Sign In

By signing in or creating an account, you agree with Associated Broadcasting Company's Terms & Conditions and Privacy Policy.

Spot The Difference: ಈ ಎರಡು ಚಿತ್ರಗಳಲ್ಲಿ 5 ವ್ಯತ್ಯಾಸಗಳಿವೆ; ಗುರುತಿಸಬಲ್ಲಿರಾ?

Trending: ಇಲ್ಲಿ ಎರಡು ಚಿತ್ರಗಳಿವೆ. ಎರಡೂ ಚಿತ್ರಗಳು ನೋಡಲು ಒಂದೇ ರೀತಿ ಕಂಡರೂ ಕೂಡ ಎರಡರಲ್ಲೂ 5 ವ್ಯತ್ಯಾಸಗಳಿವೆ. ಅವುಗಳನ್ನು ಗುರುತಿಸಬಲ್ಲಿರಾ?

Spot The Difference: ಈ ಎರಡು ಚಿತ್ರಗಳಲ್ಲಿ 5 ವ್ಯತ್ಯಾಸಗಳಿವೆ; ಗುರುತಿಸಬಲ್ಲಿರಾ?
ಈ ಚಿತ್ರದಲ್ಲಿ ವ್ಯತ್ಯಾಸ ಗುರುತಿಸಿ
Follow us
TV9 Web
| Updated By: shivaprasad.hs

Updated on: Mar 27, 2022 | 12:26 PM

ಅಂತರ್ಜಾಲದಲ್ಲಿ ಸಾಮಾನ್ಯವಾಗಿ ಬುದ್ಧಿಗೆ ಗುದ್ದು ನೀಡುವ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಕಣ್ಣಿಗೆ ಭ್ರಮೆ ನೀಡುವ ಚಿತ್ರಗಳು, ನೋಟಕ್ಕೆ ಸವಾಲೊಡ್ಡುವ ಚಿತ್ರಗಳು ಜನರ ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲ, ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವುದು ಸೇರಿದಂತೆ, ಮನಸ್ಸನ್ನು ಒತ್ತಡದಿಂದ ದೂರ ಸರಿಸುವ ಟಾಸ್ಕ್​ಗಳು ಜನರಿಗೆ ಪ್ರಿಯವಾಗುತ್ತದೆ. ಅಂಥದ್ದೇ ಎರಡು ಚಿತ್ರಗಳು ಇಲ್ಲಿವೆ. ಇದು ದೊಡ್ಡದೊಂದು ಟಾಸ್ಕ್​ ಏನಲ್ಲ, ಹಾಗಂತ ಚಿಕ್ಕದೂ ಅಲ್ಲ! ನಿಮ್ಮ ಒತ್ತಡವನ್ನು ಒಂದರೆ ಕ್ಷಣ ಬದಿಗಿಟ್ಟೋ ಅಥವಾ ಆಹ್ಲಾದಕರ ಭಾನುವಾರದಂದು ಒಂದು ಘಳಿಗೆ ಬುದ್ಧಿಗೆ ಚಿಂತನೆಗೆ ನೀಡುವ ಬಗ್ಗೆಯೋ ನೀವು ಯೋಚಿಸಿದ್ದರೆ- ಈ ಪರೀಕ್ಷೆ ನಿಮಗಾಗಿ.

ಇಲ್ಲಿ ಎರಡು ಚಿತ್ರಗಳಿವೆ. ಎರಡೂ ಚಿತ್ರಗಳು ನೋಡಲು ಒಂದೇ ರೀತಿ ಕಂಡರೂ ಕೂಡ ಎರಡರಲ್ಲೂ 5 ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳು ನಿಮಗೆ ತಕ್ಷಣ ತಿಳಿಯಬಹುದು, ತಿಳಿಯದೆಯೂ ಇರಬಹುದು. ತುಸು ಗಮನವಿಟ್ಟು ನೋಡಿ. ಆ 5 ವ್ಯತ್ಯಾಸಗಳನ್ನು ಗುರುತಿಸಿ.

ಚಿತ್ರ ಇಲ್ಲಿದೆ ನೋಡಿ:

Image Difference

ಈ ಚಿತ್ರದಲ್ಲಿ ವ್ಯತ್ಯಾಸ ಗುರುತಿಸಿ

ಉತ್ತರ ತಿಳಿಯಿತೇ? . . .

ಮೂರು ಅಥವಾ ನಾಲ್ಕು ವ್ಯತ್ಯಾಸಗಳನ್ನು ಮಾತ್ರ ಗುರುತಿಸಿದಿರಾ? ಇನ್ನೂ ಸ್ವಲ್ಪ ಪ್ರಯತ್ನಿಸಿ. ಐದೂ ವ್ಯತ್ಯಾಸಗಳನ್ನು ನೀವು ಗುರುತಿಸಬಲ್ಲಿರಿ.

.

.

ಎಲ್ಲಾ 5 ವ್ಯತ್ಯಾಸಗಳನ್ನು ಗುರುತಿಸಿದರೇ?

ಉತ್ತರಕ್ಕಾಗಿ ಹುಡುಕುತ್ತಿದ್ದೀರಾ? ಇಲ್ಲಿದೆ ನೋಡಿ:

Image Differences

ಎರಡೂ ಚಿತ್ರಗಳಲ್ಲಿನ ವ್ಯತ್ಯಾಸಗಳು

  1. ಎಡ ಭಾಗದಲ್ಲಿರುವ ಮಗುವಿನ ಟೊಪ್ಪಿಯ ಮೇಲ್ಭಾಗ ಒಂದು ಚಿತ್ರದಲ್ಲಿ ನಾಪತ್ತೆಯಾಗಿದೆ.
  2. ಎಡದಲ್ಲಿರುವ ಹಿಮ ಮಾನವನಲ್ಲಿ ಕಪ್ಪು ಬಣ್ಣದ ಬಟನ್​ಗಳಿವೆ.
  3. ಮಧ್ಯದಲ್ಲಿರುವ ಹಿಮ ಮಾನವನ ಗುಂಡಿಗಳಲ್ಲಿ ವ್ಯತ್ಯಾಸಗಳಿವೆ.
  4. ​ಬಲ ಭಾಗದಲ್ಲಿರುವ ಹಿಮ ಮಾನವನ ಗುಂಡಿಯಲ್ಲೂ ವ್ಯತ್ಯಾಸಗಳಿವೆ.
  5. ಹಿಂಭಾಗದಲ್ಲಿರುವ ಮನೆಯ ಮಾಡು ಎರಡೂ ಚಿತ್ರದಲ್ಲಿ ಬೇರೆಬೇರೆಯಾಗಿದೆ.

ನಿಮ್ಮ ಉತ್ತರಗಳು ಸರಿಯಾಗಿವೆಯೇ?

ಇದನ್ನೂ ಓದಿ:

ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವವನ್ನೇ ಹೇಳಬಹುದಂತೆ!

ಯಾವ ರಾಶಿಯ ಜನರಿಗೆ ಹೆಚ್ಚು ಕೋಪ? ನಿಮ್ಮ ರಾಶಿಯ ವ್ಯಕ್ತಿತ್ವವೇನು? ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ