ಆನೇಕಲ್​: ಒಂದೂವರೆ ಗುಂಟೆ ಜಾಗಕ್ಕಾಗಿ ಅಣ್ಣನ ಹತ್ಯೆಗೆ ಸುಪಾರಿ ನೀಡಿದ ಸಹೋದರು

ಕೇವಲ ಒಂದೂವರೆ ಗುಂಟೆ ಜಾಗಕ್ಕಾಗಿ ಸಹೋದರರು ಅಣ್ಣ ಚಂಪ್ಪನ ಹತ್ಯೆಗೆ ಸುಪಾರಿ ನೀಡಿದ್ದರು. ಆದರೆ ಸಮಯ ಪ್ರಜ್ಞೆಯಿಂದ ಚಂದ್ರಪ್ಪ ಅವರು ಹಂತರಕ ಕೈಯಿಂದ ಬಚಾವ್​ ಆಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಪ್ಪ ಅವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಈ ಪ್ರಕರಣ ಮುಂದೇನಾಯ್ತು? ಹತ್ಯೆಗೆ ಸುಪಾರಿ ನೀಡಿದ್ದ ಸಹೋದರರನ್ನು ಮತ್ತು ಹಂತಕರನ್ನು ಪೊಲೀಸರು ಬಂಧಿಸಿದ್ರಾ? ಈ ಸ್ಟೋರಿ ಓದಿ

ಆನೇಕಲ್​: ಒಂದೂವರೆ ಗುಂಟೆ ಜಾಗಕ್ಕಾಗಿ ಅಣ್ಣನ ಹತ್ಯೆಗೆ ಸುಪಾರಿ ನೀಡಿದ ಸಹೋದರು
ಬಂಧಿತ ಆರೋಪಿಗಳು
Follow us
ರಾಮು, ಆನೇಕಲ್​
| Updated By: ವಿವೇಕ ಬಿರಾದಾರ

Updated on: Nov 27, 2023 | 8:35 PM

ಆನೇಕಲ್ ನ.27: ಒಂದೂವರೆ ಗುಂಟೆ ಜಾಗಕ್ಕಾಗಿ ಅಣ್ಣನ ಹತ್ಯೆಗೆ ಸಹೋದರೇ ಸುಪಾರಿ ನೀಡಿದ್ದಾರೆ. ಕ್ಯಾಲಸನಹಳ್ಳಿ ನಿವಾಸಿ ಚಂದ್ರಪ್ಪನ ಹತ್ಯೆಗೆ ಚಿಕ್ಕಪ್ಪನ ಮಕ್ಕಳಾದ ಸಂಪಂತ್ ಕುಮಾರ್ ಅಲಿಯಾಸ್ ಸಂತೋಷ್, ಅರುಣ್ ಕುಮಾರ್ 1.5 ಲಕ್ಷ ರೂ. ಸುಪಾರಿ ನೀಡಿದ್ದರು. ಸುಪಾರಿ ಪಡೆದಿದ್ದ ಆನಂದ್, ಹರ್ಷವರ್ಧನ್ ಹಾಗೂ ವಿಜಯ್ ಕುಮಾರ್ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿನಗರದ ಬಳಿಯ ಸಾಯಿಬಾಬಾ ದೇಗುಲದ ರಸ್ತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ಚಂದ್ರಪ್ಪ ಮೇಲೆ ಲಾಂಗ್​​ನಿಂದ ಹಲ್ಲೆ ಮಾಡಲು ಯತ್ನಿಸಿದರು.

ಆರೋಪಿಗಳು ಲಾಂಗ್​ ಬೀಸುತ್ತಿದ್ದಂತೆ ಎಚ್ಚೆತ್ತ ಚಂದ್ರಪ್ಪ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಚಂದ್ರಪ್ಪ ಅವರ ಕೈಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೆಚ್ ಫೆಲ್ಯೂರ್ ಆಗುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಕೋಲಾರ: ಮಚ್ಚಿನಿಂದ ಹಲ್ಲೆ ನಡೆಸಿ ಸೆಕ್ಯೂರಿಟಿ ಗಾರ್ಡ್​ ಹತ್ಯೆ

ಆಸ್ಪತ್ರೆಯಿಂದ ಮನೆಗೆ ಬಂದ ಚಂದ್ರಪ್ಪ ಅವರನ್ನು ನೋಡಲು ಸಂಪತ್ ಅಲಿಯಾಸ್ ಸಂತೋಷ್ ಬಂದಿದ್ದನು. ತನಗೇನು ತಿಳಿಯದಂತೆ ಚಂದ್ರಪ್ಪ ಅವರ ಎದರು ನಾಟಕವಾಡಿದ್ದನು. ಆದರೆ ಹೆಬ್ಬಗೋಡಿ ಪೊಲೀಸರ ಚಾಣಾಕ್ಷತನದ ತನಿಖೆಯಿಂದ ಪ್ರಕರಣ ಹೊರಬಂದಿದ್ದು, ಚಂದ್ರಪ್ಪನ ಹತ್ಯೆ ಮಾಡಲು ಯತ್ನಿಸಿದ್ದ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ
ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ, ಅದು ಸುಳ್ಳು ಸುದ್ದಿ: ಸತೀಶ್ ಜಾರಕಿಹೊಳಿ
ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ, ಅದು ಸುಳ್ಳು ಸುದ್ದಿ: ಸತೀಶ್ ಜಾರಕಿಹೊಳಿ
ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಮೋದಿ ಘೋಷಣೆ
ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಮೋದಿ ಘೋಷಣೆ
ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ
ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ
ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ
ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ
ಬಸವೇಶ್ ವಿರುದ್ಧ ಎಫ್​ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ
ಬಸವೇಶ್ ವಿರುದ್ಧ ಎಫ್​ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ
ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ
ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ
ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್
ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್
ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ
ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ