AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿಯಾದ ಬೈಕ್; ಆಕ್ರೋಶಗೊಂಡು ಕಾಲಿನಿಂದ ಒದ್ದು ಬೈಕ್ ಸವಾರನ ಹತ್ಯೆ

ಬೈಕ್​ಗೆ ಅಚಾನಕ್ಕಾಗಿ ಕಾರು ಗುದ್ದಿದ ಪರಿಣಾಮ, ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಡಿಕ್ಕಿಯಾಗಿದೆ. ಆಕ್ರೋಶಗೊಂಡ ಪಾದಚಾರಿ ಒದ್ದು, ಸವಾರನನ್ನು ಹತ್ಯೆ ಮಾಡಿದ್ದಾನೆ.

ಬೆಳಗಾವಿ: ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿಯಾದ ಬೈಕ್; ಆಕ್ರೋಶಗೊಂಡು ಕಾಲಿನಿಂದ ಒದ್ದು ಬೈಕ್ ಸವಾರನ ಹತ್ಯೆ
ಮೃತಪಟ್ಟ ಬೈಕ್ ಸವಾರ ವಿಜಯಮಹಾಂತೇಶ್ ಹಿರೇಮಠ
TV9 Web
| Updated By: shivaprasad.hs|

Updated on:Oct 28, 2021 | 5:41 PM

Share

ಬೆಳಗಾವಿ: ಪಾದಚಾರಿಗೆ ಬೈಕ್ ಡಿಕ್ಕಿಯಾಗಿದ್ದಕ್ಕೆ ಕಾಲಿನಿಂದ ಒದ್ದು ಸವಾರನ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಚೌಕಿಮಠ ಕ್ರಾಸ್‌ನಲ್ಲಿ ನಡೆದಿದೆ. ವಿಜಯಮಹಾಂತೇಶ್ ಹಿರೇಮಠ ಎಂಬುವವರು ಬೈಕ್ ಮೇಲೆ ಬರುತ್ತಿದ್ದರು. ಬೈಕ್​ಗೆ ಹಿಂದಿನಿಂದ ಕಾರು ಗುದ್ದಿದ ಕಾರಣ, ಪಾದಚಾರಿಗೆ ಹೋಗಿ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಗುದ್ದುತ್ತಿದ್ದಂತೆ ಆರೋಪಿ ಆಕ್ರೋಶಗೊಂಡು ಸವಾರ ವಿಜಯ ಮಹಾಂತೇಶ್‌ಗೆ ಕಾಲಿನಿಂದ ಒದ್ದಿದ್ದಾನೆ. 67 ವರ್ಷದ ವಿಜಯ ಮಹಾಂತೇಶ್ ಸ್ಥಳದಲ್ಲೇ ಕುಸಿದು ಬಿದ್ದು  ಸಾವನ್ನಪ್ಪಿದ್ದಾರೆ.ಕಿತ್ತೂರು ತಾಲೂಕಿನ ಮಲ್ಲಾಪೂರ ಗ್ರಾಮದ ಅದೃಶ್ಯ ಎಂಬಾತನಿಂದ ಕೃತ್ಯ ನಡೆದಿದ್ದು, ಸಿಸಿಟಿವಿಯಲ್ಲಿ ಕೃತ್ಯದ ದೃಶ್ಯ ದಾಖಲಾಗಿದೆ. ಕೂಡಲೇ ಆರೋಪಿ ಅದೃಶ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿಯಾಗಿ ಭತ್ತದ ಗದ್ದೆಯಲ್ಲೇ ರೈತ ಸಾವು: ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿಯಾಗಿ ಭತ್ತದ ಗದ್ದೆಯಲ್ಲೇ ರೈತ ಕೊನೆಯುಸಿರೆಳೆದಿರುವ ದಾರುಣ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ರಸ್ತೆಯ ಜಮೀನಿನಲ್ಲಿ ಪ್ರಕರಣ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಪ್ರಕಾಶ್ (43) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಭತ್ತದ ಗದ್ದೆ ಉಳುಮೆ ಮಾಡುವ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಪರಿಣಾಮ ತಲೆ ಮತ್ತು ಮುಖಕ್ಕೆ ತೀವ್ರ ಪೆಟ್ಟಾದ್ದರಿಂದ ಕೆಸರು ಗದ್ದೆಯಲ್ಲೇ ಸಾವನ್ನಪ್ಪಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದ್ದ ಬೊಲೆರೊ ಹಿಂಬಾಲಿಸಿದವರಿಗೆ ಗನ್ ತೋರಿಸಿ ಪರಾರಿಯಾದ ಕಳ್ಳರು: ಕದ್ದ ಬೊಲೆರೊ ಹಿಂಬಾಲಿಸಿದವರಿಗೆ ಗನ್ ತೋರಿಸಿ ಸಿನಿಮೀಯ ರೀತಿಯಲ್ಲಿ ಮುಸುಕುಧಾರಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಬೆನ್ನು ಹತ್ತಿದವರ ಮೇಲೆ ಗುಂಡುಹಾರಿಸಲು ಕಳ್ಳರು ಗುಂಡುಹಾರಿಸಲು ಯತ್ನಿಸಿದ್ದರು. ತಮಿಳುನಾಡಿನ ಹೊಸೂರಿನ ರಾಕೇಶ್​ ಎಂಬುವವರಿಗೆ ಬೊಲೆರೊ ಸೇರಿತ್ತು. ಸೋಮವಾರ ಮಧ್ಯರಾತ್ರಿ ಮನೆ ಮುಂದೆ ನಿಲ್ಲಿಸಿದ್ದಾಗ ಕಳವು ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ರಾಕೇಶ್ ಫೋಟೋ ಹಾಕಿದ್ದರು. ನೆಲಮಂಗಲ ಬಳಿ ಕಾಣಿಸಿಕೊಂಡಿದ್ದ ಬೊಲೆರೊ ವಾಹನವು, ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಕಳವು ಮಾಡಿದ್ದ ಬೊಲೆರೊವನ್ನು ಗ್ಯಾಂಗ್ ರಸ್ತೆಯಲ್ಲಿ ನಿಲ್ಲಿಸಿಕೊಂಡಿತ್ತು. ಇದನ್ನು ಗಮನಿಸಿ ಮಾಲೀಕ ರಾಕೇಶ್​ಗೆ ಸ್ನೇಹಿತರು ತಿಳಿಸಿದ್ದರು.

ಬೆಂಗಳೂರಿನಲ್ಲಿರುವ ಸಂಬಂಧಿಕರಾದ ನಂದಕಿಶೋರ್, ಹ್ಯಾರಿಸ್​ಗೆ ರಾಕೇಶ್ ಮಾಹಿತಿ ನೀಡಿದ್ದರು. ಬೊಲೆರೊ ಹುಡುಕಿಕೊಂಡು ನೆಲಮಂಗಲಕ್ಕೆ ತೆರಳಿದ್ದರು. ತುಮಕೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೊಲೆರೊ ವಾಹನವನ್ನು ತಡೆಯಲು ಯತ್ನಿಸಿದ್ದ ನಂದಕಿಶೋರ್, ಹ್ಯಾರಿಸ್​ ಮೇಲೆ ಗ್ಯಾಂಗ್ ಗುಂಡುಹಾರಿಸಲು ಯತ್ನಿಸಿತ್ತು. ಉತ್ತರ ಭಾರತ ಮೂಲದ ದರೋಡೆಕೋರರೆಂಬ ಅನುಮಾನ ವ್ಯಕ್ತವಾಗಿದ್ದು, ಕದ್ದ ಬೊಲೆರೊಗೆ ತಮಿಳುನಾಡು ಬೋರ್ಡ್ ತೆಗೆದು ಮಹಾರಾಷ್ಟ್ರ ಬೋರ್ಡ್​ ಹಾಕಿದ್ದರು. ನೆಲಮಂಗಲ, ಮಧುಗಿರಿ ಠಾಣೆಗಳ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು ತುಮಕೂರು: ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಅರಕೆರೆ ಗ್ರಾಮದ ಬಳಿ ನಡೆದಿದೆ. ಬೈಕ್ ಸವಾರ ಮಧು ಪುರಾಣಿಕ(40) ಸ್ಥಳದಲ್ಲೇ ಸಾವನ್ನಪ್ಪಿದ್ದು, ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಘಟನೆ ನಡೆದಿದೆ.

ಇದನ್ನೂ ಓದಿ:

Mandya: ಮಂಡ್ಯ ಎಸ್​ಪಿ ಹುದ್ದೆ ಹರಾಜಿಗಿದೆ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್

ತ್ರಿಪುರದಲ್ಲಿ ಎಲ್ಲ ಮಸೀದಿಗಳಿಗೂ ಪೊಲೀಸ್​ ಬಿಗಿ ಭದ್ರತೆ; ಎರಡು ಸ್ಥಳಗಳಲ್ಲಿ ಸೆಕ್ಷನ್​ 144 ಜಾರಿ

Published On - 5:41 pm, Thu, 28 October 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!