ಈ ವರ್ಷದ ಮೊದಲ ದಿನ (01/01/2023) ಸಂಚೆ 5-30ರ ಸುಮಾರಿಗೆ ಗುಂಡು ಹಾರಿಸಿಕೊಂಡು ಉದ್ಯಮಿ (Businessman) ಪ್ರದೀಪ್ ಅತ್ಮಹತ್ಯೆ (Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಕಗ್ಗಲೀಪುರ ಪೊಲೀಸ್ರು ತನಿಖೆ ಆರಂಭಿಸಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪ್ರದೀಪ್ ಪತ್ನಿ ನೀಡಿದ ದೂರು ಹಾಗೂ ಡೆತ್ ನೋಟ್ ಆಧಾರದ ಮೇಲೆ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಸೇರಿದಂತೆ ಆರು ಜನರ ವಿರುದ್ದ ಎಫ್ ಐಆರ್ (FIR) ಮಾಡಿಕೊಂಡಿರೋ ಪೊಲೀಸ್ರು ಎಲ್ಲರಿಗೂ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದ್ದಾರೆ.
ನಿನ್ನೆ ಅಂದ್ರೆ ಹೊಸ ವರ್ಷದ ದಿನವೇ ಪತ್ನಿ ಮಗಳ ಜೊತೆಗೆ ರಾಮನಗರದ ಬಳಿಯ ರೆಸಾರ್ಟ್ ಒಂದರದಲ್ಲಿ ಪಾರ್ಟಿ ಮಾಡಕೊಂಡು ಅಲ್ಲಿಂದ ಒಬ್ಬನರ ಹೊರಟಿದ್ದ ಬೆಳ್ಳಂದೂರಿನ ನಿವಾಸಿ ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಪೊಲೀಸ್ರು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಶಾಸಕ ಅರವಿಂದ ಲಿಂಬಾವಳಿ ಕೇಳಿ ಬರ್ತಿದ್ದಂತೆ ಯಾವುದೇ ಒತ್ತಡಕ್ಕೆ ಮಣಿಯದ ಪೊಲೀಸ್ರು ಶಾಸಕ ಲಿಂಬಾವಳಿ ಸೇರಿದಂತೆ ಡೆತ್ ನೋಟ್ ನಲ್ಲಿ ಪ್ರದೀಪ್ ಉಲ್ಲೇಖಿಸಿದ್ದ ಆರು ಜನರ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ.
ನೆನ್ನೆ ರಾತ್ರಿಯೆ ಘಟನಾ ಸ್ಥಳಕ್ಕೆ ಧಾವಿಸಿ ಸ್ಥಳ ಮಹಜರು ಮಾಡಿದ್ದ ಪೊಲೀಸ್ರು ಮೃತನ ಪತ್ನಿ ನಮಿತಾ ನೀಡಿದ ದೂರು ಹಾಗೂ ಪ್ರದೀಪ್ ಬರೆದಿಟ್ಟಿದ್ದ ಡೆತ್ ನೋಟ್ ಆಧಾರದ ಮೇಲೆ ಆರು ಜನರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಕೇಸ್ ರಿಜಿಸ್ಟರ್ ಮಾಡಿದ್ದಾರೆ. ಜೊತೆಗೆ ಪ್ರದೀಪ್ ಪೋನ್ ನ್ನ ವಶಕ್ಕೆ ಪಡೆದ ಪೊಲೀಸರು ಅತನ ನಂಬರ್ ನ ಸಿಡಿಆರ್ ತೆಗೆದು ಆತ್ಮಹತ್ಯೆಗೆ ಮುನ್ನ ಯಾರೋಂದಿಗ ಸಂಪರ್ಕದಲ್ಲಿದ್ದ. ಅತ ಕೊನೆಯದಾಗಿ ಕರೆ ಮಾಡಿದ್ದು ಯಾರಿಗೆ , ಆತನ ಕಾಂಟ್ಯಾಕ್ಟ್‌ನಲ್ಲಿ ಯಾರು ಯಾರಿದ್ದಾರೆ.. ಅತನ ವಾಟ್ಸಾಪ್ ಡಿಟೈಲ್ಸ್ ಅತನ ವ್ಯವಹಾರದ ಡೀಟೇಲ್ಸ್, ಇತ್ತೀಚಿನ ಅತನ ಬ್ಯಾಂಕ್ ವ್ಯವಹಾರ ಹಾಗೂ ವಹಿವಾಟಿನ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಇಷ್ಟೇ ಅಲ್ಲದೇ ಅತ ಅತ್ಮಹತ್ಯೆಗೆ ಬಳಸಿರುವ ಗನ್ ಲೈಸೆನ್ಸ್ ಯಾರ ಹೆಸರಿನಲ್ಲಿದೆ, ಗನ್ ಮೇಲಿರುವ ಬೆರಳಚ್ಚನ್ನ ಸಹ ಪೊಲೀಸರು ಸಂಗ್ರಹಿಸಿದ್ದಾರೆ. ಇನ್ನು ಹಣದ ವ್ಯವಹಾರದ ಬಗ್ಗೆಯೂ ಮಾಹಿತಿ ಕಲೆ ಹಾಕಲು ಮುಂದಾಗಿರುವ ಪೊಲೀಸರು, ಡೆತ್ ನೋಟ್ ನಲ್ಲಿ ಉಲ್ಲೇಖಸಿರೋ ಆರೋಪಿಗಳ ಬ್ಯಾಂಕ್ ಡಿಟೇಲ್ಸ್ ಸಹ ಕಲೆ ಹಾಕ್ತಿದ್ದಾರೆ. ಅದರ ಜೊತೆಗೆ ಶಾಸಕ ಅರವಿಂದ ಲಿಂಬಾವಳಿ ಹೆಸರನ್ನ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿರೋದಕ್ಕೆ ಕಾರಣ ಏನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಪ್ರದೀಪ್ ಬರೆದಿರೊ ಡೆತ್ ನೋಟ್ ನಲ್ಲಿ ಇರೊ ಪ್ರಮುಖ ಅಂಶಗಳು ಅಂದ್ರೆ .
SR ಲೇಔಟ್ ಸಮೀಪದ ಹರಳೂರಿನಲ್ಲಿ ಕ್ಲಬ್ ತೆರೆಯುವ ಉದ್ದೇಶಕ್ಕೆ ಕೆ. ಗೋಪಿ ಮತ್ತು ಸೋಮಯ್ಯ ಬಳಿ 2018ರಲ್ಲಿ ಚರ್ಚೆ ಮಾಡಿದ್ದೆ, ರೆಸಾರ್ಟ್ ನಡೆಸಲು ಇವರಿಬ್ಬರು ಒಪ್ಪಿಕೊಂಡು ಪ್ರತಿತಿಂಗಳು 3 ಲಕ್ಷ ರೂ. ಲಾಭಾಂಶ ಮತ್ತು ಅಲ್ಲಿಯೇ ಕೆಲಸ ಮಾಡಿದ್ರೆ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಸಂಬಳ ಕೊಡುವುದಾಗಿ ಹೇಳಿದ್ರು.
ಅದಕ್ಕೆ ಒಪ್ಪಿಕೊಂಡು 2018ರ ಮೇ ಯಿಂದ ಡಿಸೆಂಬರ್ ವರೆಗೆ ಒಂದು ಕೋಟಿ ಹತ್ತು ಲಕ್ಣ ರೂಪಾಯಿ ಬ್ಯಾಂಕ್‌ಗೆ ಜಮೆ ಮಾಡಿದ್ದೇನೆ. ಮೈಸೂರಿನಲ್ಲಿ ಇರುವ ಮನೆ ಮಾರಾಟ ಮಾಡಿ 40 ಲಕ್ಷ ರಪಾಯಿ ನಗದು ರೂಪದಲ್ಲಿ ಈ ಇಬ್ಬರಿಗೆ ನೀಡಿದ್ದೆ. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಲಾಭ ಕೊಡಲಿಲ್ಲ.
ಇದನ್ನೂ ಓದಿ:
ಈ ಬಗ್ಗೆ ಮಾತನಾಡಲು ಶಾಸಕರ ಬಳಿಗೆ ಹೋದಾಗ ರಾಜೀಸಂಧಾನ ನೆಪದಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿ ಅಂತೆ 9 ತಿಂಗಳು ನನ್ನ ಬಳಿ ಹಣ ಪಡೆದರು. ಆನಂತರ 90 ಲಕ್ಷ ರೂ. ವಾಪಸ್ ಕೊಡುತ್ತಾರೆ ಎಂದು ಹೇಳಿದರು.ಆದರೆ, ಆ ವೇಳೆಗೆ ನಾನು ಸಾಕಷ್ಟು ಸಾಲ ಮಾಡಿಕೊಂಡಿದ್ದೆ.ಶಾಸಕ ಲಿಂಬಾವಳಿ ಸಹ ನನಗೆ ಸಹಾಯ ಮಾಡಿಲ್ಲ, ರಮೇಶ್ ರೆಡ್ಡಿ ಬಳಿ 10 ಲಕ್ಷ ರೂ. ಸಾಲ ಪಡೆದಿದ್ದೆ. ಅದರ ಪ್ರತಿಯಾಗಿ ಕೃಷಿ ಜಮೀನು ಮಾರಾಟ ಮಾಡಿ 35 ಲಕ್ಷ ರೂ. ಪಾವತಿ ಮಾಡಿದ್ದೆನೆ. ಆದರೂ ಮತ್ತಷ್ಟು ಹಣ ಸುಲಿಗೆಗೆ ಬೆದರಿಕೆ ಒಡ್ಡುತ್ತಿದ್ದಾರೆ.
ರಾಘವ ಭಟ್ ನನ್ನ ಬಳಿ 20 ಲಕ್ಷ ರೂ. ಸಾಲ ಪಡೆದಿದ್ದು, ಇಲ್ಲಿಯವರೆಗೂ ವಾಪಸ್ ಕೊಡದೆ ಮೋಸ ಮಾಡಿದ್ದಾರೆ. ನನಗೆ 2 ಕೋಟಿ 20 ಲಕ್ಷ ಬರಬೇಕಿತ್ತು,ಶಾಸಕರು ರಾಜೀಸಂಧಾನ ಮಾಡಿಸಿ 90 ಲಕ್ಷ ರೂ. ಕೊಡಿಸುವುದಾಗಿ ಹೇಳಿ 10 ಲಕ್ಷದ 9 ಚೆಕ್ ಕೊಡಿಸಿದ್ದರು. ಪ್ರತಿ ತಿಂಗಳು ಅಕೌಂಟ್ ಗೆ ಜಮೆ ಮಾಡಿಸಿಕೊಳ್ಳುವಂತೆ ಹೇಳಿದ್ರು. ಡೆತ್‌ನೋಟ್ ನಲ್ಲಿ ಪ್ರಕಾರ 2 ಕೋಟಿ 20 ಲಕ್ಷ ಬರಬೇಕಿದೆ. ಕ್ಲಬ್ ಪ್ರಾರಂಭಿಸಲು ಮಾಡಿಕೊಂಡಿದ್ದ ಸಾಲ ಅದಕ್ಕೆ ಬಡ್ಡಿ ಹಣ ಕಟ್ಟಲು ಪತ್ನಿ ಸಹ ಸಾಲ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಹಣವೂ ಪತ್ನಿ ಮತ್ತು ಮಗಳಿಗೆ ಕೊಡಸಬೇಕು ಎಂದು ಡೆತ್ ನೋಟ್ ನಲ್ಲಿ ಪ್ರದೀಪ್ ಉಲ್ಲೇಖಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಪ್ರದೀಪ್ ಹಲವು ವರ್ಷಗಳಿಂದ ಓಪೋಸ್ ಕ್ಲಬ್ ನಡೆಸ್ತಿದ್ದ. ಅದಕ್ಕೆ ಹೂಡಿಕೆ ಮಾಡಿದ್ದ ಹಣವನ್ನ ಆತನ ಸ್ನೇಹಿತರಾದ ಗೋಪಿ, ಸೋಮಯ್ಯ, ಜಯರಾಮ್ ರೆಡ್ಡಿ, ಅಶೋಕ್ ರೆಡ್ಡಿ ಹಾಗೂ ರಾಘವ ಭಟ್ ಕೊಡದೇ ವಂಚಿಸಿದ್ರು. ಆ ವೇಳೆ ಮಧ್ಯ ಪ್ರವೇಶಿಸಿದ್ದ ಶಾಸಕ ಲಿಂಬಾವಳಿ ರಾಜಿ ಸಂದಾನ ಮಾಡಿಸಿದ್ರು ಅನ್ನೋ ಮಾಹಿತಿ ಇದೆ. ಆದ್ರೆ ಯಾವ ವಿಚಾರಕ್ಕಾಗಿ ಅರವಿಂದ ಲಿಂಬಾವಳಿ ರಾಜಿ ಮಾಡಿಸಿದ್ದದ್ರು. ಉಳಿದವರಿಗೂ ಪ್ರದೀಪ್ ಗೂ ಇರುವ ಸಂಬಂಧ ಏನು, ಎಷ್ಟು ಹಣವನ್ನು ಇದೀಗ ವ್ಯಾವಹಾರ ಮಾಡಿದ್ದಾರೆ ನಿಜಕ್ಕು ಇಲ್ಲಿ ಪ್ರದೀಪ್ ಗೆ ಅನ್ಯಾಯ ಆಗಿದ್ಯಾ ಅನ್ನೋ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಮತ್ತೊಂದೆಡೆ ಪ್ರದೀಪ್ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನ ಸಂಬಂಧಿಕರಿಗೆ ಹಸ್ತಾಂತರಿಸಿದ ಕಗ್ಗಲೀಪುರ ಪೊಲೀಸ್ರು ಪ್ರಕರಣದಲ್ಲಿರುವ A3 ಆರೋಪಿ ಅರವಿಂದ ಲಿಂಬಾವಳಿಯನ್ನ ಹೊರತು ಪಡಿಸಿ ಉಳಿದ ಆರೋಪಿಗಳಾದ ಗೋಪಿ, ಸೋಮಯ್ಯ, ಜಯರಾಮ್ ರೆಡ್ಡಿ, ಅಶೋಕ್ ರೆಡ್ಡಿ ಹಾಗೂ ರಾಘವ್ ಭಟ್ ಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ಐವರು ಆರೋಪಿಗಳ ವಿಚಾರಣೆ ಬಳಿಕ ಶಾಸಕ ಅರವಿಂದ ಲಿಂಬಾವಳಿಗೆ ನೋಟಿಸ್ ನೀಡಲು ಪೊಲೀಸ್ರು ತೀರ್ಮಾನಿಸಿದ್ದಾರೆ. ಒಟ್ನಲ್ಲಿ ಪೊಲೀಸರು ಸದ್ಯ ಆಡಳಿತ ಪಕ್ಷದ ಶಾಸಕರ ವಿರುದ್ಧವೇ ಎಫ್ಐಆರ್ ದಾಖಲಿಸಿ, ಕಾನೂನು ಎಲ್ಲರಿಗೂ ಒಂದೇ ಅನ್ನೋದನ್ನ ತೋರಿಸಿದ್ದಾರೆ. ಮುಂದೆಯೂ ಪ್ರದೀಪ್ ಸಾವಿಗೆ ನ್ಯಾಯ ಒದಗಿಸುವ ಮಾರ್ಗದಲ್ಲಿ ಕೆಲಸ ಮಾಡ್ತಾರೋ ಅಂತ ಕಾದು ನೋಡಬೇಕಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ