15 ವರ್ಷ ಸಣ್ಣ ವಯಸ್ಸಿನ ಪೊಲೀಸ್ ಕಾನ್​ಸ್ಟೆಬಲ್ ಜೊತೆ ಪರಾರಿಯಾದ ಬಿಜೆಪಿ ನಾಯಕನ ಪತ್ನಿ

|

Updated on: Sep 25, 2024 | 6:58 PM

ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರೊಬ್ಬರ 45 ವರ್ಷದ ಪತ್ನಿ 30 ವರ್ಷದ ಪೊಲೀಸ್ ಕಾನ್​ಸ್ಟೆಬಲ್ ಜೊತೆ ಓಡಿಹೋಗಿದ್ದು, ಮನೆಯಲ್ಲಿದ್ದ ಎರಡು ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನೂ ದೋಚಿಕೊಂಡು ಹೋಗಿದ್ದಾರೆ. ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

15 ವರ್ಷ ಸಣ್ಣ ವಯಸ್ಸಿನ ಪೊಲೀಸ್ ಕಾನ್​ಸ್ಟೆಬಲ್ ಜೊತೆ ಪರಾರಿಯಾದ ಬಿಜೆಪಿ ನಾಯಕನ ಪತ್ನಿ
ಸಾಂದರ್ಭಿಕ ಚಿತ್ರ
Follow us on

ಲಕ್ನೋ: ಉತ್ತರ ಪ್ರದೇಶದ ಭದೋಹಿಯಲ್ಲಿ ಬಿಜೆಪಿ ನಾಯಕನ ಪತ್ನಿ ತನ್ನ ಪ್ರಿಯಕರನಾದ ಪೊಲೀಸ್ ಕಾನ್​ಸ್ಟೆಬಲ್ ಜೊತೆ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪರಾರಿಯಾಗಿರುವ ಮಹಿಳೆಯೂ ಬಿಜೆಪಿ ಸದಸ್ಯೆಯಾಗಿದ್ದು, ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆಘಾತಕಾರಿ ಸಂಗತಿಯೆಂದರೆ, ಆಕೆ ಪರಾರಿಯಾಗುವಾಗ ತನ್ನೊಂದಿಗೆ 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮತ್ತು 4 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

45 ವರ್ಷದ ಈ ಮಹಿಳೆ ತನಗಿಂತ 15 ವರ್ಷ ಕಿರಿಯ ಗೆಳೆಯನೊಂದಿಗೆ ಓಡಿಹೋಗಿದ್ದಾರೆ. ಆಕೆ ತನ್ನೊಂದಿಗೆ ಒಂದು ಮಗುವನ್ನು ಕರೆದುಕೊಂಡು ಹೋಗಿದ್ದು, ಇನ್ನೊಬ್ಬರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾಳೆ. 30 ವರ್ಷದ ಕಾನ್‌ಸ್ಟೆಬಲ್ ಬಿಜೆಪಿ ನಾಯಕನ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದ. ಆಗ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಬಿಹಾರದಲ್ಲಿ ಆಡುತ್ತಿದ್ದ 3 ವರ್ಷದ ಬಾಲಕನಿಗೆ ಚಾಕುವಿನಿಂದ ಇರಿದು ಕೊಲೆ

ಎರಡೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ಹಣದೊಂದಿಗೆ ಕಾನ್ಸ್‌ಟೇಬಲ್ ಹಾಗೂ ತನ್ನ ಪತ್ನಿ ಮನೆಯಿಂದ ಓಡಿ ಹೋಗಿರುವುದಾಗಿ ಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಕಾನ್ಸ್‌ಟೇಬಲ್ ಹಣಕ್ಕಾಗಿ ಪತ್ನಿಗೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾನ್ ಸ್ಟೇಬಲ್ ತನಗೆ ಜೀವ ಬೆದರಿಕೆ ಹಾಕಬಹುದು ಎಂದು ಪತಿಯೂ ಆತಂಕ ವ್ಯಕ್ತಪಡಿಸಿದ್ದಾರೆ.

ಗಂಡನ ಪ್ರಕಾರ, ಕಾನ್‌ಸ್ಟೆಬಲ್ ಅವರ ಹೆಂಡತಿಯನ್ನು ಮೋಸದಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಅಶ್ಲೀಲ ರೀತಿಯಲ್ಲಿ ಆಕೆಯ ಫೋಟೋಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ವಿಷಯವನ್ನು ಬಹಿರಂಗಪಡಿಸಿದರೆ ಕುಟುಂಬವನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಎಂದು ದೂರುದಾರ ಪತಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ತಾಯಿಯ ಮೇಲೆ ಅತ್ಯಾಚಾರವೆಸಗಿ ತನ್ನ ಹೆಂಡತಿಯಾಗಿರ್ತೀಯಾ ಎಂದು ಕೇಳಿದ್ದ ನೀಚ ಮಗ

ಪತ್ನಿ ಹಾಗೂ ಕಾನ್‌ಸ್ಟೆಬಲ್‌ ಪತ್ತೆಗೆ ಯತ್ನಿಸಿದರೂ ಪತ್ತೆಯಾಗಿಲ್ಲ. ಈ ಘಟನೆಯಲ್ಲಿ ಸ್ಥಳೀಯರ ಕೈವಾಡವಿದೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆ ಹಾಗೂ ಕಾನ್‌ಸ್ಟೆಬಲ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ