ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ಹೂಡಿಕೆ ಆಮಿಷ ತೋರಿಸಿ ಜನರಿಗೆ ವಂಚನೆ; ಇನ್ಸ್​ಟ್ರಾಗ್ರಾಮ್​ನಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ ಗ್ಯಾಂಗ್​ ಅಂದರ್

| Updated By: ಗಂಗಾಧರ​ ಬ. ಸಾಬೋಜಿ

Updated on: Mar 28, 2022 | 9:39 AM

ಮದ್ವೆ ಊಟ ಮಾಡಿದ 20ಕ್ಕೂ ಹೆಚ್ಚು ಜನರಿಗೆ ವಾಂತಿ ಭೇಧಿಯಾಗಿ ತೀವ್ರ ಅಸ್ವಸ್ಥಗೊಂಡಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಜಗಳೂರು ತಾಲೂಕಿನ ಕಲ್ಲೆದೇವಪುರ ಗ್ರಾಮ ರಾಜಣ್ಣ-ಶಾಂತಮ್ಮ ಎಂಬುವರ ಪುತ್ರಿಯ ವಿವಾಹದಲ್ಲಿ ಘಟನೆ ನಡೆದಿದೆ.

ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ಹೂಡಿಕೆ ಆಮಿಷ ತೋರಿಸಿ ಜನರಿಗೆ ವಂಚನೆ; ಇನ್ಸ್​ಟ್ರಾಗ್ರಾಮ್​ನಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ ಗ್ಯಾಂಗ್​ ಅಂದರ್
ಅಂದರ್ ಆದ ಆರೋಪಿಗಳು.
Follow us on

ಬೆಂಗಳೂರು: ಇನ್ಸ್​ಟ್ರಾಗ್ರಾಮ್​ನಲ್ಲಿ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್​ನಲ್ಲಿ ಹೆಚ್ಚು ಹಣ ಸಂದಾಯ ಮಾಡುವಂತೆ ಜಾಹಿರಾತು ನೀಡಿ ವಂಚಿಸುತ್ತಿದ್ದ ಗ್ಯಾಂಗ್  ಪೊಲೀಸರ ಬಲೆಗೆ ಬಿದ್ದಿದೆ. ಕಿರಣ್, ಭರತೇಶ್ ಮತ್ತು ಅರ್ಷದ್ ಮೊಹಿದ್ದೀನ್ ಬಂಧಿತ ಆರೋಪಿಗಳು. Abhishe_akwane ಎಂಬ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಾರೆ. ನಕಲಿ ಫ್ರೊಫೈಲ್​ನಲ್ಲಿ youngest crypto trader minimum 60% profit ಎಂದು ಸಂದೇಶ ಜೊತೆಗೆ ನಕಲಿ ಖಾತೆಯಲ್ಲಿ ಹತ್ತು ಸಾವಿರ ಫಾಲೋವರ್ಸ್ ಕಂಡು, ವ್ಯಕ್ತಿಯೋರ್ವ ಮೆಸೆಂಜರ್​ನಲ್ಲಿ ಸಂಪರ್ಕಿಸಿ 26 ಸಾವಿರ ಹಣ ಹಾಕಿದ್ದ. ಬಳಿಕ ಮತ್ತೊಮ್ಮೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆ ಈಶಾನ್ಯ ಸಿಇಎನ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿಗಳು ಬೆಳಗಾವಿ ರಾಯಬಾಗ್ ದವರಾಗಿದ್ದು, ಸುಲಭವಾಗಿ ಹಣ ಗಳಿಸೋ ಉದ್ದೇಶದಿಂದ ಕೃತ್ಯ ಎಸಗಿದ್ದಾರೆ. ವಿಚಾರಣೆ ವೇಳೆ ಇದೇ ರೀತಿ ಸಾಕಷ್ಟು ಮಂದಿಗೆ ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ಹೂಡಿಕೆ ಆಮಿಷ ತೋರಿಸಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಎರಡು ಮೊಬೈಲ್, ಮೂರು ಸಿಮ್ ಕಾರ್ಡ್ ಮತ್ತು ನಲವತ್ತು ಸಾವಿರ ಹಣ ಸೀಜ್ ಮಾಡಿ, ಈಶಾನ್ಯ ಸಿಇಎನ್ ಪೊಲೀಸರಿಂದ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ.

ಟಿಸಿಗೆ ಹಾಗೂ ವಿದ್ಯುತ್ ತಂತಿಗಳಿಗೆ ಏಕಾಏಕಿ ಕಾಣಿಸಿಕೊಂಡ ಬೆಂಕಿ:

ವಿಜಯಪುರ: ಅಧಿಕ ಪ್ರಮಾಣ ವಿದ್ಯುತ್ ಪ್ರವಹಿಸಿದ ಕಾರಣ ಟಿಸಿಗೆ ಹಾಗೂ ವಿದ್ಯುತ್ ತಂತಿಗಳಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ನಡೆದಿದೆ. ಸಿಂದಗಿ‌‌ ತಾಲೂಕಿನ‌ ಭ್ರಹ್ಮದೇವನಮಡು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ. ನೋಡ ನೋಡುತ್ತಲೇ ವಿದ್ಯುತ್ ತಂತಿಗಳಿಗೆ ಬೆಂಕಿ ತಗುಲಿದ್ದು‌ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಧಿಕ ವೋಲ್ಟೇಜ್ ವಿದ್ಯುತ್ ಹರಿದ ಪರಿಣಾಮ ಗ್ರಾಮಸ್ಥರ ಮನೆಗಳಲ್ಲಿನ ವಿದ್ಯುತ್ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಹಾನಿಗೆ ಹೆಸ್ಕಾಂ ಅಧಿಕಾರಿಗಳ‌ ನಿರ್ಲಕ್ಷ್ಯವೇ ಕಾರಣವೆಂದು‌ ಗ್ರಾಮಸ್ಥರು ಆರೋಪಿಸಿದ್ದಾರೆ. ಗೃಹಪಯೋಗಿ ವಸ್ತುಗಳು‌ ಹಾನಿಗೆ ಪರಿಹಾರ‌ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗುಂಡೇಟಿನಿಂದ ಗಾಯಗೊಂಡಿದ್ದ ಕಾಡೆಮ್ಮೆ ಸಾವು:

ಹಾಸನ : ಬೇಟೆಗಾರರ ಗುಂಡೇಟಿನಿಂದ ಗಾಯಗೊಂಡಿದ್ದ ಕಾಡೆಮ್ಮೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿ ಅಗ್ನಿಗುಡ್ಡದಲ್ಲಿ ಘಟನೆ ನಡೆದಿದೆ. ಗಾಯಗೊಂಡು ಎರಡು ದಿನಗಳಿಂದ ಕಾಡೆಮ್ಮೆ ನರಳಾಡುತ್ತಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಹಾಗೂ ವೈದ್ಯರಿಂದ‌ ಚಿಕಿತ್ಸೆ ನೀಡಲು ಯತ್ನಿಸಿದ್ದು, ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಕಾಡೆಮ್ಮೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ದೂರು ದಾಖಲಿಸಿಕೊಂಡ ಅರಣ್ಯ ಇಲಾಖೆ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.

ಮದುವೆ ಊಟ ಮಾಡಿ 20ಕ್ಕೂ ಹೆಚ್ಚು ಜನ ಅಸ್ವಸ್ಥ:

ದಾವಣಗೆರೆ: ಮದ್ವೆ ಊಟ ಮಾಡಿದ 20ಕ್ಕೂ ಹೆಚ್ಚು ಜನರಿಗೆ ವಾಂತಿ ಭೇಧಿಯಾಗಿ ತೀವ್ರ ಅಸ್ವಸ್ಥಗೊಂಡಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಜಗಳೂರು ತಾಲೂಕಿನ ಕಲ್ಲೆದೇವಪುರ ಗ್ರಾಮ ರಾಜಣ್ಣ-ಶಾಂತಮ್ಮ ಎಂಬುವರ ಪುತ್ರಿಯ ವಿವಾಹದಲ್ಲಿ ಘಟನೆ ನಡೆದಿದೆ. ನಿನ್ನೆ ಸಂಜೆ ಮದ್ವೆ ಊಟ ಮಾಡಿದ್ದು, ತಡರಾತ್ರಿ ವಾಂತಿ ಭೇಧಿ ಶುರುವಾಗಿದೆ. ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಜಗಳೂರು ತಾಲೂಕಾ ಆಸ್ಪತ್ರೆ ಗೆ ದಾಖಲು ಮಾಡಲಾಗಿದ್ದು, ರಾತ್ರಿಯಿಂದಲೇ ಚಿಕಿತ್ಸೆಗೆ ಬಹುತೇಕರು ಚೇತರಿಸಿಕೊಂಡಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಪಟ್ಟಣಕ್ಕೆ ಬಂದ ಕಾಡಿನ ಅತಿಥಿ:

ಕೊಡಗು: ಮಡಿಕೇರಿ ನಗರದ ಮನೆಗಳಿಗೆ ಮುಳ್ಳು ಹಂದಿಗಳು ಎಂಟ್ರಿಕೊಟ್ಟಿವೆ. ನಗರದ ಮ್ಯಾನ್ಸ್ ಕಾಂಪೌಂಡ್ ಬಳಿ ಘಟನೆ ನಡೆದಿದೆ. ಹಲವು ಮನೆಗಳ‌ ಅಂಗಳದಲ್ಲಿ‌ ಎರಡು ಕಾಡು ಹಂದಿಗಳು ಬಿಂದಾಸ್ ಅಡ್ಡಾಡುತ್ತಿವೆ. ಅಪರೂಪದ ಅತಿಥಿ ಕಂಡು ಮಡಿಕೇರಿ‌ ನಿವಾಸಿಗಳು ಆಶ್ಚರ್ಯಪಟ್ಟಿದ್ದಾರೆ. ಕಾಡಿನಿಂದ‌ ಆಹಾರ ಅರಸಿ ನಾಡಿನತ್ತ ಬಂದಿದ್ದ ಜೀವಿಗಳು, ಮರಳಿ ಕಾಡಿನತ್ತ ಹೆಜ್ಜೆ ಹಾಕಿವೆ.

ಇದನ್ನೂ ಓದಿ:

ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್​ ಬಗ್ಗೆ ಗೊತ್ತಾ? ಆ್ಯಪಲ್ ಏರ್ಫೋಡ್​ 2ಗಿಂತ ದುಬಾರಿ; ಇಲ್ಲಿದೆ ವೈರಲ್ ವಿಡಿಯೋ