ತರಬೇತಿ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದ ಐಆರ್ಬಿ ಪೊಲೀಸ್; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಸಿಲಿಕಾನ್ ಸಿಟಿಯಲ್ಲಿ ಆಟೋ ಚೋರಿ ಶುರುವಾಗಿದೆ. ಮಧ್ಯ ರಾತ್ರಿ ಆಟೋ ರಿಕ್ಷಾ ಕದ್ದು ಕಳ್ಳರು ಎಸ್ಕೇಪ್ ಆಗುತ್ತಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯಪುರ: ತರಬೇತಿ ನಿರತ ಐಆರ್ಬಿ ಪೊಲೀಸ್ (IRB Police) ಜಾರ್ಖಂಡ್ನಲ್ಲಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ರಾಜಕುಮಾರ ಗೋಟ್ಯಾಳ್ (42) ಮೃತ ಐಆರ್ಬಿ ಪೊಲೀಸ್. ತರಬೇತಿ ವೇಳೆ ಹೃದಯಾಘಾತದಿಂದ ಮೃತ ಪಟ್ಟಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ತರಬೇತಿಗಾಗಿ ಜಾರ್ಖಂಡ್ಗೆ ತೆರಳಿದ್ದರು. ಇಂದು ರಾಜಕುಮಾರ ಪಾರ್ಥೀವ ಶರೀರ ಬರಡೋಲ ಗ್ರಾಮಕ್ಕೆ ಆಗಮಿಸಿದ್ದು, ಸ್ವಗ್ರಾಮ ಬರಡೋಲದಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದಲ್ಲಿ ರಾಜಕುಮಾರ ಪಾರ್ಥೀವ ಶರೀರದ ಮೆರವಣಿಗೆ ಮಾಡಲಾಗಿದ್ದು, ಪತ್ನಿ, ಓರ್ವ ಪುತ್ರ ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಯಲಿದೆ.
ಯುವಕನೊಬ್ಬನಿಂದ ಜಗಳೂರನಲ್ಲಿ ವಿಚಿತ್ರ ವರ್ತನೆ:
ದಾವಣಗೆರೆ: ಕುಡಿದ ಅಮಲಿನಲ್ಲಿ ವಾಹನಗಳಿಗೆ ಅಡ್ಡಗಟ್ಟಿ ಸಾರ್ವಜನಿಕರಿಗೆ ಕಿರಿಕಿರಿ ಮಾಡಿರುವಂತಹ ಘಟನೆ ನಡೆದಿದೆ. ಯುವಕನೊಬ್ಬನಿಂದ ಜಗಳೂರನಲ್ಲಿ ವಿಚಿತ್ರ ವರ್ತನೆ ಮಾಡಿದ್ದಾನೆ. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಸಾರ್ವಜನಿಕರಿಂದ ಯುವಕನಿಗೆ ಗೂಸಾ ನೀಡಿ, ಪೊಲೀಸರ ವಶಕ್ಕೆ ನೀಡಲಾಗಿದೆ. ಪಟ್ಟಣ ಬಿಇಓ ಕಚೇರಿತ ಮುಂಬಾಗ ಬರುವ ವಾಹನಗಳಿಗೆ ಅಡ್ಡಿ ಪಡಿಸಿದ್ದಾನೆ. ಪ್ರಶ್ನೆ ಮಾಡಿದ ಸ್ಥಳೀಯರ ಮೇಲೆ ಯುವಕ ಹಲ್ಲೆ ಮಾಡಲು ಮುಂದಾಗಿದ್ದಾನೆ. ತೆಲಗು ಮಾತಾಡುತ್ತಿದ್ದು, ಕೆಲ ಹೊತ್ತು ನಡು ರಸ್ತೆಯಲ್ಲಿ ಯುವಕ ಮಲಗಿದ್ದಾನೆ. ರಸ್ತೆಯಲ್ಲಿ ಮಲಗಿದ್ದ ಯುವಕನನ್ನು ಎಬ್ಬಿಸಲು ಸ್ಥಳೀಯರು ಹೋಗಿದ್ದು, ಅವರೊಂದಿಗೂ ಯುವಕ ಜಗಳಕ್ಕೆ ಬಿದಿದ್ದಾನೆ. ನಂತರ ಯುವಕನಿಗೆ ಗೂಸಾ ಕೊಟ್ಟು, ಕೈ ಕಾಲು ಕಟ್ಟಿ ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಆಟೋ ಚೋರಿ:
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಟೋ ಚೋರಿ ಶುರುವಾಗಿದೆ. ಮಧ್ಯ ರಾತ್ರಿ ಆಟೋ ರಿಕ್ಷಾ ಕದ್ದು ಕಳ್ಳರು ಎಸ್ಕೇಪ್ ಆಗುತ್ತಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೊಟ್ಟೆಪಾಡಿಗಾಗಿ ಬಾಡಿಗೆ ಆಟೋ ಓಡಿಸುತ್ತಿದ್ದ ಪುಟ್ಟಸ್ವಾಮಿ ಎನ್ನುವವರ ಆಟೋ ರಿಕ್ಷಾ ಕದ್ದೊಯ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾ.17 ರಂದು ಕೆಲಸ ಮುಗಿಸಿಕೊಂಡು ರಾತ್ರಿ ಮನೆ ಮುಂದೆ ಆಟೋ ನಿಲ್ಲಿಸಿದ್ದರು. ರಾತ್ರಿ ವೇಳೆ ಆಟೋವನ್ನ ಕಳ್ಳರು ಹೊತ್ತೊಯ್ದಿದ್ದು, ಬಳಿಕ ಆಟೋ ರಿಕ್ಷಾ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ಸದ್ಯ ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ದೂರು ನೀಡಿರೋ ಆಟೋ ಚಾಲಕ ಪುಟ್ಟಸ್ವಾಮಿ, ದೂರು ದಾಖಲಿಸಿಕೊಂಡು ಖತರ್ನಾಕ್ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು:
ಬೀರುವಿನ ಲಾಕ್ನ್ನು ಕಲ್ಲಿನಿಂದ ಮುರಿದು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ಎಚ್.ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಪಾಳ್ಯದಲ್ಲಿ ಘಟನೆ ಸಂಭವಿಸಿದೆ. ಎರಡು ದಿನಗಳ ಹಿಂದೆ ಕುಮಾರ್ ಎಂಬುವರ ಮನೆಯಲ್ಲಿ ನಾಲ್ಕು ಲಕ್ಷ ಬೆಲೆ ಬಾಳುವ ಚಿನ್ನಾಭರಣ ಕಳ್ಳತನವಾಗಿದೆ. ಎರಡು ದಿನದ ಹಿಂದೆ ನೈಟ್ ಶಿಪ್ಟ್ ನಲ್ಲಿ ಡ್ಯೂಟಿ ಹೋಗಿದ್ದ ಕುಮಾರ್, ಇದೇ ವೇಳೆ ಮಧ್ಯರಾತ್ರಿ ಮನೆಯ ಡೋರ್ ಲಾಕ್ ಬ್ರೇಕ್ ಮಾಡಿ ಕಳ್ಳತನ ಮಾಡಿರೋ ಆಸಾಮಿಗಳು, ಬೀರುವಿನ ಲಾಕ್ ಮುರಿಯಲಾಗದೆ ರಸ್ತೆಯಲ್ಲಿದ್ದ ಕಲ್ಲನ್ನ ತೆಗೆದುಕೊಂಡು ಹೋಗಿ ಬ್ರೇಕ್ ಮಾಡಿದ್ದಾರೆ. ಕಳ್ಳತನ ಮಾಡಲು ಮನೆ ಬಳಿ ಓಡಾಡ್ತಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಎಚ್.ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನೀಲಗಿರಿ ಮರ ಮೇಲೆ ಚಿರತೆ ಪ್ರತ್ಯಕ್ಷ; ಆತಂಕಗೊಂಡ ಗ್ರಾಮಸ್ಥರು:
ಮಂಡ್ಯ: ಮಳವಳ್ಳಿ ಪಟ್ಟಣದ ದಂಡಿನಮಾರಮ್ಮ ದೇವಸ್ಥಾನದ ಬಳಿ ನೀಲಗಿರಿ ಮರದ ಮೇಲೆ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕಗೊಂಡಿದ್ದು, ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ತಮ್ಮಡಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಜಮೀನಿನ ಮರದ ಮೇಲೆ ಚಿರತೆ ಕುಳಿತುಕೊಂಡಿರುವುದು ಪ್ರತ್ಯಕ್ಷವಾಗಿದೆ. ಮರದ ಮೇಲೆ ಕುಳಿತಿದ್ದ ಚಿರತೆಯನ್ನ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಜನರನ್ನು ಕಂಡು ಮರದಿಂದ ಕೆಳೆಗಿಳಿದು ಕಬ್ಬಿನ ಗದ್ದೆ ಸೇರಿಕೊಂಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಿರತೆ ವಿಡಿಯೋ ವೈರಲ್ಲಾಗಿದೆ.
ಇದನ್ನೂ ಓದಿ:
ಸ್ವಭಾವ ಪ್ರಭಾವ: ಈಗಲೂ ಲತೀಫ್ ಸಾಹೇಬರ ಹೆಂಡತಿಯ ಮಸಾಲೆಖಾರವೇ ನನ್ನಡುಗೆಗೆ