ಹದಿಹರೆಯದ ಹುಡುಗರ ಮೇಲೆ ಅತ್ಯಾಚಾರ ನಡೆಸಿ ಕೊಲ್ಲುತ್ತಿದ್ದ ಬೆವನ್ ಸ್ಪೆನ್ಸರ್ ವಾನ್ ಐನೆಮ್ ಒಬ್ಬ ಸೆಕ್ಸ್ ಸ್ಯಾಡಿಸ್ಟ್ ಆಗಿದ್ದ!

ಪೊಲೀಸರು ತನಿಖೆ ನಡೆಸಿದಾಗ ಹೇಯ ಕೃತ್ಯಗಳನ್ನು ‘ದಿ ಫ್ಯಾಮಿಲಿ’ ಗುಂಪಿನ ಸದಸ್ಯರು ಎಸಗುತ್ತಿದ್ದಿದ್ದು ಬೆಳಕಿಗೆ ಬಂದಿತ್ತು. ಅಂದಹಾಗೆ, ಗುಂಪಿನ ಸದಸ್ಯರು ಯಾವುದೋ ಕೊಳೆಗೇರಿಯ ಅಪರಾಧಿಗಳಾಗಿರದೆ ಕುಲೀನ ಕುಟುಂಬಗಳಿಗೆ ಸೇರಿದವರಾಗಿದ್ದರು. ಹದಿದಹರೆಯದ ಯುವಕರನ್ನು ಮಾತ್ರ ಅವರು ತಮ್ಮ ಬೇಟೆಗೆ ಆರಿಸಿಕೊಳ್ಳುತ್ತಿದ್ದರು.

ಹದಿಹರೆಯದ ಹುಡುಗರ ಮೇಲೆ ಅತ್ಯಾಚಾರ ನಡೆಸಿ ಕೊಲ್ಲುತ್ತಿದ್ದ ಬೆವನ್ ಸ್ಪೆನ್ಸರ್ ವಾನ್ ಐನೆಮ್ ಒಬ್ಬ ಸೆಕ್ಸ್ ಸ್ಯಾಡಿಸ್ಟ್ ಆಗಿದ್ದ!
ಬೆವನ್ ಸ್ಪೆನ್ಸರ್ ವಾನ್ ಐನೆಮ್
TV9kannada Web Team

| Edited By: Arun Belly

Nov 22, 2022 | 8:03 AM

ಆಸ್ಟ್ರೇಲಿಯದ ಅಡಿಲೇಡ್ (Adelaide) ಕ್ರಿಕೆಟ್ ಪ್ರೇಮಿಗಳಿಗೆ ಚೆನ್ನಾಗಿ ಗೊತ್ತಿರುವ ಹೆಸರು. ಕಾಂಗರೂಗಳ ನಾಡಿನಲ್ಲಿ ಅಡಿಲೇಡ್ ಒಂದು ದೊಡ್ಡ ನಗರವಾದರೂ ಹಿಂದೊಮ್ಮೆ ಅಲ್ಲಿನ ಸಂಸ್ಕೃತಿ (culture), ಪರಿಸರ ಬಹಳ ಕೆಟ್ಟದ್ದಾಗಿತ್ತು ಅನ್ನೋದು ಸತ್ಯ. ಒಂದು ಸಮಯದಲ್ಲಿ ಇಂದು ಅಪರಾಧಗಳ ತಾಣ ಮತ್ತು ಅಪರಾಧಿಗಳ ತಂಗುದಾಣವಾಗಿತ್ತು (haven). ಬಹಳ ಹೀನ, ಕ್ರೂರ ಮತ್ತು ಬರ್ಬರ ಕೃತ್ಯಗಳು 1970 ಮತ್ತು 80 ರ ದಶಕದಲ್ಲಿ ನಡೆಯುತ್ತಿದ್ದವು.

ಸನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವು 70 ರ ದಶಕದ ಕೊನೆಭಾಗ ಮತ್ತು 80 ರ ದಶಕದಲ್ಲಿ ಹದಿಹರೆಯದ ಯುವಕರು ಇದ್ದಕ್ಕಿದ್ದಂತೆ ಮಾಯವಾಗಿ ಕೆಲದಿನಗಳ ನಂತರ ಅಥವಾ ಮರುದಿನವೇ ಭೀಕರವಾಗಿ ಕೊಲೆಯಾಗುತ್ತಿದ್ದ ಸರಣಿ ಕೊಲೆಗಳ ಕತೆಯನ್ನು ನಿಮಗೆ ಹೇಳುತ್ತಿದ್ದೇವೆ. ಅಡಿಲೇಡ್ ನಗರಾಭಾಗದಿಂದ ನಾಪತ್ತೆಯಾಗುತ್ತಿದ್ದ ಯುವಕರ ವಿಕಾರವಾಗಿ ಜಜ್ಜಿದ ದೇಹ ಇಲ್ಲವೇ ದೇಹದ ಭಾಗಗಳು ನಗರದ ಹೊರವಲಯದಲ್ಲಿ ಸಿಗುತ್ತಿದ್ದವು.

ಅಡಿಲೇಡ್ ಪೊಲೀಸರನ್ನು ತಲ್ಲಣಗೊಳ್ಳುವಂತೆ ಮಾಡಿದ ಅಂಶ ಪದೇಪದೆ ನಡೆಯುತ್ತಿದ್ದ ಅಪಹರಣ ಮತ್ತು ಕೊಲೆಗಳು ಮಾತ್ರವಲ್ಲ, ಯುವಕರನ್ನು ಕೊಲ್ಲುತ್ತಿದ್ದ ಕೂಡ ಅವರಲ್ಲಿ ಆತಂಕ ಮೂಡಿಸಿತ್ತು. ಅವರ ಮೇಲೆ ಲೈಂಗಿಕ ಅತ್ಯಾಚಾರ ನಡೆಸಲಾಗಿರುತಿತ್ತು ಮತ್ತು ದೈಹಿಕ ಕಿರುಕುಳ ನೀಡಲಾಗಿರುತ್ತಿತ್ತು. ಸಲಿಂಗಿ ರಕ್ತ ಪಿಪಾಸುಗಳು ಕೈಗೆ ಸಿಕ್ಕ ಯುವಕರನ್ನು ಅಪಹರಿಸುತ್ತಿದ್ದರು.

ಪೊಲೀಸರು ತನಿಖೆ ನಡೆಸಿದಾಗ ಹೇಯ ಕೃತ್ಯಗಳನ್ನು ‘ದಿ ಫ್ಯಾಮಿಲಿ’ ಗುಂಪಿನ ಸದಸ್ಯರು ಎಸಗುತ್ತಿದ್ದಿದ್ದು ಬೆಳಕಿಗೆ ಬಂದಿತ್ತು. ಅಂದಹಾಗೆ, ಗುಂಪಿನ ಸದಸ್ಯರು ಯಾವುದೋ ಕೊಳೆಗೇರಿಯ ಅಪರಾಧಿಗಳಾಗಿರದೆ ಕುಲೀನ ಕುಟುಂಬಗಳಿಗೆ ಸೇರಿದವರಾಗಿದ್ದರು. ಹದಿದಹರೆಯದ ಯುವಕರನ್ನು ಮಾತ್ರ ಅವರು ತಮ್ಮ ಬೇಟೆಗೆ ಆರಿಸಿಕೊಳ್ಳುತ್ತಿದ್ದರು.

ಗಮನಿಸಬೇಕಾದ ಸಂಗತಿಯೇನೆಂದರೆ, ನೂರಾರು ಕೊಲೆ ಪ್ರಕರಣಗಳಲ್ಲಿ ಕೇವಲ ಒಬ್ಬನನ್ನು ಮಾತ್ರ ಬಂಧಿಸಲಾಯಿತು. ಅವನ ಹೆಸರು ಬೆವನ್ ಸ್ಪೆನ್ಸರ್ ವಾನ್ ಐನೀಮ್. ವೃತ್ತಿಯಲ್ಲಿ ಅವನೊಬ್ಬ ಅಕೌಂಟಂಟ್ ಆಗಿದ್ದ. ಅಸಲಿಗೆ, ದಿ ಫ್ಯಾಮಿಲಿ ಗ್ರೂಪನ್ನು ಸ್ಥಾಪಿಸಿದವನು ಇದೇ ನರಹಂತಕ.

ಬೆವನ್ ಒಬ್ಬ ಸೆಕ್ಸ್ ಸ್ಯಾಡಿಸ್ಟ್ ಆಗಿದ್ದ. 70 ಮತ್ತು 80 ದಶಕಗಳಲ್ಲಿ ಅಡಿಲೇಡ್ ನಲ್ಲಿದ್ದ ಸಲಿಂಗಿಗಳ ಸಮುದಾಯದ (ದಿ ಫ್ಯಾಮಿಲಿ) ಸದಸ್ಯರು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಹದಿಹರೆಯದ ಹುಡುಗರನ್ನು ಬಳಸಿಕೊಳ್ಳುತ್ತಿದ್ದರು. ಆ ಜಮಾನಾದ ಪ್ರಖ್ಯಾತ ವಕೀಲ ಡೆರೆನ್ಸ್ ಸ್ಟೀವನ್ಸನ್ ಹುಡುಗರನ್ನು ಪುಸಲಾಯಿಸಿ ಪಾರ್ಟಿಗಳಿಗೆ ಕರೆದೊಯ್ಯುತ್ತಿದ್ದ. ವ್ಯಾಪರಿಯಾಗಿದ್ದ ಜಿನೊ ಗಂಬಾರ್ಡೆಲ್ಲ, ರುಂಡ್ಲ್ ಮಾಲ್ ಮತ್ತು ವಿಡಿಯೋ ಗೇಮ್ ಆರ್ಕೇಡ್, ಮತ್ತು ಪಾರ್ಕ್ ಗಳಲ್ಲಿ ಮತ್ತು ನಿರಾಶ್ರಿತ ಯುವಕರನ್ನು ಬೇಟೆಯಾಡುತ್ತಿದ್ದ. ವೇಲ್ ಗಾರ್ಡನ್ಸ್ ಹೆಸರಿನ ದುಷ್ಟ ಪುರುಷರ ವೇಶ್ಯಾವಾಟಿಕೆ ಸೆಂಟರ್ ನಡೆಸುತ್ತಿದ್ದ ಮತ್ತು ಅದರಲ್ಲಿ ಹದಿಹರೆಯದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ದಿ ಫ್ಯಾಮಿಲಿ ಗುಂಪಿನ ಸ್ಥಾಪಕ ಬೆವನ್ 15ರಿಂದ 19 ವರ್ಷದೊಳಗಿನ ಹುಡುಗರರನ್ನು ತನ್ನ ಬೇಟೆಗೆ ಆರಿಸಿಕೊಳ್ಳುತ್ತಿದ್ದ.

ಹುಡುಗರನ್ನು ಬಲೆಗೆ ಹಾಕಿಕೊಳ್ಳಲು ತನ್ನ ಕಾರನ್ನು ಬಳಸುತ್ತಿದ್ದ. ಕಾರಿನಲ್ಲಿ ಏನೋ ಸಮಸ್ಯೆಯಾಗಿದೆ, ಪ್ಲೀಸ್ ಹೆಲ್ಪ್ ಮಾಡು ಅಮಾಯಕ ಹುಡುಗರನ್ನು ಪುಸಲಾಯಿಸುತ್ತಿದ್ದ. ತನ್ನಂಥ ವಿಕೃತ ಮನಸ್ಸಿನ ಸೆಕ್ಸ್ ಸ್ಯಾಡಿಸ್ಟ್ ಗಳನ್ನು ಗುರುತಿಸುವಲ್ಲಿ ಅವನು ಪರಿಣಿತನಾಗಿದ್ದ. ಸುಮಾರು 25-30 ಸಮಾನ ಮನಸ್ಕ ಜನರನ್ನು ಆರಿಸಿಕೊಂಡು ದಿ ಫ್ಯಾಮಿಲಿ ಗುಂಪನ್ನು ಅವನು ಸ್ಥಾಪಿಸಿದ್ದ.

ಕಂಠಮಟ್ಟದವರೆಗೆ ಕುಡಿತ ಮತ್ತು ಸುಂದರ ಮಹಿಳೆಯರ ಜೊತೆ ಮೋಜು ಮಾಡಿಸುವ ಅಮಿಷವೊಡ್ಡಿ ಬೆವನ್ ಹುಡುಗರನ್ನು ತನ್ನ ಕಾರಲ್ಲಿ ಕರೆದೊಯ್ಯುತ್ತಿದ್ದ. ಅವರು ಕಾರೊಳಗೆ ಬಂದ ಬಳಿಕ ನಾಕೌಟ್ ಡ್ರಗ್ ಡ್ರಿಂಕನ್ನು ಅವರಿಗೆ ನೀಡಿ ಪ್ರಜ್ಞೆ ತಪ್ಪುವಂತೆ ಮಾಡುತ್ತಿದ್ದ.

ಪೊಲೀಸರ ಅಂದಾಜಿನ ಪ್ರಕಾರ ಬೆವನ್ ಸುಮಾರು 150 ಕ್ಕೂ ಹೆಚ್ಚು ಹುಡುಗರನ್ನು ಅಪಹರಿಸಿ, ಅವರಿಗೆ ಡ್ರಗ್ಸ್ ನೀಡಿ ಲೈಂಗಿಕ ಅತ್ಯಾಚಾರ ನಡೆಸಿದ್ದಾನೆ ಮತ್ತು ಅವರಲ್ಲಿ ಕನಿಷ್ಟ 5 ಹುಡುಗರನ್ನು ಭೀಕರವಾಗಿ ಕೊಂದಿದ್ದಾನೆ. ಬೆವನ್, ಹುಡುಗರ ಗುದದ್ವಾರದಲ್ಲಿ ಹರಿತವಾದ ವಸ್ತುವನ್ನು ಕಿಬ್ಬೊಟ್ಟೆವರೆಗೆ ಹರಿಯುವಂತೆ ಬಲವಾಗಿ ತೂರಿ ಹುಡುಗರನ್ನು ಕೊಲ್ಲುತ್ತಿದ್ದ. ಕೆಲ ಹುಡುಗರಿಗೆ ಮನಬಂದಂತೆ ಚಿತ್ರಹಿಂಸೆ ನೀಡಿರುತ್ತಿದ್ದ.

ತನ್ನ ಜೀವಕ್ಕೆ ಹೆದರಿ ಅವನು ತನ್ನ ದಿ ಫ್ಯಾಮಿಲಿ ಗುಂಪಿನ ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ ಎಂದು ಹೇಳಲಾಗಿದೆ. ಆ ಹೆಸರಿನ ಗುಂಪೊಂದು ಅಸ್ತಿತ್ವದಲ್ಲಿದೆ ಎನ್ನುವ ಅಂಶವನ್ನೇ ನಿರಾಕರಿಸಿದ. ಗುಂಪಿನ ಸದಸ್ಯರು ಅದಿನ್ನೆಷ್ಟು ಹುಡುಗರನ್ನು ಕೊಂದರೋ?

ಬೆವನ್ ಸ್ಪೆನ್ಸರ್ ವಾನ್ ಐನೆಮ್ ಗೆ ಅಜೀವ ಸೆರೆವಾಸದ ಶಿಕ್ಷೆಗೆ ಗುರಿಪಡಿಸಲಾಯಿತು.

ಇನ್ನಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada