AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್ನಿನ ಸುಂದರ ನರ್ಸೊಬ್ಬಳು 7 ನವಜಾತ ಶಿಶುಗಳನ್ನು ಕೊಂದು ಇನ್ನೂ 10 ಶಿಶುಗಳನ್ನು ಬಲಿ ತೆಗೆದುಕೊಳ್ಳುವ ಪ್ಲ್ಯಾನ್ ಮಾಡಿದ್ದಳಂತೆ!

ಜೂನ್ 2015 ಮತ್ತು ಜೂನ್ 2016 ರ ನಡುವೆ ಕೊಲೆಯಾದ 5 ಗಂಡು ಮತ್ತು 2 ಹೆಣ್ಣು ಶಿಶುಗಳ ಹತ್ಯೆಯಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಹೀಯರ್ಫೋರ್ಡ್ ನಿವಾಸಿಯಾಗಿರುವ ಲೂಸಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.

ಬ್ರಿಟನ್ನಿನ ಸುಂದರ ನರ್ಸೊಬ್ಬಳು 7 ನವಜಾತ ಶಿಶುಗಳನ್ನು ಕೊಂದು ಇನ್ನೂ 10 ಶಿಶುಗಳನ್ನು ಬಲಿ ತೆಗೆದುಕೊಳ್ಳುವ ಪ್ಲ್ಯಾನ್ ಮಾಡಿದ್ದಳಂತೆ!
ಲೂಸಿ ಲೆಟ್ಬಿ- ಸುಂದರ ರೂಪದ ರಾಕ್ಷಸಿ?
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 11, 2022 | 8:03 AM

ಯುಕೆ: ನರ್ಸ್ ಗಳು ನವಜಾತ ಶಿಶುಗಳನ್ನು (infants) ಅಪಹರಿಸಿ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುವ ಪ್ರಕರಣಗಳ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ ಮತ್ತು ಟಿವಿ ಮತ್ತು ಸಿನಿಮಾಗಳಲ್ಲಿ ನೋಡಿತ್ತಿರುತ್ತೇವೆ. ಆದರೆ ನಾವು ನಿಮಗೆ ಹೇಳುತ್ತಿರುವ ಈ ಕ್ರೈಮ್ ಕತೆಯ ಖಳನಾಯಕಿ ಎಸಗಿರುವ ಅಪರಾಧಗಳ ಬಗ್ಗೆ ಕೇಳಿದರೆ ದಿಗ್ಬ್ರಾಂತರಾಗುತ್ತೀರಿ ಮಾರಾಯ್ರೇ. ಇಂಗ್ಲೆಂಡ್ ಮ್ಯಾಂಚೆಸ್ಟರ್ (Manchester) ಪೊಲೀಸರ ಪ್ರಕಾರ ಲೂಸಿ ಲೆಟ್ಬಿ (Lucy Letby) ಹೆಸರಿನ ನರ್ಸ್ 7 ನವಜಾತ ಶಿಶುಗಳನ್ನು ಕೊಂದು ಇನ್ನೂ ಹತ್ತು ಹಸುಳೆಗಳನ್ನು ಕೊಲ್ಲುವ ಯೋಜನೆ ಹಾಕಿಕೊಂಡಿದ್ದಳಂತೆ. ಪೊಲೀಸರು ಲೂಸಿಯನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ತಾನು ನಿರ್ದೋಷಿ ಎಂದು ಅರುಹಿದ್ದಾಳೆ.

ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ನಲ್ಲಿ 32-ವರ್ಷ-ವಯಸ್ಸಿನ ಲೂಸಿಯ ವಿಚಾರಣೆ ಶುರುವಾಗಿದ್ದು ಅವಳ ವಿರುದ್ಧ 22 ಪ್ರಕರಣಗಳನ್ನು ದಾಖಲಿಸಲಾಗಿದೆ.

ಜೂನ್ 2015 ಮತ್ತು ಜೂನ್ 2016 ರ ನಡುವೆ ಕೊಲೆಯಾದ 5 ಗಂಡು ಮತ್ತು 2 ಹೆಣ್ಣು ಶಿಶುಗಳ ಹತ್ಯೆಯಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಹೀಯರ್ಫೋರ್ಡ್ ನಿವಾಸಿಯಾಗಿರುವ ಲೂಸಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.

ಕೆಲವು ಪ್ರಕರಣಗಳಲ್ಲಿ ಲೂಸಿ ಒಂದೇ ಮಗುವನ್ನು ಹಲವಾರು ಬಾರಿ ಕೊಲ್ಲುವ ಪ್ರಯತ್ನ ಮಾಡಿದ್ದಾಳೆ. ಸೋಮವಾರ ವಿಚಾರಣೆ ಆರಂಭವಾದಾಗ ನ್ಯಾಯಾಲಯದ ಕಟೆಕಟೆಯಲ್ಲಿ ಲೂಸಿ, ಕಪ್ಪುವರ್ಣದ ಶರ್ಟಿನ ಮೇಲೆ ನೀಲಿ ವರ್ಣದ ಜಾಕೆಟ್ ಧರಿಸಿ ನಿಂತಿದ್ದಳು. ಅವಳ ಕುಟುಂಬದ ಸದಸ್ಯರು ಸಾರ್ವಜನಿಕ ಗ್ಯಾಲರಿಗಳಲ್ಲಿ ಕುಳಿತಿದ್ದರು.

ಲೂಸಿಯ 76-ವರ್ಷ-ವಯಸ್ಸಿನ ತಂದೆ ಜಾನ್ ಮತ್ತು 62-ವರ್ಷ-ವಯಸ್ಸಿನ ತಾಯಿ ಸೂಸನ್ ಸಹ ವಿಚಾರಣೆ ನಡೆಯುವಾಗ ಸಾರ್ವಜನಿಕ ಗ್ಯಾಲರಿಯಲ್ಲಿ ಕುಳಿತಿದ್ದರು.

ನ್ಯಾಯಾಲಯದ ಆದೇಶವೊಂದರ ಪ್ರಕಾರ ಯಾವ ಕಾರಣಕ್ಕೂ ಲೂಸಿಯಿಂದ ಹತ್ಯೆಗೊಳಗಾಗಿವೆ ಎಂದು ಆರೋಪಿಸಲಾಗಿರುವ ಶಿಶುಗಳ ಗುರುತನ್ನು ಬಹಿರಂಗಪಡಿಸುವಂತಿಲ್ಲ. ಅಷ್ಟು ಮಾತ್ರವಲ್ಲದೆ ಕೊಲೆಯಾಗಿರುವ ಮಕ್ಕಳ ತಂದೆ-ತಾಯಿಗಳನ್ನು ಮತ್ತು ಮಕ್ಕಳ ಪರವಾಗಿ ಸಾಕ್ಷ್ಯ ನೀಡಿರುವ ಜನರ ಗುರುತನ್ನು ಸಹ ಸಾರ್ವಜನಿಕಗೊಳಿಸುವಂತಿಲ್ಲ.

ವಿಚಾರಣೆ ಸಂದರ್ಭದಲ್ಲಿ ಶಿಶುಗಳನ್ನು ಎ ಯಿಂದ ಕ್ಯೂ ವರೆಗೆ ಅಕ್ಷರಗಳನ್ನು ಬಳಸಿ ಉಲ್ಲೇಖಿಸಬಹುದೆಂದು ಕೋರ್ಟ್ ಹೇಳಿದೆ.

ಲೂಸಿ ಲೆಟ್ಬೀ ಚೆಸ್ಟರ್ ನಲ್ಲಿರುವ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ನವಜಾತ ಮಕ್ಕಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲೇ ಶಿಶುಗಳ ಸರಣಿ ಹತ್ಯೆ ನಡೆಸಿದಳೆಂದು ಆರೋಪಿಲಾಗಿದೆ.

ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ನಿಗೂಢ ಸಾವಿನ ಪ್ರಕರಣವನ್ನು ಮೇ 2017 ರಲ್ಲಿ ತನಿಖೆಗೆ ಕೈಗೆತ್ತಿಕೊಳ್ಳಲಾಯಿತು. ಆರಂಭಿಕ ಹಂತದಲ್ಲಿ ಜೂನ್ 15 2015ರಿಂದ ಜೂನ್ 2016 ನಡುವೆ ಹತ್ಯೆಯಾದ 15 ಶಿಶುಗಳ ಸಾವಿಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಯಿತು.

ಅಸಲಿಗೆ 17 ಶಿಶುಗಳ ಹತ್ಯೆಯಾಗಿದ್ದು ಮತ್ತು 16 ಶಿಶುಗಳ ಕೊಲ್ಲುವ ಪ್ರಯತ್ನ ನಡೆದಿತ್ತೆಂದು ತನಿಖೆ ಅರಂಭಗೊಂಡ ಬಳಿಕ ಬೆಳಕಿಗೆ ಬಂದಿತ್ತು.

ಪ್ರಸ್ತುತ ಪ್ರಕರಣದ ತನಿಖೆ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ನಲ್ಲಿ 6 ತಿಂಗಳ ಕಾಲ ನಡೆಯಲಿದೆ ಎಂದು ಅಂದಾಜಿಲಾಗಿದೆ.

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ