ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಕಂಟೈನರ್ ಟ್ರಕ್​ಗೆ ಡಿಕ್ಕಿ ಹೊಡೆದ BMW ಕಾರು, ನಾಲ್ವರು ಸ್ಥಳದಲ್ಲೇ ಸಾವು

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಕಂಟೈನರ್ ಟ್ರಕ್ ಬಿಎಂಡಬ್ಲ್ಯು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಕಂಟೈನರ್ ಟ್ರಕ್​ಗೆ ಡಿಕ್ಕಿ ಹೊಡೆದ BMW ಕಾರು, ನಾಲ್ವರು ಸ್ಥಳದಲ್ಲೇ ಸಾವು
BMW car collides with container truck on Purvanchal Expressway, four die on the spo
Updated By: ಅಕ್ಷಯ್​ ಪಲ್ಲಮಜಲು​​

Updated on: Oct 17, 2022 | 11:26 AM

ಹಲಿಯಾಪುರ: ಉತ್ತರ ಪ್ರದೇಶದ (Uttar Pradesh )ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ (purvanchal Expressway) ಕಂಟೈನರ್ ಟ್ರಕ್ ಬಿಎಂಡಬ್ಲ್ಯು (BMW)ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಲ್ತಾನ್‌ಪುರದಿಂದ ಹೊರಟಿದ್ದ ಬಿಎಂಡಬ್ಲ್ಯು ಕಾರು ಶುಕ್ರವಾರ ಹಲಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಎಕ್ಸ್‌ಪ್ರೆಸ್‌ವೇಯಲ್ಲಿ ಎದುರಿನಿಂದ ಬಂದ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ.

ವರದಿಗಳ ಪ್ರಕಾರ, ಕಂಟೈನರ್ ಟ್ರಕ್ ಹೊಡೆದ ರಭಸಕ್ಕೆ ಕಾರಿನ ಎಂಜಿನ್ ಮತ್ತು ಎಲ್ಲಾ ನಾಲ್ವರು ಪ್ರಯಾಣಿಕರು ಹಾರಿಹೋಗಿ ಸ್ವಲ್ಪ ದೂರದಲ್ಲಿ ಬಿದ್ದಿದ್ದಾರೆ. ಪೊಲೀಸರು ಮತ್ತು ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (ಯುಪಿಇಐಡಿಎ) ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದರು.

ಇದನ್ನು ಓದಿ: ದೇವಾಲಯದಲ್ಲಿ ಬಾಲ್ಯ ವಿವಾಹ ನಡೆಸಿದ ಮೂವರು ಅರ್ಚಕರ ಬಂಧನ

ಈ ಘಟನೆ ನಡೆಯುವ ಮುನ್ನ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ತನ್ನ ಪಕ್ಕದಲ್ಲೇ ಕೂತಿದ್ದ ಮತ್ತೊಬ್ಬ ಸ್ನೇಹಿತ ನಿಧಾನವಾಗಿ ಹೋಗುವಂತೆ ಎಚ್ಚರಿಸುತ್ತಿದ್ದ ಎಂದು ವರದಿಯಲ್ಲಿ ಹೇಳಾಗಿದೆ. ಅಪಘಾತಕ್ಕೆ ಕಾರು ವೇಗವಾಗಿ ಬಂದಿರುವುದೇ ಕಾರಣ ಎಂದು ಹೇಳಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಮಾಡುತ್ತಿದ್ದ ಇನ್ನೊಂದು ಕಾರಿನವರು ಈ ಆ ಕಾರ ಅಪಘಾತವಾಗುತ್ತದೆ ಎಂದು ಹೇಳುತ್ತಿರವುದನ್ನು ಕೇಳಬಹುದು . 1.2 ಕೋಟಿ ರೂ. ಬೆಲೆಯ BMW ಕಾರು ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಶ್ ಕುಮಾರ್ ಮತ್ತು ಅಧೀಕ್ಷಕ ಪಿ ಸೋಮೆನ್ ಬರ್ಮಾ ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್‌ಡಿಎಂಗೆ ಸೂಚಿಸಿದರು. ಮೃತರನ್ನು ಬಿಹಾರದ ಡೆಹ್ರಿ ನಿವಾಸಿ ಆನಂದ್ ಪ್ರಕಾಶ್ (35), ಬಿಹಾರದ ಔರಂಗಾಬಾದ್ ಮೂಲದ ಅಖಿಲೇಶ್ ಸಿಂಗ್ (35) ಮತ್ತು ದೀಪಕ್ ಕುಮಾರ್ (37) ಎಂದು ಗುರುತಿಸಲಾಗಿದ್ದು, ನಾಲ್ಕನೇ ಮೃತರನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಡಿಎಂ ತಿಳಿಸಿದ್ದಾರೆ.

Published On - 11:26 am, Mon, 17 October 22