Shocking News: 9 ದಿನದ ಮಗುವಿಗೆ ಪಪ್ಪಾಯ ಹಾಲು ಹಾಕಿ ಕೊಂದ ಅಪ್ಪ-ಅಮ್ಮ; ಕಾರಣ ಕೇಳಿದ್ರೆ ಶಾಕ್ ಆಗ್ತೀರ!

ಎರಡನೇ ಮಗುವೂ ಹೆಣ್ಣಾಯಿತೆಂಬ ಕಾರಣಕ್ಕೆ ಹೆತ್ತ ಅಪ್ಪ-ಅಮ್ಮನೇ 9 ದಿನದ ಹಸುಳೆಗೆ ವಿಷ ಸುರಿದು ಕೊಂದಿರುವ ಘಟನೆ ಭಾರೀ ಆಘಾತಕ್ಕೆ ಕಾರಣವಾಗಿದೆ. ತಾಯಿ ಮತ್ತು ತಂದೆ ಪಪ್ಪಾಯಿ ಮರವನ್ನು ಕಡಿದು ಅದರಲ್ಲಿದ್ದ ವಿಷಯುಕ್ತ ಹಾಲನ್ನು ಮಗುವಿಗೆ ಕುಡಿಸಿದ್ದಾರೆ. ಇದರಿಂದ ಮಗುವಿನ ಬಾಯಿ ಮತ್ತು ಮೂಗಿನಲ್ಲಿ ದ್ರವ ತುಂಬಿ ಉಸಿರುಗಟ್ಟಿ ಸಾವನ್ನಪ್ಪಿದೆ.

Shocking News: 9 ದಿನದ ಮಗುವಿಗೆ ಪಪ್ಪಾಯ ಹಾಲು ಹಾಕಿ ಕೊಂದ ಅಪ್ಪ-ಅಮ್ಮ; ಕಾರಣ ಕೇಳಿದ್ರೆ ಶಾಕ್ ಆಗ್ತೀರ!
ಮಗು
Follow us
|

Updated on: Sep 05, 2024 | 5:00 PM

ಚೆನ್ನೈ: ಎರಡನೇ ಬಾರಿಯೂ ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ದಂಪತಿ ತಮ್ಮ 9 ದಿನದ ಮಗುವಿಗೆ ವಿಷ ಸುರಿದು ಕೊಂದಿದ್ದಾರೆ. 30 ವರ್ಷದ ಜೀವಾ ವೆಲ್ಲೂರು ಜಿಲ್ಲೆಯ ಒಡುಗತ್ತೂರ್ ಪ್ರದೇಶದವರು. ಅವರು ಓದುಗತ್ತೂರಿನ 25 ವರ್ಷದ ಡಯಾನಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಈಗಾಗಲೇ 2 ವರ್ಷದ ಮಗಳಿದ್ದಾಳೆ. ಈ ದಂಪತಿ ಇದೀಗ ತಮ್ಮ 2ನೇ ಮಗುವನ್ನು ಕೊಲೆ ಮಾಡಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಡಯಾನಾಗೆ ಆಗಸ್ಟ್ 27ರಂದು ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದಾದ ಬಳಿಕ ಡಯಾನಾ ಅವರ ರಕ್ತದ ಕೌಂಟ್ ಕುಸಿದಿದ್ದರಿಂದ ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ, 9 ದಿನಗಳ ನಂತರ ನಿನ್ನೆ ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು.

ಇದನ್ನೂ ಓದಿ: Shocking News: ಅಮ್ಮನ ಪಕ್ಕ ಮಲಗಿದ್ದ ಮಗುವಿಗೆ ಕಚ್ಚಿದ ಹಾವು; ಮೂಢನಂಬಿಕೆಯಿಂದ ಶಿಶುವಿನ ಸಾವು

ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗೆ ಎರಡನೇ ಬಾರಿಯೂ ಹೆಣ್ಣು ಮಗು ಹುಟ್ಟಿದ್ದರಿಂದ ಅವರು ಬೇಸರಗೊಂಡಿದ್ದರು. ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಇಂದು ಡಯಾನಾ ತನ್ನ ಮಗು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತನ್ನ ತಂದೆಗೆ ಹೇಳಿದರು. ಆಗ ಮನೆಯವರೆಲ್ಲರೂ ಬಂದು ನೋಡಿದಾಗ ಮಗು ಮೃತಪಟ್ಟಿರುವುದನ್ನು ಕಂಡು ಆಘಾತಕ್ಕೀಡಾದರು. ಆಗ ಡಯಾನಾ ತಂದೆ ಶರವಣನ್ ಮಗು ಹೇಗೆ ಸತ್ತಿತು ಎಂದು ಕೇಳಿದರು.

ಅದಕ್ಕೆ ಆಕೆಯ ಗಂಡ ಜೀವಾ ತನ್ನ ಮೊದಲ ಮಗಳು ಶ್ರೀದೇಜಾ ಕಂಬಳಿಯನ್ನು ತೆಗೆದುಕೊಂಡು ಹೋಗಿ ಮಗುವಿನ ಮುಖಕ್ಕೆ ಹಾಕಿದ್ದು, ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಜೀವಾ ಮತ್ತು ಆತನ ಪತ್ನಿ ಡಯಾನಾ ತರಾತುರಿಯಲ್ಲಿ ಮನೆಯ ಸಮೀಪದಲ್ಲಿಯೇ ಗುಂಡಿ ತೋಡಿ ಮಗುವಿನ ಶವವನ್ನು ಹೂತು ಹಾಕಿದ್ದಾರೆ. ಇದರಿಂದ ಅನುಮಾನಗೊಂಡ ಡಯಾನಾಳ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Crime News: 5 ವರ್ಷದ ಮಗಳಿಗೆ ತಂದೆಯಿಂದಲೇ ಲೈಂಗಿಕ ಕಿರುಕುಳ

ಆಗ ಜೀವಾ ಮತ್ತು ಡಯಾನಾ ಇಬ್ಬರೂ ಹೇಳಿದ್ದು ಒಂದೇ ಉತ್ತರ. ಹೀಗಾಗಿ, ಪೊಲೀಸರು ಅವರ ಮೇಲೆ ನಿರಂತರ ನಿಗಾ ಇರಿಸಿದ್ದರು. ಇಂದು ಮಧ್ಯಾಹ್ನದಿಂದ ಅವರಿಬ್ಬರೂ ಮನೆಯಿಂದ ಪರಾರಿಯಾಗಿದ್ದಾರೆ. ಇದಾದ ಬಳಿಕ ಪೊಲೀಸರು ಇವರನ್ನು ಹಿಡಿಯಲು ತನಿಖೆ ನಡೆಸಿದಾಗ ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, ಮನೆಯ ಹಿತ್ತಿಲಿನಲ್ಲಿದ್ದ ಪಪ್ಪಾಯ ಮರವನ್ನು ಕಡಿದು ಅದರಲ್ಲಿದ್ದ ವಿಷಪೂರಿತ ಹಾಲನ್ನು ತಾಯಿ ಮತ್ತು ತಂದೆ ಆ 9 ದಿನದ ಮಗುವಿನ ಮೇಲೆ ಸುರಿದಿದ್ದಾರೆ.

ಇದರಿಂದ ಮಗುವಿನ ಬಾಯಿ ಮತ್ತು ಮೂಗಿನಲ್ಲಿ ದ್ರವ ತುಂಬಿ ಉಸಿರುಗಟ್ಟಿ ಸಾವನ್ನಪ್ಪಿದೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೀವಾ ಮತ್ತು ಆತನ ಪತ್ನಿ ಡಯಾನಾ ತಮ್ಮ ಮಗುವನ್ನು ಕೊಂದು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ