AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳ್ಳಕೆರೆ ಠಾಣೆ ಸಿಪಿಐ ವಿರುದ್ಧ ರೇಪ್ ಕೇಸ್ ದಾಖಲು

ಈಗಾಗಲೇ ಎರಡು ಮದುವೆಗಳನ್ನ ಆಗಿರುವ ಚಳ್ಳಕೆರೆ ಠಾಣೆ ಸಿಪಿಐ, ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಬಲತ್ಕಾರವೂ ಮಾಡಿದ್ದಾನೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಳ್ಳಕೆರೆ ಠಾಣೆ ಸಿಪಿಐ ವಿರುದ್ಧ ರೇಪ್ ಕೇಸ್ ದಾಖಲು
ಸಿಪಿಐ ಉಮೇಶ್
TV9 Web
| Edited By: |

Updated on: Oct 24, 2022 | 8:24 AM

Share

ಚಿತ್ರದುರ್ಗ: ಇಬ್ಬರನ್ನು ಮದುವೆಯಾದರೂ ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಜಿಲ್ಲೆಯ ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸೋದರ ಮಾವನ ಮಗ ಜಿ.ಬಿ. ಉಮೇಶ್ ವಿರುದ್ಧ ಯುವತಿ ದೂರು ನೀಡಿದ್ದು, 5 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಇನ್ಸ್​ಪೆಕ್ಟರ್ ಆಗಿದ್ದ ಉಮೇಶ್ ನಿರಂತರವಾಗಿ ಅತ್ಯಾಚಾರ, ಬಲತ್ಕಾರ ಮಾಡಿದ್ದು, ಪರಿಣಾಮವಾಗಿ ಐದು ಬಾರಿ ಗರ್ಭಪಾತ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಐದು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ‌ ಯುವತಿಯ ಕುಟುಂಬಸ್ಥರು ಉಮೇಶ್ ಬಳಿ ಸಹಾಯ ಕೇಳಿದ್ದರು. ಅದರಂತೆ ಚಿತ್ರದುರ್ಗದಿಂದ ದಾವಣಗೆರೆಗೆ ಯುವತಿಯನ್ನು ಕರೆಸಿಕೊಂಡ ಸೋದರ ಮಾವನೂ ಆಗಿರುವ ಇನ್​ಸ್ಪೆಕ್ಟರ್ ಉಮೇಶ್, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಬಳಿಕ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ ಮಾಡಿದ್ದನು. ಶಿವಮೊಗ್ಗದಲ್ಲಿ ಯುವತಿ ಬಿಇಡಿ ಓದುತ್ತಿದ್ದಾಗ ಅತ್ಯಾಚಾರ ಎಸಗಿರುವ ಆರೋಪ ಮಾಡಲಾಗಿದೆ.

ಉಮೇಶನ ಈ ದುಷ್ಕೃತ್ಯದಿಂದ ಯುವತಿ ಐದು ಸಲ ಗರ್ಭಾವತಿಯಾಗಿದ್ದು, ಐದು ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಈಗಾಗಲೇ ಉಮೇಶನಿಗೆ ಇಬ್ಬರು ಹೆಂಡತಿಯರಿದ್ದಾರೆ. 3ನೇ ಪತ್ನಿ ಹಾಗೇ ಇರು ಎಂದು ಯುವತಿಯನ್ನು ಒತ್ತಾಯಿಸುತ್ತಿದ್ದನು. ಅಲ್ಲದೆ ದಾವಣಗೆರೆಯ ನಿವೇಶನ ನಿಮಗೆ ಸಿಗದಂತೆ ಮಾಡುತ್ತೇನೆ, ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ. ಅದರ ಅನ್ವಯ ಪೊಲೀಸರು ಕಲಂ 376 ಕ್ಲಾಸ್ (2)(k)(n), 323, 504, 506 ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದಾರೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಜಿ.ಬಿ.ಉಮೇಶ್ ನಾಪತ್ತೆಯಾಗಿದ್ದಾನೆ.

ಹಣ ಅಲ್ಲ ಮಾರಾಯ್ರೆ ಕ್ವಾಲಿಟಿ ಡ್ರೈ ಫ್ರೂಟ್ಸ್ ಕದಿಯುವ ಕಳ್ಳನೀತ

ಬೆಂಗಳೂರು: ಡ್ರೈ ಫ್ರೂಟ್ಸ್ ಅಂಗಡಿಗಳಿಗೆ ನುಗ್ಗುತ್ತಿದ್ದ ಖದೀಮನೊಬ್ಬ ಹಣ ಮುಟ್ಟದೆ ಕೇವಲ ಡ್ರೈ ಫ್ರೂಟ್ಸ್ ಅನ್ನು ಕದ್ದು ಪರಾರಿಯಾಗುತ್ತಿದ್ದ. ರೋಲಿಂಗ್ ಶಟರ್ ಏಳೆದು ಅಂಗಡಿ ಒಳಗೆ ಬಂದು ಮೊಬೈಲ್ ಪ್ಲಾಶ್ ಆನ್ ಮಾಡಿಕೊಂಡು ಕ್ವಾಲಿಟಿ ಇರುವ ಡ್ರೈ ಫ್ರೂಟ್ಸ್ ಕಳ್ಳತನ ಮಾಡಿದ್ದಾನೆ. ಈ ಘಟನೆ ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ರಸ್ತೆ ಗುಂಡಿ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡ ಯವಕ
ರಸ್ತೆ ಗುಂಡಿ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡ ಯವಕ
ಇಡೀ ರಾತ್ರಿ ಕೋಲಾರ ತಾಲೂಕು ಕಚೇರಿ ಕಾವಲಿಗೆ ಕುಳಿತ BJP ಕಾರ್ಯಕರ್ತರು!
ಇಡೀ ರಾತ್ರಿ ಕೋಲಾರ ತಾಲೂಕು ಕಚೇರಿ ಕಾವಲಿಗೆ ಕುಳಿತ BJP ಕಾರ್ಯಕರ್ತರು!