ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ನಯವಂಚಕ ಅರೆಸ್ಟ್
ಬೆಂಗಳೂರು: ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಬಂಧಿತ ಆರೋಪಿ. ಈತ ವಿಲಾಸಿ ಜೀವನಕ್ಕಾಗಿ ವಂಚನೆಯನ್ನೇ ಕಾಯಕವಾಗಿಸಿಕೊಂಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಛೇದಿತೆಯರ ಜತೆ ಸಂಪರ್ಕ ಬೆಳೆಸಿಕೊಂಡು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಮದುವೆಯಾಗುತ್ತೇನೆಂದು ಮಾತನಾಡಿ ನಂಬಿಸಿ ಮೋಸ ಮಾಡುತ್ತಿದ್ದ. ಇವನ ಮಾತಿಗೆ ಮರಳಾಗಿ ಪ್ರೀತಿಸಿ ನಂಬಿದ ಮಹಿಳೆಯರಿಂದ ಹಣ, ಚಿನ್ನ ಪಡೆದು ವಂಚನೆ ಮಾಡುತ್ತಿದ್ದ. ಹೀಗೆ ಕಡಿಮೆ ದರದಲ್ಲಿ ಸೈಟ್ ಕೊಡಿಸುವುದಾಗಿ ಸುರೇಶ್ ಮಾತನ್ನು ನಂಬಿ ಮೋಸ ಹೋದ ಮಹಿಳೆ ಬ್ಯಾಡರಹಳ್ಳಿ […]
ಬೆಂಗಳೂರು: ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಬಂಧಿತ ಆರೋಪಿ. ಈತ ವಿಲಾಸಿ ಜೀವನಕ್ಕಾಗಿ ವಂಚನೆಯನ್ನೇ ಕಾಯಕವಾಗಿಸಿಕೊಂಡಿದ್ದ.
ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಛೇದಿತೆಯರ ಜತೆ ಸಂಪರ್ಕ ಬೆಳೆಸಿಕೊಂಡು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಮದುವೆಯಾಗುತ್ತೇನೆಂದು ಮಾತನಾಡಿ ನಂಬಿಸಿ ಮೋಸ ಮಾಡುತ್ತಿದ್ದ. ಇವನ ಮಾತಿಗೆ ಮರಳಾಗಿ ಪ್ರೀತಿಸಿ ನಂಬಿದ ಮಹಿಳೆಯರಿಂದ ಹಣ, ಚಿನ್ನ ಪಡೆದು ವಂಚನೆ ಮಾಡುತ್ತಿದ್ದ.
ಹೀಗೆ ಕಡಿಮೆ ದರದಲ್ಲಿ ಸೈಟ್ ಕೊಡಿಸುವುದಾಗಿ ಸುರೇಶ್ ಮಾತನ್ನು ನಂಬಿ ಮೋಸ ಹೋದ ಮಹಿಳೆ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದರು. ಸುರೇಶ್ವಿಚ್ಛೇದಿತ ಮಹಿಳೆಯಿಂದ 80 ಗ್ರಾಂ ಚಿನ್ನ ಪಡೆದು ವಂಚನೆ ಮಾಡಿದ್ದ. ಹೀಗಾಗಿ ಮಹಿಳೆ ದೂರಿನ ಆಧಾರದಲ್ಲಿ FIR ದಾಖಲಿಸಿದ್ದ ಪೊಲೀಸರು ನಯವಂಚಕ ಸುರೇಶ್ನನ್ನು ಬಂಧಿಸಿದ್ದಾರೆ. ಬಂಧಿತನಿಂದ ಫಾರ್ಚೂನರ್ ಕಾರು ಜಪ್ತಿ ಮಾಡಲಾಗಿದ್ದು, ಬ್ಯಾಡರಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Published On - 6:59 am, Wed, 10 June 20