ಬೆಂಗಳೂರು, ಮೇ 11: ತೃತೀಯ ಲಿಂಗಿಯನ್ನು ಕೊಲೆ (Transgender Murder) ಮಾಡಿ ಪರಾರಿಯಾಗಿದ್ದ ಮಹಿಳೆಯಳನ್ನು ಜೀವನ್ ಭೀಮಾ ನಗರ ಪೊಲೀಸರು (Police) ಬಂಧಿಸಿದ್ದಾರೆ. ಮಂಜುನಾಯ್ಕ್ (47 ವರ್ಷ) ಮೃತ ತೃತೀಯ ಲಿಂಗಿ. ಪ್ರೇಮಾ ಕೊಲೆ ಆರೋಪಿ. ಸದ್ಯ ಆರೋಪಿ ಪ್ರೇಮಾಳನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ.
ಪ್ರೇಮಾ ಮೂಲತಃ ಬೆಂಗಳೂರಿನವಳಲ್ಲ. ಪತಿ ತೀರಿಕೊಂಡ ಬಳಿಕ ಪ್ರೇಮಾ ಒಂಟಿಯಾಗಿ ವಾಸವಾಗಿದ್ದಳು. ಇದೇ ವೇಳೆ ಪ್ರೇಮಾಗೆ ತೃತೀಯ ಲಿಂಗಿ ಮಂಜಿಭಾಯಿ ಅಲಿಯಾಸ್ ಮಂಜುನಾಯ್ಕ್ ಪರಿಚಯವಾಗಿತ್ತು. ಬಳಿಕ ಇಬ್ಬರು ಬೆಂಗಳೂರಿಗೆ ಬಂದು ಮುರುಗೇಶ್ ಪಾಳ್ಯದಲ್ಲಿ ಒಂದೇ ಮನೆಯಲ್ಲಿ ವಾಸವಿದ್ದು, ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರ ಮಧ್ಯೆ ಜಗಳ ಶುರುವಾಗಿತ್ತು. ನೀನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಅಂತ ಮಂಜುನಾಯ್ಕ್ ಪ್ರೇಮಾ ಜೊತೆ ಜಗಳವಾಡುತ್ತಿದ್ದರು. ಹೀಗೆ ಕಳೆದ ತಿಂಗಳು ಏಪ್ರಿಲ್ 26 ರಂದು ಇಬ್ಬರ ಮಧ್ಯೆ ಜಗಳವಾಗಿತ್ತು. ಈ ವೇಳೆ ಮಂಜುನಾಯ್ಕ್ ಪ್ರೇಮಾಳನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಮುಂದಾಗಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪ್ರೇಮಾ ಮನೆಯಲಿದ್ದ ಟವಲ್ ತೆಗೆದುಕೊಂಡು ಮಂಜುನಾಯ್ಕ್ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಳು.
ಇದನ್ನೂ ಓದಿ: ಕೊಲೆ ಮಾಡಲು ಒಂದು ತಿಂಗಳು ವೆಬ್ ಸೀರೀಸ್ ನೋಡಿದ ಆರೋಪಿಗಳು
ಶವ ಇದ್ದ ಮನೆಯಿಂದ ಕೊಳೆತ ವಾಸನೆ ಬರುತ್ತಿದ್ದಂತೆ ಅಕ್ಕ-ಪಕ್ಕದ ಜನರು ಮೇ 3 ರಂದು ಮನೆ ಬಾಗಿಲು ತೆರೆದಾಗ ಕೊಳೆತ ಸ್ಥಿತಿಯಲ್ಲಿ ಮಂಜುನಾಯ್ಕ್ ಮೃತದೇಹ ಪತ್ತೆಯಾಗಿದೆ. ವಿಚಾರ ತಿಳಿದು ಕೂಡಲೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜೀವನ್ ಭೀಮಾ ನಗರ ಪೊಲೀಸರು, ಅನುಮಾನಸ್ಪದ ಸಾವು ಅಂತ ಪ್ರಕರಣ ದಾಖಲಿಸಿಕೊಂಡರು. ಬಳಿಕ ಮರಣೋತ್ತರ ಪರೀಕ್ಷೆ ವೇಳೆ ಮಂಜುನಾಯ್ಕ್ರನ್ನು ಕೊಲೆ ಮಾಡಲಾಗಿದೆ ಅಂತ ತಿಳಿಯಿತು. ಈ ವೇಳೆ ಆರೋಪಿತಳ ಮೇಲೆ ಅನುಮಾನ ಬಂದಿದ್ದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬಾಯ್ಬಿಟ್ಟಿದ್ದಾಳೆ.
ಸದ್ಯ ಮಹಿಳೆಯನ್ನ ಬಂಧಿಸಿರುವ ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ. ಆದರೆ ತನ್ನ ಜೊತೆ 20 ವರ್ಷ ಜೀವನ ಕಳೆದಿದ್ದ ಪ್ರೇಮಾ ಮೇಲೆ, ತೃತೀಯ ಲಿಂಗಿ ಮಂಜುನಾಯ್ಕ್ ಅನುಮಾನ ಪಟ್ಟಿದ್ದ ದುರಂತವಾದರೇ, ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರೇಮಾ ಕೊಲೆಗಾತಿಯಾಗಿದ್ದು ವಿಪರ್ಯಾವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ