Shocking News: ಒಟ್ಟಿಗೇ ಕಾಡಿಗೆ ಹೋಗಿ, ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟ ಮೂವರು ಯುವತಿಯರು !

| Updated By: Lakshmi Hegde

Updated on: Apr 10, 2022 | 5:26 PM

ಶನಿವಾರ ಸಂಜೆಯ ಹೊತ್ತಿಗೆ ಇವರು ಮೂರು ಜನ ಒಟ್ಟಿಗೇ ಸಮೀಪದ ಅರಣ್ಯ ಪ್ರದೇಶಕ್ಕೆ ಹೋಗುವುದನ್ನು ನೋಡಿದವರು ಇದ್ದಾರೆ. ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ರಾತ್ರಿ 9.30 ಆದರೂ ಹುಡುಗಿಯರು ಬಾರದೆ ಇದ್ದಾಗ ತಕ್ಷಣ ಅವರನ್ನು ಹುಡುಕುತ್ತ ಹೋಗಿದ್ದಾರೆ. 

Shocking News: ಒಟ್ಟಿಗೇ ಕಾಡಿಗೆ ಹೋಗಿ, ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟ ಮೂವರು ಯುವತಿಯರು !
ಪ್ರಾತಿನಿಧಿಕ ಚಿತ್ರ
Follow us on

ಒಡಿಶಾದ ನವರಂಗಪುರದಲ್ಲೊಂದು ದುರಂತ ನಡೆದಿದೆ. ನಿನ್ನೆ ಸಂಜೆ ಸುಮಾರು 4.30ಕ್ಕೆ ಒಟ್ಟಿಗೇ ಕಾಡಿಗೆ ಹೋದ ಮೂವರು ಹುಡುಗಿಯರು ರಾತ್ರಿ ಹೊತ್ತಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅದರಲ್ಲೂ ಒಂದೇ ಮರಕ್ಕೆ ಮೂವರೂ ನೇಣು ಬಿಗಿದುಕೊಂಡಿದ್ದಾರೆ. ಅದ್ಯಾಕೆ ಒಟ್ಟಿಗೇ ಕಾಡಿಗೆ ಹೋಗಿ, ಹೀಗೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಬಹುದೊಡ್ಡ ಪ್ರಶ್ನೆ. ಕುಟುಂಬದವರ, ಹೆತ್ತವರು ಆಕ್ರಂದಿಸುತ್ತಿದ್ದಾರೆ. ಊರಲ್ಲಿ ಪ್ರತಿಯೊಬ್ಬರೂ ಶಾಕ್​​ನಲ್ಲಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಶುರುವಿಟ್ಟುಕೊಂಡಿದ್ದಾರೆ. ಮೃತ ಯುವತಿಯರನ್ನು ತೊಹಾರಾ ಎಂಬ ಹಳ್ಳಿಯ ನಿವಾಸಿಗಳಾದ ಹೇಮಲತಾ ಗೌಡಾ (21), ಕೌಸಲ್ಯಾ ಮಜ್ಹಿ (17) ಮತ್ತು ಫುಲಮತಿ ಮಜ್ಹಿ (16) ಎಂದು ಗುರುತಿಸಲಾಗಿದೆ. ಇವರಲ್ಲಿ ಕೌಸಲ್ಯಾ ಮತ್ತು ಫುಲಮತಿ ಇನ್ನೂ ಅಪ್ರಾಪ್ತರೆಂದು ಹೇಳಲಾಗುತ್ತಿದ್ದರೂ, ಉಮೇರಕೋಟೆ ಜಗತ್​ ತಹಸೀಲ್ದಾರ್​ ಜಿಬನ್​ ಚೌಧರಿ ಅದನ್ನು ನಿರಾಕರಿಸಿದ್ದಾರೆ. ಮೃತರೆಲ್ಲರೂ 18 ವರ್ಷ ಮೇಲ್ಪಟ್ಟವರು ಎಂದೇ ಹೇಳುತ್ತಿದ್ದಾರೆ. 

ಶನಿವಾರ ಸಂಜೆಯ ಹೊತ್ತಿಗೆ ಇವರು ಮೂರು ಜನ ಒಟ್ಟಿಗೇ ಸಮೀಪದ ಅರಣ್ಯ ಪ್ರದೇಶಕ್ಕೆ ಹೋಗುವುದನ್ನು ನೋಡಿದವರು ಇದ್ದಾರೆ. ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ರಾತ್ರಿ 9.30 ಆದರೂ ಹುಡುಗಿಯರು ಬಾರದೆ ಇದ್ದಾಗ ತಕ್ಷಣ ಅವರನ್ನು ಹುಡುಕುತ್ತ ಹೋಗಿದ್ದಾರೆ.  ಕಾಡಿನಲ್ಲಿ ಸ್ವಲ್ಪ ಹೊತ್ತು ಹುಡುಕಿದ ಸ್ಥಳೀಯರಿಗೆ ಒಂದೇ ಮರಕ್ಕೆ ಮೂವರ ಶವವನೂ ನೇತಾಡುತ್ತಿರುವ ದೃಶ್ಯ ಕಂಡಿದೆ. ಅದನ್ನು ನೋಡಿ ಹೌಹಾರಿದ ಸ್ಥಳೀಯರು, ಕೂಡಲೇ ಪೊಲೀಸರಿಗೆ ಫೋನ್ ಮಾಡಿದ್ದಾರೆ.

ಕುಟುಂಬದ ಸದಸ್ಯರನ್ನು ಪೊಲೀಸರು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಇವರಿಗೆ ಯಾವುದಾದರೂ ಬೇಸರವಾಗಿತ್ತಾ? ಎಂಬಿತ್ಯಾದಿ ಪ್ರಶ್ನೆಗಳನ್ನೂ ಕೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್​​ಪಿ ಸ್ಮಿತ್​ ಪರಶೋತ್ತಮದಾಸ್​ ಪಾರ್ಮರ್​, ನಾವು ಮೃತ ಯುವತಿಯರ ಸಂಬಂಧಿಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶವಗಳನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿತ್ತು. ಇದೊಂದು ಆತ್ಮಹತ್ಯೆ ಎಂಬುದನ್ನು ಪ್ರಾಥಮಿಕ ತನಿಖೆಗಳು ಹೇಳುತ್ತವೆ. ಹಾಗಿದ್ದಾಗ್ಯೂ ಇನ್ನಷ್ಟು ಆಳವಾಗಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮೃತ ಯುವತಿಯರ ಸಂಬಂಧಿಯಾದ ಬಿಸ್ವಾಂಬರ್​ ಮಜ್ಹಿ ಪ್ರತಿಕ್ರಿಯೆ ನೀಡಿ, ಹುಡುಗಿಯರು ಕಾಣೆಯಾಗಿದ್ದಾರೆ ಎಂಬ ಬಗ್ಗೆ ನಿನ್ನೆ ಸಂಜೆ ಹೊತ್ತಿಗೆ ಗೊತ್ತಾಯಿತು. ನಾವು ಅವರಿಗಾಗಿ ಹುಡುಕಲು ಶುರು ಮಾಡಿದೆವು. ಗ್ರಾಮದ ಮೂಲೆಮೂಲೆಯಲ್ಲಿ ಹುಡುಕಿದರೂ ಅವರ ಸುಳಿವು ಸಿಗಲಿಲ್ಲ. ಬಳಿಕ ಅವರು ಕಾಡಿಗೆ ಹೋಗಿದ್ದನ್ನು ನೋಡಿದವರು ಯಾರೋ ಹೇಳಿದರು. ಕೂಡಲೇ ಅಲ್ಲಿಗೆ ಹೋಗಿ ಹುಡುಕಲು ಶುರು ಮಾಡಿದೆವು. ಆಗ ಅವರ ಶವ ಮರದ ಮೇಲೆ ನೇತಾಡುತ್ತಿದ್ದುದು ಕಂಡುಬಂತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿಮದುವೆ ದಿನ ಹತ್ತಿರ ಬಂದಂತೆ ಮನೆಬಿಟ್ಟು ಹೊರಬರುತ್ತಿಲ್ಲ ಆಲಿಯಾ ಭಟ್​; ನಟಿಗೆ ಕಾಡುತ್ತಿದೆ ಭಯ

Published On - 5:23 pm, Sun, 10 April 22