AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಂತರ ಅತ್ಯಾಚಾರ, 5 ಬಾರಿ ಗರ್ಭಪಾತ: ಚಳ್ಳಕೆರೆ CPI ವಿರುದ್ಧ ರೇಪ್​ ಕೇಸ್​ ದಾಖಲಿಸಿ ಈಗ ಉಲ್ಟಾ ಹೊಡೆದ ಯುವತಿ

ಚಿತ್ರದುರ್ಗದ ಚಳ್ಳಕೆರೆ ಠಾಣೆಯ ಸಿಪಿಐ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದೂರು ನೀಡಿದ್ದ ಯುವತಿಯೇ ಇದೀಗ ಉಲ್ಟಾ ಹೊಡೆದಿದ್ದಾಳೆ.

ನಿರಂತರ ಅತ್ಯಾಚಾರ, 5 ಬಾರಿ ಗರ್ಭಪಾತ: ಚಳ್ಳಕೆರೆ CPI ವಿರುದ್ಧ ರೇಪ್​ ಕೇಸ್​ ದಾಖಲಿಸಿ ಈಗ ಉಲ್ಟಾ ಹೊಡೆದ ಯುವತಿ
Challakere CPI Umesh
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 24, 2022 | 5:42 PM

Share

ಚಿತ್ರದುರ್ಗ: ಯುವತಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಲ್ಲದೇ ಒಂದಲ್ಲ, ಎರಡಲ್ಲ ಐದು ಬಾರಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಚಿತ್ರದುರ್ಗದ ಚಳ್ಳಕೆರೆ ಠಾಣೆಯ ಸಿಪಿಐ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಯುವತಿಯೇ ಸಿಪಿಐ ವಿರುದ್ಧ ಚಿತ್ರದುರ್ಗ ಮಹಿಳಾ ಠಾಣೆಗೆ ದೂರು ನೀಡಿದ್ದರು. ಆದ್ರೆ, ಇದೀಗ ದೂರು ಕೊಟ್ಟ ಯುವತಿಯೇ ಉಲ್ಟಾ ಹೊಡೆದಿದ್ದಾಳೆ.

ಸಿಪಿಐರಿಂದ ಲೈಂಗಿಕ ದೌರ್ಜನ್ಯ ಆಗಿಲ್ಲ.ಮಾನಸಿಕ ಒತ್ತಡದಿಂದ ದೂರು ನೀಡಿದ್ದೆ ಎಂದು ಯುವತಿ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ ನೀಡಿದ್ದಾಳೆ. ಇದರೊಂದಿಗೆ ಈ ಪ್ರಕರಣ ಬೇರೆ ತಿರುವುಪಡೆದುಕೊಂಡಂತಾಗಿದೆ.

ಚಳ್ಳಕೆರೆ ಠಾಣೆ ಸಿಪಿಐ ವಿರುದ್ಧ ರೇಪ್ ಕೇಸ್ ದಾಖಲು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ.ಉಮೇಶ್​ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಯುವತಿ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಇದರ ಬೆನ್ನಲ್ಲೇ ಇಂದು(ಅ.24) ಬೆಳಗ್ಗೆ ಸಿಪಿಐ ಜಿ.ಬಿ.ಉಮೇಶ್ ಅಮಾನತುಗೊಳಿಸಿ ಐಜಿಪಿ ಆದೇಶ ಹೊರಡಿಸಿದ್ದರು. ಆದ್ರೆ, ಇದೀಗ ಯುವತಿ, ಸಿಪಿಐನಿಂದ ಯಾವುದೇ ಅತ್ಯಾಚಾರವಾಗಿಲ್ಲ ಎಂದು ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿ ಮರು ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.

ಪ್ರಕರಣ ಹಿನ್ನೆಲೆ

ಸೋದರ ಮಾವನ ಮಗ ಜಿ.ಬಿ. ಉಮೇಶ್ ವಿರುದ್ಧ ಯುವತಿ ದೂರು ನೀಡಿದ್ದ ಯುವತಿ, 5 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಇನ್ಸ್​ಪೆಕ್ಟರ್ ಆಗಿದ್ದ ಉಮೇಶ್ ನಿರಂತರವಾಗಿ ಅತ್ಯಾಚಾರ, ಬಲತ್ಕಾರ ಮಾಡಿದ್ದಾರೆ. ಪರಿಣಾಮವಾಗಿ ಐದು ಬಾರಿ ಗರ್ಭಪಾತ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಐದು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ‌ ಯುವತಿಯ ಕುಟುಂಬಸ್ಥರು ಉಮೇಶ್ ಬಳಿ ಸಹಾಯ ಕೇಳಿದ್ದರು. ಅದರಂತೆ ಚಿತ್ರದುರ್ಗದಿಂದ ದಾವಣಗೆರೆಗೆ ಯುವತಿಯನ್ನು ಕರೆಸಿಕೊಂಡ ಸೋದರ ಮಾವನೂ ಆಗಿರುವ ಇನ್​ಸ್ಪೆಕ್ಟರ್ ಉಮೇಶ್, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಬಳಿಕ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ ಮಾಡಿದ್ದನು. ಶಿವಮೊಗ್ಗದಲ್ಲಿ ಯುವತಿ ಬಿಇಡಿ ಓದುತ್ತಿದ್ದಾಗ ಅತ್ಯಾಚಾರ ಎಸಗಿರುವ ಆರೋಪ ಮಾಡಲಾಗಿತ್ತು.

ಉಮೇಶನ ಈ ದುಷ್ಕೃತ್ಯದಿಂದ ಯುವತಿ ಐದು ಸಲ ಗರ್ಭಾವತಿಯಾಗಿದ್ದು, ಐದು ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಈಗಾಗಲೇ ಉಮೇಶನಿಗೆ ಇಬ್ಬರು ಹೆಂಡತಿಯರಿದ್ದಾರೆ. 3ನೇ ಪತ್ನಿ ಹಾಗೇ ಇರು ಎಂದು ಯುವತಿಯನ್ನು ಒತ್ತಾಯಿಸುತ್ತಿದ್ದನು. ಅಲ್ಲದೆ ದಾವಣಗೆರೆಯ ನಿವೇಶನ ನಿಮಗೆ ಸಿಗದಂತೆ ಮಾಡುತ್ತೇನೆ, ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ. ಅದರ ಅನ್ವಯ ಪೊಲೀಸರು ಕಲಂ 376 ಕ್ಲಾಸ್ (2)(k)(n), 323, 504, 506 ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದರು.

Published On - 5:31 pm, Mon, 24 October 22

ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?