ಒಡಿಶಾದಲ್ಲಿ 40 ಸಾವಿರದ ಆಸೆಗೆ 4 ವರ್ಷದ ಮಗಳನ್ನು ಮಾರಿದ ದಂಪತಿ
ಒಡಿಶಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಒಡಿಶಾದಲ್ಲಿ ಗಂಡ-ಹೆಂಡತಿ ತಮ್ಮ 4 ವರ್ಷದ ಮಗಳನ್ನು 40,000 ರೂ.ಗೆ ಮಾರಾಟ ಮಾಡಿದ್ದಾರೆ. ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ.
ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ 4 ವರ್ಷದ ಬಾಲಕಿಯನ್ನು ಆಕೆಯ ಪೋಷಕರು 40,000 ರೂ.ಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಆಕೆಯನ್ನು ಬಡಗಡ ಪೊಲೀಸರು ರಕ್ಷಿಸಿದ್ದಾರೆ. ಬಿಹಾರ ಮೂಲದ ಆರೋಪಿ ದಂಪತಿಗಳು ಮತ್ತು ಇತರ ನಾಲ್ವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಆರೋಪಿ ದಂಪತಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ದುಡ್ಡಿಗಾಗಿ ತಮ್ಮ 4 ವರ್ಷದ ಮಗುವನ್ನು ಪಿಪಿಲಿಯಲ್ಲಿ ಮತ್ತೊಂದು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದಾರೆ. ಬಡಗಡ ಪೊಲೀಸ್ ಠಾಣೆಯ ಅಧಿಕಾರಿಯಾದ ತೃಪ್ತಿ ರಂಜನ್ ನಾಯಕ್ ಅವರ ಪ್ರಕಾರ, ಅವರಿಬ್ಬರು ದಿನಗೂಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಟ್ರಕ್ ಅಡಿ ಸಿಲುಕಿ ಮಗು ಸಾವು; ಶಾಕಿಂಗ್ ವಿಡಿಯೋ ವೈರಲ್
ವರದಿಗಳ ಪ್ರಕಾರ, ಆರೋಪಿ ದಂಪತಿಗಳು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ನಾಲ್ಕು ವರ್ಷದ ಮಗುವನ್ನು ಪಿಪಿಲಿಯಲ್ಲಿ ಮತ್ತೊಂದು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಬಡಗಡ ಪೊಲೀಸರು ಮಗುವನ್ನು ರಕ್ಷಿಸಿ ತನಿಖೆ ಆರಂಭಿಸಿದ್ದಾರೆ. ಮಧ್ಯವರ್ತಿಗಳು ಮತ್ತು ಮಗುವಿನ ಪೋಷಕರು ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ.
#WATCH | Bhubaneswar, Odisha: On a couple selling their four-year-old daughter, Badagada Police Station IIC, Trupti Ranjan Nayak says, “Today morning we received information from one Sarthak Mahadik that a Bihar couple residing in his home, have sold their four-year-old daughter.… pic.twitter.com/4k6VM7guWG
— ANI (@ANI) November 27, 2024
ಇಂದು ಬೆಳಗ್ಗೆ ಸಾರ್ಥಕ್ ಮಹಾದಿಕ್ ಎಂಬಾತನಿಂದ ಬಿಹಾರದ ದಂಪತಿ ತಮ್ಮ ಮನೆಯಲ್ಲಿ ವಾಸಿಸುವ ತಮ್ಮ 4 ವರ್ಷದ ಮಗಳನ್ನು ಮಾರಾಟ ಮಾಡಿದ್ದಾರೆ ಎಂದು ನಮಗೆ ಮಾಹಿತಿ ಬಂದಿತು. ನಾವು ಪ್ರಕರಣ ದಾಖಲಿಸಿದ್ದೇವೆ. ಪಿಪಿಲಿ ಪ್ರದೇಶದ ಗ್ರಾಮದಿಂದ ಬಾಲಕಿಯನ್ನು ರಕ್ಷಿಸಲಾಗಿದ್ದು, ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ನೆಲಮಂಗಲದಲ್ಲಿ 15 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧನಿಂದ ಅತ್ಯಾಚಾರ
ಮಗುವಿನ ಪೋಷಕರು ತಮ್ಮ ಮಗುವನ್ನು ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಅಕ್ರಮ ವಹಿವಾಟಿಗೆ ಸಹಕರಿಸಿದ ಬಡಗಡ ಪ್ರದೇಶದ ಇಬ್ಬರು ಮಧ್ಯವರ್ತಿಗಳನ್ನು ಸಹ ಬಂಧಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:15 pm, Thu, 28 November 24