ಮದುವೆ ದಿನ ಹತ್ತಿರ ಬಂದಂತೆ ಮನೆಬಿಟ್ಟು ಹೊರಬರುತ್ತಿಲ್ಲ ಆಲಿಯಾ ಭಟ್; ನಟಿಗೆ ಕಾಡುತ್ತಿದೆ ಭಯ
ಆಲಿಯಾ ಹಾಗೂ ರಣಬೀರ್ ಕಪೂರ್ ಮದುವೆ ಆಗುತ್ತಿರುವ ವಿಚಾರವನ್ನು ಅಧಿಕೃತ ಮಾಡಿಲ್ಲ. ಆದರೆ, ಇವರು ಮದುವೆ ಆಗುತ್ತಿರುವುದು ನಿಜ. ಈ ಕಾರಣಕ್ಕೆ ಅಭಿಮಾನಿಗಳು ಹಾಗೂ ಪಾಪರಾಜಿಗಳ ಪ್ರಶ್ನೆಗೆ ಉತ್ತರ ನೀಡಲು ಆಲಿಯಾಗೆ ಸಾಧ್ಯವಾಗುತ್ತಿಲ್ಲ.
Updated on: Apr 10, 2022 | 5:05 PM

ನಟಿ ಆಲಿಯಾ ಭಟ್ ಮದುವೆ ದಿನಾಂಕ ಸಮೀಪಿಸಿದೆ. ಏಪ್ರಿಲ್ 14ರಂದು ಆಲಿಯಾ ಹಾಗೂ ರಣಬೀರ್ ಕಪೂರ್ ಮದುವೆ ಆಗುತ್ತಿದೆ. ಈ ಮದುವೆಗೆ ಸಕಲ ಸಿದ್ಧತೆ ನಡೆದಿದೆ. ಆದರೆ, ಈ ಜೋಡಿ ಎಲ್ಲಿಯೂ ಈ ವಿಚಾರವನ್ನು ಅಧಿಕೃತ ಮಾಡಿಲ್ಲ. ಈ ಮಧ್ಯೆ ಆಲಿಯಾ ಭಟ್ ಬಗ್ಗೆ ಹೊಸ ವಿಚಾರ ಕೇಳಿ ಬಂದಿದೆ.

ಆಲಿಯಾ ಭಟ್ ಇತ್ತೀಚೆಗೆ ಯಾವುದೇ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೂ ಬಿದ್ದಿಲ್ಲ. ಕಾರಣ ಅವರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುತ್ತಿಲ್ಲ.

ಆಲಿಯಾ ಹಾಗೂ ರಣಬೀರ್ ಕಪೂರ್ ಮದುವೆ ಆಗುತ್ತಿರುವ ವಿಚಾರವನ್ನು ಅಧಿಕೃತ ಮಾಡಿಲ್ಲ. ಆದರೆ, ಇವರು ಮದುವೆ ಆಗುತ್ತಿರುವುದು ನಿಜ. ಈ ಕಾರಣಕ್ಕೆ ಅಭಿಮಾನಿಗಳು ಹಾಗೂ ಪಾಪರಾಜಿಗಳ ಪ್ರಶ್ನೆಗೆ ಉತ್ತರ ನೀಡಲು ಆಲಿಯಾಗೆ ಸಾಧ್ಯವಾಗುತ್ತಿಲ್ಲ. ಆಲಿಯಾ ಪಾಪರಾಜಿಗಳಿಗೆ ಹೆದರುತ್ತಿದ್ದಾರೆ. ಈ ಕಾರಣಕ್ಕೆ ಅವರು ಮನೆಯಿಂದ ಹೊರಬರುತ್ತಿಲ್ಲ.

ಸೆಲೆಬ್ರಿಟಿಗಳ ಮದುವೆ ಎಂದರೆ ಅದ್ದೂರಿತನ ಇರುತ್ತದೆ. ಆಲಿಯಾ-ರಣಬೀರ್ ಮದುವೆ ಕೂಡ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಆಪ್ತರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಜೋಡಿಗಳ ಮದುವೆ ಈ ಮೊದಲೇ ನಡೆಯಬೇಕಿತ್ತು. ಆದರೆ, ಕೊವಿಡ್ ಕಾಣಿಸಿಕೊಂಡಿತು. ಆ ಬಳಿಕ ರಣಬೀರ್ ತಂದೆ ರಿಷಿ ಕಪೂರ್ ಮೃತಪಟ್ಟರು. ಈ ಎಲ್ಲಾ ಕಾರಣಕ್ಕೆ ಮದುವೆ ಕಾರ್ಯ ಮುಂದೂಡುತ್ತಲೇ ಬರಲಾಗಿತ್ತು.



















