ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ (Basavalinga Swamiji) ಆತ್ಮಹತ್ಯೆ ಪ್ರಕರಣ ಹೊಸ ತಿರುವುಪಡೆದುಕೊಂಡಿದ್ದು, ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಇದೀಗ ಹಲವು ಪ್ರಶ್ನೆಗಳು ಎದ್ದಿದೆ. ಇನ್ನು ಕೆಲ ವೈಯಕ್ತಿಕ ಕಾರಣಗಳಿಂದ ಸ್ವಾಮೀಜಿಗಳು ಬೇಸತ್ತಿದ್ರಾ ಅನ್ನೋ ಅನುಮಾನ ಮೂಡಿದೆ.
ಮುಖಂರರೊಬ್ಬರ ಬೆದರಿಕೆಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ರಾ ಎನ್ನುವ ಶಂಕೆ ವ್ಯಕ್ತವಾಗಿದೆ. ಹೀಗೆ ಬಸವಲಿಂಗ ಸ್ವಾಮೀಜಿ ಸಾವಿನ ಸುತ್ತ ನೂರೆಂಟು ಅನುಮಾನದ ಹುತ್ತ ಸುಳಿದಾಡ್ತಿದೆ. ಕೆಲ ಕಾರ್ಯಕ್ರಮಗಳಿಗೆ ಮಠಕ್ಕೆ ಆ ಮುಖಂಡನನ್ನು ಕರೆಯದ್ದಕ್ಕೆ ಯಾವುದೋ ವಿಡಿಯೋ ತೋರಿಸಿ ಸ್ವಾಮೀಜಿಗಳಿಗೆ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.
ಮರ್ಯಾದೆಗೆ ಅಂಜಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ
ಕಳೆದ 4 ದಿನಗಳಿಂದ ನಿರಂತವಾಗಿ ವಿಡಿಯೋ ತೋರಿಸಿ ಬಸವಲಿಂಗ ಸ್ವಾಮೀಜಿಗೆ ಬ್ಲಾಕ್ಮೇಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಆತ್ಮಹತ್ಯೆ ಹಿಂದೆ ಷಡ್ಯಂತ್ರ ನಡೆಯಿತಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.
ಡೆತ್ನೋಟ್ ವಶಕ್ಕೆ ಪಡೆದು ತನಿಖೆ
ಕಂಚುಗಲ್ ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಇದೀಗೆ ಹಲವು ಪ್ರಶ್ನೆಗಳು ಎದ್ದಿದೆ. ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ನನಗೆ ಯಾರು ಸಹಾಯಕ್ಕೆ ಇರಲಿಲ್ಲ. ಕೆಲವರು ಬೆದರಿಕೆ ಹಾಕಿದ್ದಾರೆ ಅಂತಾ ಮೂರು ಪುಟಗಳ ಡೆತ್ನೋಟ್ನಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ. ಸ್ವಾಮೀಜಿ ಆತ್ಮಹತ್ಯೆ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರೋ ಸ್ಥಳದಲ್ಲೇ ಡೆತ್ನೋಟ್ ಪತ್ತೆಯಾಗಿದೆ. ಸ್ವಾಮೀಜಿ ಬರೆದಿರೋ ಡೆತ್ನೋಟ್ ವಶಕ್ಕೆ ಪಡೆದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡೆತ್ನೋಟ್ನಲ್ಲಿ ಬರೆದಿರೋ ಅಂಶ ಪರಿಶೀಲನೆ ನಡೆಸಲಾಗ್ತಿದೆ. ಆತ್ಮಹತ್ಯೆಗೆ ಶರಣಾಗುವಷ್ಟು ಶ್ರೀಗಳಿಗೆ ನೋವಾಗಿದ್ದಾದ್ರು ಏನು ಅನ್ನೋ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು,ಸತ್ಯಾಸತ್ಯತೆ ಬಯಲಾಗಲಿದೆ.
ಬಂಡೆಮಠ ಸ್ವಾಮೀಜಿ ಸಾವಿನ ಹಿಂದೆ ಯುವತಿ ನೆರಳು ಇದ್ಯಾ? ವಿಡಿಯೋ ಕಾಲ್‌ನಲ್ಲಿ ಬೆದರಿಕೆ ಹಾಕಿದವರು ಯಾರು? ಸ್ವಾಮೀಜಿಗಳು ಮರ್ಯಾದೆಗೆ ಅಂಜುವಂಥದ್ದು ಏನಿತ್ತು? ಎನ್ನುವ ಪ್ರಶ್ನೆಗಳಿಗೆ ಪೊಲೀಸ್ ತನಿಖೆ ಬಳಿಕ ಉತ್ತರ ಸಿಗಲಿದೆ.
Published On - 2:47 pm, Mon, 24 October 22