Shocking News: ಅನೈತಿಕ ಸಂಬಂಧದ ಆರೋಪ; ಮಹಿಳೆಗೆ ಚಿತ್ರಹಿಂಸೆ ನೀಡಿ, ಅರೆಬೆತ್ತಲೆ ಮೆರವಣಿಗೆ

|

Updated on: Sep 05, 2024 | 8:17 PM

ಪೊಲೀಸರ ಪ್ರಕಾರ, ಈ ವಿಡಿಯೋ ಬಿಹಾರದ ಸುಪೌಲ್ ಜಿಲ್ಲೆಯ ಕರ್ಜೈನ್ ಗ್ರಾಮದಲ್ಲಿ ನಡೆದ ಘಟನೆಯದಾಗಿದ್ದು, ಮೂರ್ನಾಲ್ಕು ದಿನಗಳ ಹಿಂದೆ ರೆಕಾರ್ಡ್ ಮಾಡಲಾಗಿದೆ. ಮಹಿಳೆಯನ್ನು ಹೊಡೆದು, ಚಿತ್ರಹಿಂಸೆ ನೀಡಲಾಯಿತು. ನಂತರ ಆಕೆಯ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು. ಬಳಿಕ ಆಕೆಯ ಪ್ರೇಮಿಯನ್ನು ಕೂಡ ವಿವಸ್ತ್ರಗೊಳಿಸಲಾಯಿತು.

Shocking News: ಅನೈತಿಕ ಸಂಬಂಧದ ಆರೋಪ; ಮಹಿಳೆಗೆ ಚಿತ್ರಹಿಂಸೆ ನೀಡಿ, ಅರೆಬೆತ್ತಲೆ ಮೆರವಣಿಗೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಬಿಹಾರದ ಸುಪೌಲ್‌ನಲ್ಲಿ ದಂಪತಿಯನ್ನು ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಬಿಹಾರದ ಪೊಲೀಸರು ಇಂದು ಈ ಘಟನೆಗೆ ಸಂಬಂಧಿಸಿದಂತೆ ಶಂಕಿತನನ್ನು ಬಂಧಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ವೈರಲ್ ಆಗಿರುವ ಈ ವಿಡಿಯೋ ಬಿಹಾರದ ಸುಪೌಲ್ ಜಿಲ್ಲೆಯ ಕರ್ಜೈನ್ ಗ್ರಾಮದಲ್ಲಿದ್ದು, ಮೂರ್ನಾಲ್ಕು ದಿನಗಳ ಹಿಂದೆ ರೆಕಾರ್ಡ್ ಮಾಡಲಾಗಿದೆ. ಮಹಿಳೆಯನ್ನು ಹೊಡೆದು, ಚಿತ್ರಹಿಂಸೆ ನೀಡಲಾಯಿತು ಮತ್ತು ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಮಗುವಿನ ಮೇಲೆ ಅತ್ಯಾಚಾರ, ಕೊಲೆ; ತನಗೆ ಗಲ್ಲು ಶಿಕ್ಷೆ ನೀಡಲು ಅಪರಾಧಿಯಿಂದ ನ್ಯಾಯಾಧೀಶರಿಗೆ ಮನವಿ

“ಮಹಿಳೆಯನ್ನು ಬಟ್ಟೆ ಬಿಚ್ಚಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ನಡೆದಿರುವುದು ಕರ್ಜೈನ್‌ನಲ್ಲಿ ಎಂದು ಖಚಿತಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಓರ್ವ ಆರೋಪಿ, ಇತರ ಶಂಕಿತರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Shocking News: 9 ದಿನದ ಮಗುವಿಗೆ ಪಪ್ಪಾಯ ಹಾಲು ಹಾಕಿ ಕೊಂದ ಅಪ್ಪ-ಅಮ್ಮ; ಕಾರಣ ಕೇಳಿದ್ರೆ ಶಾಕ್ ಆಗ್ತೀರ!

ಈ ಘಟನೆಯ ದೃಶ್ಯಗಳು ಆ ಮಹಿಳೆ ತನ್ನನ್ನು ಬಿಡುವಂತೆ ಮನವಿ ಮಾಡುವಾಗ ಅವಳ ಕೂದಲು ಹಿಡಿದು ಎಳೆದಾಡುವುದನ್ನು ತೋರಿಸುತ್ತದೆ. ಬಳಿಕ ಆರೋಪಿ ಆಕೆಯನ್ನು ಆಕೆಯ ಮನೆ ಮುಂದೆ ಬಿಟ್ಟು ಹೋಗಿದ್ದಾನೆ. ನಂತರ ಸಂತ್ರಸ್ತೆಯ ಕುಟುಂಬ ಪೊಲೀಸರಿಗೆ ದೂರು ನೀಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ