ಹೇಳದೆ ಹೊರಹೋದ ಗರ್ಭಿಣಿ ಹೆಂಡತಿಯ ಹೊಟ್ಟೆಗೆ ಚಾಕು, ಸ್ಕ್ರೂಡ್ರೈವರ್​ನಿಂದ ಚುಚ್ಚಿದ ಗಂಡ

ಗರ್ಭಿಣಿಯಾಗಿದ್ದ ಹೆಂಡತಿ ತನಗೆ ಹೇಳದೆ ಹೊರಗೆ ಹೋಗಿದ್ದಾಳೆ ಎಂದು ಕೋಪಗೊಂಡ ಗಂಡನೊಬ್ಬ ಆಕೆಯ ಹೊಟ್ಟೆಗೆ ಚಾಕು ಮತ್ತು ಸ್ಕ್ರೂಡ್ರೈವರ್​ನಿಂದ ಚುಚ್ಚಿ ಹಿಂಸೆ ನೀಡಿದ್ದಾನೆ. ಆ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, 70 ಹೊಲಿಗೆ ಹಾಕಲಾಗಿದೆ. ಸದ್ಯಕ್ಕೆ ಗರ್ಭಿಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೇಳದೆ ಹೊರಹೋದ ಗರ್ಭಿಣಿ ಹೆಂಡತಿಯ ಹೊಟ್ಟೆಗೆ ಚಾಕು, ಸ್ಕ್ರೂಡ್ರೈವರ್​ನಿಂದ ಚುಚ್ಚಿದ ಗಂಡ
ಗರ್ಭಿಣಿ ಹೆಂಡತಿಯ ಹೊಟ್ಟೆಗೆ ಚಾಕು, ಸ್ಕ್ರೂಡ್ರೈವರ್​ನಿಂದ ಚುಚ್ಚಿದ ಗಂಡ
Follow us
|

Updated on:Sep 25, 2024 | 8:10 PM

ಪಾಟ್ನಾ: ಬಿಹಾರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಬಿಹಾರ ರಾಜ್ಯದ ಬಕ್ಸಾರ್‌ನಲ್ಲಿ ನಡೆದಿದೆ. ಬಳಿಕ ಚಾಕು ಮತ್ತು ಸ್ಕ್ರೂಡ್ರೈವರ್‌ನಿಂದ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಪತಿಯಿಂದ ಹಲ್ಲೆಗೊಳಗಾದ ಮಹಿಳೆ ಕಿರುಚಿಕೊಂಡಿದ್ದರಿಂದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಆಗಮಿಸಿದ್ದಾರೆ. ಎಷ್ಟೇ ಬಾಗಿಲು ಬಡಿದರೂ ಯಾರೂ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದ ಮನೆಯವರ ಬಾಗಿಲು ಮುರಿದು ಮನೆಗೆ ನುಗ್ಗಿದ್ದಾರೆ.

ಚಾಕು ಮತ್ತು ಸ್ಕ್ರೂಡ್ರೈವರ್​ನಿಂದ ಚುಚ್ಚಿದ್ದರಿಂದ ಗಾಯಗೊಂಡ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಅವರನ್ನು ಪಿಎಂಸಿಎಚ್‌ಗೆ ಸ್ಥಳಾಂತರಿಸಿದ್ದಾರೆ. ಅಲ್ಲಿ ಮಹಿಳೆಗೆ 70 ಹೊಲಿಗೆ ಹಾಕಲಾಗಿದೆ. ಸದ್ಯ ಗರ್ಭಿಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ಪತಿ ತನ್ನ ಗರ್ಭಿಣಿ ಪತ್ನಿಯ ಮೇಲೆ ಹಲ್ಲೆ ನಡೆಸಿದಾಗ ಮಹಿಳೆಯ ಅತ್ತಿಗೆ ಮತ್ತು ಅತ್ತೆಯರೂ ಮನೆಯಲ್ಲೇ ಇದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ, ಯಾರೂ ಆ ಮಹಿಳೆಗೆ ಸಹಾಯ ಮಾಡಲಿಲ್ಲ. ಗ್ರಾಮಸ್ಥರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಪತ್ನಿ ಮೇಲೆ ಹಲ್ಲೆ ನಡೆಸಿದ ಪತಿ ಓಡಿ ಹೋಗಿದ್ದಾನೆ.

ಇದನ್ನೂ ಓದಿ: ಬಿಹಾರದಲ್ಲಿ ಆಡುತ್ತಿದ್ದ 3 ವರ್ಷದ ಬಾಲಕನಿಗೆ ಚಾಕುವಿನಿಂದ ಇರಿದು ಕೊಲೆ

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಪತ್ನಿಯ ಮೇಲೆ ಏಕೆ ಹಲ್ಲೆ ನಡೆಸಿದ್ದಾನೆ ಎಂದು ಪ್ರಶ್ನಿಸಿದಾಗ ತನ್ನ ಪತ್ನಿ ತಮಗೆ ಹೇಳದೆ ಮನೆಯಿಂದ ಹೊರಗೆ ಓಡಾಡುತ್ತಿದ್ದಳು ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ಗೊತ್ತಾಗಿದೆ.

ಹರಿತವಾದ ಆಯುಧಗಳಿಂದ ಹಲ್ಲೆಗೊಳಗಾದ ಗರ್ಭಿಣಿಯ ದೇಹದ ಮೇಲೆ ಹಲವು ಗುರುತುಗಳಿವೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ. ಆಕೆಯ ಪತಿ ಚಾಕು, ಸ್ಕ್ರೂಡ್ರೈವರ್ ಇತ್ಯಾದಿಗಳಿಂದ ಥಳಿಸಿದ್ದು, ಇದರಿಂದ ಹುಟ್ಟಲಿರುವ ಮಗುವಿನ ಜೀವಕ್ಕೂ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:10 pm, Wed, 25 September 24

ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್