ಶೀಲ ಶಂಕಿಸಿ ಪತ್ನಿಯನ್ನೇ ಹತ್ಯೆಗೈದ ಪತಿ: ಹೆಂಡ್ತಿ ಮೇಲೆ ಸಂಶಯಪಟ್ಟು ಬಂಗಾರದಂತ ಜೀವನ ಹಾಳು ಮಾಡ್ಕೊಂಡ
ಗಂಡ ಹೆಂಡತಿ ಜಗಳ ಉಂಡು ಮಲ್ಗೋ ತನಕ ಅಂತಾರೆ. ಆದ್ರೆ, ಇಲ್ಲಿ ಮಾತ್ರ ಗಂಡನ ಪಕ್ಕದಲ್ಲಿ ಮಲಗಿದ ಹೆಂಡತಿಯನ್ನೆ ಕೊಲೆ ಮಾಡಿದ್ದಾನೆ ಪಾಪಿ ಪತಿ.
ಗದಗ: ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕ್ತಾಯಿರೋ ಹೆತ್ತಮ್ಮ.. ಮುದ್ದಾದ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು.. ಪಾಪಿಗೆ ತಕ್ಕ ಶಿಕ್ಷೆ ನೀಡಬೇಕು ಎನ್ನುವ ಕುಟುಂಬಸ್ಥರು.. ಹೌದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕದಂಪೂರ ಗ್ರಾಮ ಕೊಲೆಯಿಂದ ಬೆಚ್ಚಿಬಿದ್ದಿದೆ.
ಹೌದು… ಶೀಲ ಶಂಕಿಸಿ ಗಂಡ ಹೆಂಡತಿ ಜೊತೆಗೆ ಜಗಳ ಮಾಡಿಕೊಂಡಿದ್ದ. ಆದ್ರು ಕೂಡಾ ಹೆಂಡತಿಯನ್ನು ಬಿಟ್ಟು ಇರ್ತಾಯಿರಲ್ಲಿಲ್ಲ. ಮೊನ್ನೆ ಕೂಡಾ ಗಂಡ ಹೆಂಡತಿ ಮಲಗಿದ್ರು, ಆದ್ರೆ, ಹಂತಕ ಗಂಡ ಚಾಕುವಿನಿಂದ ಹೆಂಡತಿಯನ್ನು ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: Crime News: ಮಲಗಿದ್ದ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ವೃದ್ಧ ಪತಿ
ಅಂದಹಾಗೇ ಕಳೆದ ಏಳು ವರ್ಷಗಳ ಹಿಂದೆ ಕದಂಪೂರ ಗ್ರಾಮದ ಶಾಂತವ್ವ ಎನ್ನುವ ಮಹಿಳೆಯನ್ನು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ರಾಮಪ್ಪನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಗಂಡ ಹೆಂಡತಿ ಅನ್ಯೋನ್ಯತೆಯಿಂದಲೇ ಇದ್ರು. ಮೂವರು ಮಕ್ಕಳು ಕೂಡಾ ಸಾಕ್ಷಿ. ಆದ್ರೆ ಕೆಲವು ವರ್ಷಗಳಿಂದ ಗಂಡ ರಾಜಪ್ಪ ಹೆಂಡತಿ ಶಾಂತವ್ವಳ ಮೇಲೆ ಸಂಶಯ ಮಾಡಲು ಆರಂಭ ಮಾಡಿದ್ದ. ಆಗಾಗ ಗಂಡ ಹೆಂಡತಿ ಜಗಳ ಮಾಡ್ತಾಯಿದ್ರು. ಗಣೇಶನ ಹಬ್ಬದಲ್ಲಿ ಅಡುಗೆ ವಿಷಯಕ್ಕೆ ಗಂಡ ಹೆಂಡತಿ ಜಗಳ ಮಾಡಿಕೊಂಡಿದ್ರು.
ಆಗ ಶಾಂತವ್ವ ಗಂಡನ ಮನೆಬಿಟ್ಟು ತವರು ಮನೆಗೆ ಬಂದು ವಾಸವಾಗಿದ್ದಳ್ಳು. ಜಗಳವಾದ್ರು ಗಂಡ ರಾಜಪ್ಪ ಕದಂಪೂರ ಗ್ರಾಮಕ್ಕೆ ಬರ್ತಾಯಿದ್ದ. ಮೊನ್ನೆ ಕೂಡಾ ರಾಜಪ್ಪ ಮನೆಗೆ ಬಂದಿದ್ದಾನೆ, ಮನೆಯ ಸದಸ್ಯರು ರಾತ್ರಿ ಮಲಗಿಕೊಂಡಿದ್ರು. ಚಿಕ್ಕ ಮನೆಯಲ್ಲಿ ಗಂಡ ಹೆಂಡತಿ ಇಬ್ಬರು ಒಂದೇ ಕಡೇ ಮಲಗಿಕೊಂಡಿದ್ದಾರೆ. ರಾತ್ರಿ 11 ಗಂಟೆ ಸುಮಾರು ಗಂಡ ರಾಜಪ್ಪ, ಹೆಂಡತಿ ಶಾಂತವ್ವಳಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ.
ಇನ್ನೂ ಪಾಪಿ ಗಂಡ ರಾಜಪ್ಪ ಹೆಂಡತಿ ಶಾಂತವ್ವಳಿಗೆ ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಚುಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಶಾಂತವ್ವಳ್ಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ರು, ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಮಗಳನ್ನು ಕಳೆದುಕೊಂಡು ಹೆತ್ತ ತಾಯಿ ಹಾಗೂ ಸಂಬಂಧಿಕರು ಕಣ್ಣೀರು ಹಾಕ್ತಾಯಿದ್ದಾರೆ. ಗಂಡ ಹೆಂಡತಿ ಜಗಳ ಮಾಡಿಕೊಂಡಿರೋದರಿಂದ ಮಕ್ಕಳು ಗಂಡನ ಮನೆಯ ಹೊಸಳ್ಳಿ ಗ್ರಾಮದಲ್ಲಿವೆ.
ಹೆಂಡತಿಯನ್ನು ಗಂಡನ ಮನೆಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಪಾಪಿ ಪತಿ ಹೇಳಿದ್ದ. ಅದನ್ನು ನಂಬಿದ ಕುಟುಂಬ ಸದಸ್ಯರು ರಾಜಪ್ಪ ಬಂದಾಗ, ಮನೆಯ ಒಳಗಡೆ ಕರೆದುಕೊಂಡಿದ್ದಾರೆ. ಆದ್ರೆ ಹಂತಕ ರಾಜಪ್ಪ ಬರುವಾಗಲೇ ಕೊಲೆ ಮಾಡುವ ಪ್ಲಾನ್ ಮಾಡಿಕೊಂಡು ಬಂದಿದ್ದ, ಮನೆಯಲ್ಲಿ ಸದಸ್ಯರು ಮಲಗಿದಾಗ ಪತ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಶಾಂತವ್ವಳ್ಳ ಮೇಲೆ ಅನುಮಾನ ಪಡ್ತಾಯಿದ್ದ ಹಾಗಾಗಿಯೇ ಕೊಲೆ ಮಾಡಿದ್ದಾನೆ ಅಂತಾರೆ ಮೃತಳ ಸಂಬಂಧಿ.
ಇನ್ನೂ ಮುಂಡರಗಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಒಟ್ಟಿನಲ್ಲಿ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿ ಮೇಲೆ ಸಂಶಯಗೊಂಡು ಬಂಗಾರದ ಜೀವನ ಹಾಳು ಮಾಡಿಕೊಂಡಿದ್ದು ಮಾತ್ರ ದುರಂತವೇ ಸರಿ.