹುಡುಗಿಯರು ಅಕೌಂಟ್​ಗೆ ಹಣ ಹಾಕುತ್ತಿದ್ದರು.

ಮ್ಯಾಟ್ರಿಮೋನಿಯಲ್ಲಿ ಯುವತಿಯರ ಪರಿಚಯ: ಲಕ್ಷಾಂತರ ಹಣ ಕಸಿದ ವಂಚಕ ದೆಹಲಿಯಲ್ಲಿ ಅರೆಸ್ಟ್
ಬಂಧಿತ ಆರೋಪಿ ಬ್ರೈಟ್

Updated on: Nov 28, 2020 | 3:38 PM

ಬೆಂಗಳೂರು: ಮದುವೆಯಾಗುತ್ತೇನೆಂದು ನಂಬಿಸಿ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ವ್ಯಕ್ತಿಯನ್ನು ವೈಟ್ ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬ್ರೈಟ್ (25)ಬಂಧಿತ ಆರೋಪಿಯಾಗಿದ್ದು, ಮ್ಯಾಟ್ರಿಮೋನಿಯಲ್ಲಿ ಯುವತಿಯರ ಪರಿಚಯ ಮಾಡಿಕೊಳ್ತಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸುತ್ತಿದ್ದ ಆಸಾಮಿ, ತಾನು ಕನ್ಸಟ್ರಕ್ಷನ್ ವ್ಯವಹಾರ ಮಾಡುತ್ತಿದ್ದು ತುರ್ತಾಗಿ ಹಣದ ಅವಶ್ಯಕತೆ ಇದೆ ಎನ್ನುತ್ತಿದ್ದ. ಈತನನ್ನ ನಂಬುತ್ತಿದ್ದ ಹುಡುಗಿಯರು ಅಕೌಂಟ್​ಗೆ ಹಣ ಹಾಕುತ್ತಿದ್ದರು. ಹಣ ಪಡೆದ ನಂತರ ಅಕೌಂಟ್ ಬ್ಲಾಕ್ ಆಗಿದೆ ಎಂದು ಮತ್ತೊಂದು ಅಕೌಂಟ್​ಗೆ ಹಣ ಹಾಕಿಸಿಕೊಂಡು ಯುವತಿಯರನ್ನು ವಂಚಿಸುತ್ತಿದ್ದ.

ಮದುವೆ ಹೆಸರಲ್ಲಿ ಹಲವಾರು ಯುವತಿಯರಿಗೆ ಈ ಅಸಾಮಿ ವಂಚಿಸಿದ್ದಾನೆ. ಇತ್ತೀಚಿಗೆ ವೈಟ್ ಫೀಲ್ಡ್ ಮೂಲದ ಯುವತಿಗೆ ಮದುವೆಯಾಗುವುದಾಗಿ ಹೇಳಿ ಸುಮಾರು 24 ಲಕ್ಷ ಹಣ ಪಡೆದು ವಂಚನೆ ಮಾಡಿದ್ದ. ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ವೈಟ್ ಫೀಲ್ಡ್ ಸಿಇಎನ್ ಠಾಣಾ ಪೊಲೀಸರು Cyber Crime, Economic Offences and Narcotics (CEN) police stations ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

Published On - 3:34 pm, Sat, 28 November 20