ಬಿಹಾರ: 70ರ ಹರೆಯದ ವ್ಯಕ್ತಿಗೆ ಡಿಕ್ಕಿ ಹೊಡೆದು 8 ಕಿಮೀ ಎಳೆದೊಯ್ದು ಅವರ ಮೇಲೆ ಕಾರು ಚಲಾಯಿಸಿದ ಚಾಲಕ; ವ್ಯಕ್ತಿ ಸ್ಥಳದಲ್ಲೇ ಸಾವು

ಅವರು ಚಾಲಕನಲ್ಲಿ ನಿಲ್ಲಿಸುವಂತೆ ಕಿರುಚಿದರು. ಆದರೆ ಚಾಲಕ ಅದೇ ವೇಗದಲ್ಲಿ ಚಾಲನೆ ಮಾಡುತ್ತಿದ್ದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಜನರು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದ ಚಾಲಕ ಕೊತ್ವಾದ ಕದಮ್ ಚೌಕ್ ಬಳಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ.

ಬಿಹಾರ: 70ರ ಹರೆಯದ ವ್ಯಕ್ತಿಗೆ ಡಿಕ್ಕಿ ಹೊಡೆದು 8 ಕಿಮೀ ಎಳೆದೊಯ್ದು ಅವರ ಮೇಲೆ ಕಾರು ಚಲಾಯಿಸಿದ ಚಾಲಕ; ವ್ಯಕ್ತಿ ಸ್ಥಳದಲ್ಲೇ ಸಾವು
ಸಾಂದರ್ಭಿಕ ಚಿತ್ರ
Updated By: ರಶ್ಮಿ ಕಲ್ಲಕಟ್ಟ

Updated on: Jan 22, 2023 | 6:05 PM

ಪಾಟ್ನಾ: ಬಿಹಾರದಲ್ಲಿ (Bihar) ಕಾರೊಂದು ಹಿರಿಯ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು ಕಾರಿನ ಬಾನೆಟ್‌ಗೆ ಸಿಕ್ಕಿಹಾಕಿಕೊಂಡ ಆ ವ್ಯಕ್ತಿಯನ್ನು ಎಂಟು ಕಿಲೋಮೀಟರ್ ದೂರ ಎಳೆದೊಯ್ದಿದೆ. ನಂತರ ಕಾರು ಚಾಲಕ, ಹಠಾತ್ ಬ್ರೇಕ್‌ ಹಾಕಿದಾಗ ರಸ್ತೆಯ ಮೇಲೆ ವೃದ್ಧರ ಮೇಲೆ ಚಾಲಕ ಕಾರು ಚಲಾಯಿಸಿದ್ದು, ಹಿರಿಯ ವ್ಯಕ್ತಿ ಸ್ಥಳದಲ್ಲೇ ಅಸು ನೀಗಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಬಿಹಾರದ ಪೂರ್ವ ಚಂಪಾರಣ್ (East Champaran) ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಈ ಘಟನೆ ವರದಿಯಾಗಿದೆ. ಸಾವಿಗೀಡಾದ ವ್ಯಕ್ತಿಯನ್ನು ಜಿಲ್ಲೆಯ ಕೋಟ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಗ್ರಾ ಗ್ರಾಮದ ನಿವಾಸಿ 70 ವರ್ಷದ ಶಂಕರ್ ಚೌಧೂರ್ ಎಂದು ಗುರುತಿಸಲಾಗಿದೆ. ಸೈಕ್ಲಿಸ್ಟ್ ಶಂಕರ್ ಚೌಧೂರ್ ಅವರು ಬಾಂಗ್ರಾ ಚೌಕ್ ಬಳಿ ಎನ್ಎಚ್ 27 ಅನ್ನು ದಾಟುತ್ತಿದ್ದಾಗ ಗೋಪಾಲ್ಗಂಜ್ ಪಟ್ಟಣದಿಂದ ವೇಗವಾಗಿ ಬಂದ ಕಾರು ಬೈಸಿಕಲ್ ಗೆ ಡಿಕ್ಕಿ ಹೊಡೆದಿದೆ. ಹೀಗೆ ಕಾಕು ಗುದ್ದಿದಾಗ ಚೌದೂರ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಕಾರಿನ ವೈಪರ್ ಹಿಡಿದು ಕಾರನ್ನು ನಿಲ್ಲಿಸುವಂತೆ ಕೂಗುತ್ತಾ ಅವರು ಮನವಿ ಮಾಡಿದರು ಎನ್ನಲಾಗಿದೆ.

ಅವರು ಚಾಲಕನಲ್ಲಿ ನಿಲ್ಲಿಸುವಂತೆ ಕಿರುಚಿದರು. ಆದರೆ ಚಾಲಕ ಅದೇ ವೇಗದಲ್ಲಿ ಚಾಲನೆ ಮಾಡುತ್ತಿದ್ದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಜನರು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದ ಚಾಲಕ ಕೊತ್ವಾದ ಕದಮ್ ಚೌಕ್ ಬಳಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ. ಶಂಕರ್ ಚೌಧರ್ ಕಾರಿನ ಮುಂದೆ ಕೆಳಗೆ ಬಿದ್ದಿದ್ದು, ಕಾರು ಚಾಲಕ ಅವರ ಮೇಲೆ ಗಾಡಿ ಚಲಾಯಿಸಿ ಪರಾರಿಯಾಗಿದ್ದಾನೆ. ಹಿರಿಯ ವ್ಯಕ್ತಿ ರಸ್ತೆಯಲ್ಲೇ ಕೊನೆಯುಸಿರೆಳಿದಿದ್ದಾರೆ.

ಇದನ್ನೂ ಓದಿ: ದೆಹಲಿ: ಪಂಚತಾರಾ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಿ ಬಿಲ್ ಪಾವತಿಸದೆ ಪರಾರಿಯಾಗಿದ್ದ ದಕ್ಷಿಣ ಕನ್ನಡದ ವ್ಯಕ್ತಿ ಬಂಧನ

ದೆಹಲಿಯಲ್ಲಿ ಹೊಸ ವರ್ಷದ ದಿನದಂದು 20 ವರ್ಷದ ಮಹಿಳೆಯ ಭೀಕರ ಸಾವಿನ ನಂತರ ಇತ್ತೀಚೆಗೆ ದೇಶಾದ್ಯಂತ ಇಂತಹ ಹಲವಾರು ಪ್ರಕರಣಗಳು ವರದಿಯಾಗಿವೆ.

ಮತ್ತಷ್ಟು  ಅಪರಾಧ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ