ಬಾಂಬ್ ಬೆದರಿಕೆ ಪ್ರಕರಣದ ಸೆನ್ಸೇಷನಲ್ ಇನ್‌ಸೈಡ್ ಸ್ಟೋರಿ.. ಸಿನಿಮೀಯವಾಗಿದೆ ಓದಿ!
ಬೆಂಗಳೂರು: ಅತ್ತೆ ಮನೆ ಆಸ್ತಿ ಮೇಲಿನ ವ್ಯಾಮೋಹಕ್ಕೆ ಹಚ್ಚಿದ ಕಿಚ್ಚು ಇದೀಗ ಉಗ್ರ ಸಂಘಟನೆ ಹೆಸರಿನಲ್ಲಿ CCB, ಜಡ್ಜ್‌ಗೆ ಬೆದರಿಕೆ ಪತ್ರ ಪ್ರಕರಣವಾಗಿ ಸ್ಫೋಟಕ ತಿರುವು ಪಡೆದಿದೆ. ಇದು ಯಾವುದೇ ರೋಚಕ ಸೀರಿಯಲ್, ಸಿನಿಮಾ ಕತೆಗೆ ಕಮ್ಮಿಯಿಲ್ಲ. ಪತ್ನಿ ಪಾಲಿನ ಆಸ್ತಿ ನುಂಗಲೆಂದೇ ಬಂಧಿತರಿಬ್ಬರೂ ಪ್ಲ್ಯಾನ್ ರೂಪಿಸಿದ್ದು.. ಇದು ಬೆಂಗಳೂರು ಕೋರ್ಟ್ ಬಾಂಬ್ ಪ್ರಕರಣದ ಅತಿ ದೊಡ್ಡ ಸೆನ್ಸೇಷನಲ್ ಇನ್‌ಸೈಡ್ ಸ್ಟೋರಿಯಾಗಿ ಮಾರ್ಪಾಟ್ಟಿದೆ. ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಲಿಂಗದಳ್ಳಿ ಮೂಲದ ರಾಜಶೇಖರ್ […]
ಬೆಂಗಳೂರು: ಅತ್ತೆ ಮನೆ ಆಸ್ತಿ ಮೇಲಿನ ವ್ಯಾಮೋಹಕ್ಕೆ ಹಚ್ಚಿದ ಕಿಚ್ಚು ಇದೀಗ ಉಗ್ರ ಸಂಘಟನೆ ಹೆಸರಿನಲ್ಲಿ CCB, ಜಡ್ಜ್‌ಗೆ ಬೆದರಿಕೆ ಪತ್ರ ಪ್ರಕರಣವಾಗಿ ಸ್ಫೋಟಕ ತಿರುವು ಪಡೆದಿದೆ. ಇದು ಯಾವುದೇ ರೋಚಕ ಸೀರಿಯಲ್, ಸಿನಿಮಾ ಕತೆಗೆ ಕಮ್ಮಿಯಿಲ್ಲ. ಪತ್ನಿ ಪಾಲಿನ ಆಸ್ತಿ ನುಂಗಲೆಂದೇ ಬಂಧಿತರಿಬ್ಬರೂ ಪ್ಲ್ಯಾನ್ ರೂಪಿಸಿದ್ದು.. ಇದು ಬೆಂಗಳೂರು ಕೋರ್ಟ್ ಬಾಂಬ್ ಪ್ರಕರಣದ ಅತಿ ದೊಡ್ಡ ಸೆನ್ಸೇಷನಲ್ ಇನ್‌ಸೈಡ್ ಸ್ಟೋರಿಯಾಗಿ ಮಾರ್ಪಾಟ್ಟಿದೆ.
ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಲಿಂಗದಳ್ಳಿ ಮೂಲದ ರಾಜಶೇಖರ್ ಮತ್ತು ಗುಬ್ಬಿ ತಾಲೂಕಿನ ಹಾಗಲವಾಡಿಯ ವೇದಾಂತ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದ್ವೇಷ ಸಾಧನೆಗೆ ಇವರಿಬ್ಬರು ಈ ಬೆದರಿಕೆ ಪತ್ರದ ಐನಾತಿ ಐಡಿಯಾಗೆ ಕೈ ಹಾಕಿದ್ದಾರೆ.
ಆಸ್ತಿ ಕಲಹದಿಂದ ಬಾಂಬ್ ಬೆದರಿಕೆ ಪತ್ರದತ್ತ ಕಿಲಾಡಿಗಳ ಚಿತ್ತ ರಾಜಶೇಖರ್ ಮತ್ತು ರಮೇಶ್ ಮಧ್ಯೆ ಅತ್ತೆಯ ಆಸ್ತಿಗಾಗಿ ಈ ಹಿಂದೆ ಜಗಳವಾಗಿತ್ತು. ಹಾಗಾಗಿ, ರಮೇಶ್ನನ್ನು ಸಿಲುಕಿಸಲು ಪ್ಲ್ಯಾನ್ ಮಾಡಿದ ರಾಜಶೇಖರ್, ರಮೇಶ್ ವಿರುದ್ಧದ ದ್ವೇಷಕ್ಕೆ ಬೆದರಿಕೆ ಪತ್ರ ಬರೆಸಿದ್ದಾನೆ. ಇವನ ಈ ಕಿತಾಪತಿ ಕೆಲಸಕ್ಕೆ ಸಾಥ್ ನೀಡಿದ್ದೇ ವೇದಾಂತ್. ವೇದಾಂತ್ ಬಳಿ ಬೆದರಿಕೆ ಪತ್ರ ಬರೆಸಿದ್ದ ರಾಜಶೇಖರ್, ಬಳಿಕ ಅದನ್ನು ಚೇಳೂರು ಅಂಚೆ ಕಚೇರಿಯಿಂದ ಬೆಂಗಳೂರಿಗೆ ಪೋಸ್ಟ್ ಮಾಡಿದ್ದಾನೆ.
ಅಂದ ಹಾಗೆ, ರಾಜಶೇಖರ್ ಮತ್ತು ರಮೇಶ್ ಒಂದೇ ಕುಟುಂಬದ ಇಬ್ಬರು ಹೆಣ್ಣುಮಕ್ಕಳನ್ನು ಮದ್ವೆಯಾಗಿದ್ದರು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕುರೆಹಳ್ಳಿಯ ಬಸವಲಿಂಗಯ್ಯ ಎಂಬುವವರ ಇಬ್ಬರು ಹೆಣ್ಣುಮಕ್ಕಳಾದ ಕಲ್ಪನಾ ಹಾಗೂ ಭೂಮಿಕಾಳನ್ನು ಮದ್ವೆಯಾಗಿದ್ದರು.
ಆದರೆ, ಭೂಮಿಕಾಳ ಮದುವೆಗೂ ಮುನ್ನ ರಾಜಶೇಖರ್ ಆಕೆಯನ್ನು ತಮ್ಮ ಮನೆಯಲ್ಲೇ ಸಾಕಿಕೊಂಡಿದ್ದ. ರಾಜಶೇಖರ್ ತೀರಾ ಬಡವನಾಗಿದ್ದ. ಆತನ ಬಳಿ ಜಮೀನು ಇರಲಿಲ್ಲವಂತೆ. ಭೂಮಿಕಾಳನ್ನು ಒಂದು ವೇಳೆ ತಾನೆ ಮದುವೆಯಾದರೆ ಎಲ್ಲಾ ಆಸ್ತಿ ತನಗೆ ಸಿಗುತ್ತದೆ ಅಂತಾ ಸ್ಕೆಚ್ ಹಾಕಿದ್ದಾನೆ. ಅದ್ರೆ, ಈ ವಿಚಾರ ತಿಳಿದ ಭೂಮಿಕಾಳ ತಂದೆ ಬಸಲಿಂಗಪ್ಪ ಅರಿವೆಸಂದ್ರದ ರಮೇಶ್ ಎಂಬಾತನಿಗೆ ಆಕೆಯನ್ನು ಮದುವೆ ಮಾಡಿಕೊಡಲು ನಿಶ್ಚಯಿಸಿದ್ದನಂತೆ. ಆದ್ರೆ, ಭೂಮಿಕಾಳನ್ನು ಮದುವೆ ಮಾಡಿಕೊಟ್ಟರೆ ಆಕೆಯ ಪಾಲಿನ ಆಸ್ತಿಯೆಲ್ಲಾ ರಮೇಶ್ ಪಾಲಾಗುತ್ತದೆ ಅಂತಾ ರಾಜಶೇಖರ್ ಈ ಹಿಂದೆಯೇ ಖತರ್ನಾಕ್ ಪ್ಲ್ಯಾನ್ ಒಂದಕ್ಕೆ ಕೈಹಾಕಿದ್ದನಂತೆ.
ಹಗೆ ಸಾಧಿಸಲು ರೆಡಿಯಾಯ್ತು ಬಾಂಬ್ ಪ್ಲಾನ್ ಭೂಮಿಕಾ ತಂದೆ ಬಸವಲಿಂಗಪ್ಪ ವಿರುದ್ಧ ಪ್ಲ್ಯಾನ್ ಮಾಡಿದ್ದ ರಾಜಶೇಖರ್ ಭೂಮಿಕಾಳನ್ನು ಆಕೆಯ ತಂದೆಯೇ ಮಾರಾಟ ಮಾಡಿದ್ದಾರೆಂದು ಭೂಮಿಕಾ ಕಡೆಯಿಂದ ಪೊಲೀಸರಿಗೆ ದೂರು ಕೊಡಿಸಿದ್ದನಂತೆ. ಹಾಗಾಗಿ, ಭೂಮಿಕಾ ನೀಡಿದ ದೂರಿನನ್ವಯ ರಮೇಶ್ ವಿರುದ್ಧ ಕೇಸ್ ದಾಖಲಾಗಿತ್ತು. ಅದರೆ, ಠಾಣೆಯಲ್ಲಿ ನಡೆದ ಸಂಧಾನದ ಬಳಿಕ ಭೂಮಿಕಾಳನ್ನು ರಮೇಶ್ ಮದ್ವೆಯಾಗಿದ್ದ.
ಹಾಗಾಗಿ, ಭೂಮಿಕಾ ತಂದೆ ಬಸವಲಿಂಗಪ್ಪ, ಸಹೋದರ ಶಿವಪ್ರಕಾಶ್ ಮತ್ತು ರಮೇಶ್ ವಿರುದ್ಧ ರಾಜಶೇಖರ್ ಹಗೆ ಬೆಳೆಸಿಕೊಂಡಿದ್ದ. ಮೂವರ ವಿರುದ್ಧದ ದ್ವೇಷದ ಹಿನ್ನೆಲೆಯಲ್ಲಿ ಬೆದರಿಕೆ ಪತ್ರ ಬರೆಸಿ ಇದೀಗ ತಗಲಾಕಿಕೊಂಡಿದ್ದಾನೆ. ಸದ್ಯ, ರಮೇಶ್ ಹಾಗೂ ಶಿವಪ್ರಕಾಶ್ರನ್ನ ಸಹ ವಶ ಪಡಿಸಿಕೊಂಡಿರೋ ಪೊಲೀಸರು ಚೇಳೂರು ಅಂಚೆ ಕಚೇರಿಯ ಸುತ್ತಮುತ್ತಲಿನ ಸಿಸಿಟಿವಿ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ, ಪ್ರಕರಣದಲ್ಲಿ ರಮೇಶ್ ಹಾಗೂ ಶಿವಪ್ರಕಾಶ್ರ ಕೈವಾಡವೂ ಇದ್ಯಾ ಅನ್ನೋ ಆಯಾಮವನ್ನು ಪರಿಶೀಲಿಸಲಾಗುತ್ತಿದೆ. CCB, ಸಿವಿಲ್ ಕೋರ್ಟ್ಗೆ ಬೆದರಿಕೆ ಪತ್ರ: ಸಿಕ್ಕಿಬಿದ್ದರು ಇಬ್ಬರು ಆರೋಪಿಗಳು!
Published On - 12:26 pm, Tue, 20 October 20