ರಾಯಚೂರು ನ.8: ಹಟ್ಟಿ ಚಿನ್ನದ ಗಣಿ (Hatti Gold Mine) ಸಿನಿಯರ್ ಗೇಜ್ ಆಪರೇಟರ್ಗೆ ಸೈಬರ್ ವಂಚಕರು ಕಳೆದೊಂದು ವರ್ಷದಿಂದ ಬ್ಲ್ಯಾಕ್ ಮೇಲ್ ಮಾಡಿದ್ದು, ಹಟ್ಟಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಟ್ಟಿ ಚಿನ್ನದ ಗಣಿಯಲ್ಲಿ ಮಹೇಂದ್ರ ಕುರ್ಡಿ ಸಿನಿಯರ್ ಗೇಜ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನ ಮಹೇಂದ್ರ ಅವರು ಗಣಿಯೊಳಗಡೆ ಕೆಲಸ ಮಾಡುತ್ತಿದ್ದ ವೇಳೆ ಅವರ ಮೊಬೈಲ್ಗೆ ಒಂದು ಲಿಂಕ್ ಬಂದಿತ್ತು. ಆ ಲಿಂಕ್ ಅನ್ನು ಮಹೇಂದ್ರ ಅವರು ಕ್ಲಿಕ್ ಮಾಡಿದ್ದರು.
ಬಳಿಕ ಮಹೇಂದ್ರ ವಿಡಿಯೋ ಕಾಲ್ನಲ್ಲಿ ನಗ್ನ ಸ್ಥಿತಿಯಲ್ಲಿರುವ ಯುವತಿ ಜೊತೆ ಮಾತನಾಡುತ್ತಿರುವ ರೀತಿಯ ವಿಡಿಯೋ ಕ್ರಿಯೇಟ್ ಮಾಡಲಾಯಿತು. ಆಕೆಯ ಅಶ್ಲೀಲ ವರ್ತನೆಗೆ ತಕ್ಕಂತೆ ಮಹೇಂದ್ರ ವರ್ತಿಸಿರುವ ರೀತಿ ವಿಡಿಯೋ ಎಡಿಟ್ ಮಾಡಲಾಗಿದೆ.
ಈ ವಿಡಿಯೋವನ್ನು ಇಟ್ಟುಕೊಂಡು ಆರೋಪಿಗಳು ಕಳೆದೊಂದು ವರ್ಷದಿಂದ ಹಣಕ್ಕಾಗಿ ಮಹೇಂದ್ರ ಅವರಿಗೆ ನಿರಂತರ ಬ್ಯ್ಲಾಕ್ ಮೇಲ್ ಮಾಡುತ್ತಿದ್ದಾರೆ. ನಿರಂತರ ಬ್ಲ್ಯಾಕ್ ಮೇಲ್ನಿಂದ ಮಹೇಂದ್ರ ಮನನೊಂದಿದ್ದಾರೆ. ಈ ಬಗ್ಗೆ ಮಹೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ತಯಾರಿಸಿ ಖಾಸಗಿ ಚಾನೆಲ್ ವರದಿಗಾರನಿಂದ ಬಿಜೆಪಿ ಕಾರ್ಯಕರ್ತೆಗೆ ಬ್ಲ್ಯಾಕ್ ಮೇಲ್
ದುಷ್ಕರ್ಮಿಗಳು ಇತ್ತೀಚೆಗೆ ಮಹೇಂದ್ರ ಖಾಸಗಿ ಶಾಲೆ ಶಿಕ್ಷಕ ಅಂತ ಅವರ ಅಶ್ಲೀಲ ವಿಡಿಯೋವನ್ನು ವೈರಲ್ ಮಾಡಿದ್ದರು. ಅಲ್ಲದೆ ಅವರ ಕುಟುಂಬಸ್ಥರಿಗೂ ವಿಡಿಯೋ ಶೇರ್ ಮಾಡಿ ದುಷ್ಕರ್ಮಿಗಳು ಆಟಾಟೋಪ ಮೆರದಿದ್ದಾರೆ.
ನಮ್ಮ ಶಾಲೆಯಲ್ಲಿ ಘಟನೆ ನಡೆದಿಲ್ಲ, ಅದು ಹಟ್ಟಿ ಚಿನ್ನದ ಗಣಿಯಲ್ಲಿ ನಡೆದಿದೆ. ಮಹೇಂದ್ರ ಅವರು ನಮ್ಮ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಖಜಾಂಚಿಯಾಗಿದ್ದರು. ನಮ್ಮ ಶಾಲೆ ಹೆಸರು ಉಲ್ಲೇಖಿಸಿ ವಿಡಿಯೋ ವೈರಲ್ ಮಾಡಲಾಗುತ್ತಿದೆ. ವಿಡಿಯೋ ವೈರಲ್ ಬಳಿಕ ಖಜಾಂಜಿ ಸ್ಥಾನಕ್ಕೆ ಮಹೇಂದ್ರರಿಂದ ರಾಜೀನಾಮೆ ಪಡೆಯಲಾಗಿದೆ. ಅವರಿಗೂ, ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಅಂತ ಖಾಸಗಿ ವಿದ್ಯಾಸಂಸ್ಥೆಯ ಅಧ್ಯಕ್ಷ ನರಸಪ್ಪ ಯಾದವ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Wed, 8 November 23