ಇನ್ಫಿ ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿ ವಜಾ
ಬೆಂಗಳೂರು: ರಂಜಾನ್ ಹಬ್ಬದ ದಿನವಾದರೂ ತನಗೆ ಜಾಮೀನು ಜಾಮೂನು ದಕ್ಕಲಿದೆ ಎಂದು ಬಯಸಿದ್ದವನಿಗೆ ಕೋರ್ಟ್ ಜಾಮೀನು ಭಾಗ್ಯ ನೀಡಲು ನಿರಾಕರಿಸಿತು. ‘ಹೊರಗೆ ಹೋಗಿ ಸೀನಿ, ವೈರಸ್ ಹರಡಿ’, ‘ಕೊರೊನಾ ಸೋಂಕು ಹರಡಿ ಪ್ರಪಂಚ ಕೊನೆಗಾಣಿಸಿ’, ‘ನಾಯಿಗಳನ್ನು ಸಾಯಿಸಲು ನನ್ನ ಸ್ಟೆನ್ ಗನ್ ರೆಡಿ’ ಹೀಗೆಂದು ವಿಲಕ್ಷಣವಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಟೆಕ್ಕಿ ಮುಜೀಬ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇನ್ಫಿ ಟೆಕ್ಕಿ ಮೊಹಮ್ಮದ್ ಮುಜೀಬ್ ತನಿಖೆ ವೇಳೆ ಹಲವು ಮಹತ್ವದ ಅಂಶಗಳು ಪತ್ತೆಯಾಗಿವೆ. ಟೆಕ್ಕಿ ಮುಜೀಬ್ […]
ಬೆಂಗಳೂರು: ರಂಜಾನ್ ಹಬ್ಬದ ದಿನವಾದರೂ ತನಗೆ ಜಾಮೀನು ಜಾಮೂನು ದಕ್ಕಲಿದೆ ಎಂದು ಬಯಸಿದ್ದವನಿಗೆ ಕೋರ್ಟ್ ಜಾಮೀನು ಭಾಗ್ಯ ನೀಡಲು ನಿರಾಕರಿಸಿತು.
‘ಹೊರಗೆ ಹೋಗಿ ಸೀನಿ, ವೈರಸ್ ಹರಡಿ’, ‘ಕೊರೊನಾ ಸೋಂಕು ಹರಡಿ ಪ್ರಪಂಚ ಕೊನೆಗಾಣಿಸಿ’, ‘ನಾಯಿಗಳನ್ನು ಸಾಯಿಸಲು ನನ್ನ ಸ್ಟೆನ್ ಗನ್ ರೆಡಿ’ ಹೀಗೆಂದು ವಿಲಕ್ಷಣವಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಟೆಕ್ಕಿ ಮುಜೀಬ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಇನ್ಫಿ ಟೆಕ್ಕಿ ಮೊಹಮ್ಮದ್ ಮುಜೀಬ್ ತನಿಖೆ ವೇಳೆ ಹಲವು ಮಹತ್ವದ ಅಂಶಗಳು ಪತ್ತೆಯಾಗಿವೆ. ಟೆಕ್ಕಿ ಮುಜೀಬ್ ಪಾಕಿಸ್ತಾನದ ವಾಟ್ಸಾಪ್ ನಂಬರ್ ಶೇರ್ ಮಾಡಿದ್ದ. ಧಾರ್ಮಿಕ ಮೂಲಭೂತವಾದ, ದೇಶ ವಿರೋಧಿ ಚಿಂತನೆ ಹೊಂದಿದ್ದ. ಎನ್ಐಎ ಕೂಡಾ ಮುಜೀಬ್ ಲಿಂಕ್ಗಳ ತನಿಖೆ ನಡೆಸುತ್ತಿದೆ ಎಂದು ತನಿಖೆ ವಿವರವನ್ನು ಪೊಲೀಸರು ಕೋರ್ಟ್ಗೆ ಸಲ್ಲಿಸಿದ್ದರು.
ಇಂತಹ ಪೋಸ್ಟ್ಗಳಿಂದ ಸಾಮರಸ್ಯ, ಸಮಗ್ರತೆಗೆ ಧಕ್ಕೆ: ಹೈಕೋರ್ಟ್ ಆರ್ಟಿಕಲ್ 21ಅಡಿ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತ ಹಕ್ಕು ಎಂದು ಆರೋಪಿ ಮೊಹಮ್ಮದ್ ಮುಜೀಬ್ ಪರ ವಾದ ಮಂಡಿಸಲಾಗಿತ್ತು. ಆದ್ರೆ ಆರ್ಟಿಕಲ್ 21ಕ್ಕಿಂತ ಸಂವಿಧಾನದ ಮುನ್ನುಡಿಗೆ ಪ್ರಾಮುಖ್ಯತೆ ಇದೆ. ಕೊವಿಡ್ 19ಗೆ ಹೆದರಿರುವ ಜನರಲ್ಲಿ ಭೀತಿ ಹುಟ್ಟಿಸುವ ಯತ್ನ ನಡೆದಿದೆ. ಇಂತಹ ಪೋಸ್ಟ್ಗಳಿಂದ ಸಾಮರಸ್ಯ, ಸಮಗ್ರತೆಗೆ ಧಕ್ಕೆಯೊದಗಲಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನ್ಯಾ. ಕೆ.ಎಸ್.ಮುದಗಲ್ ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
Published On - 6:18 pm, Mon, 25 May 20