ರಸ್ತೆ ದಾಟುವ ವೇಳೆ ಯುವತಿಗೆ ಕ್ಯಾಂಟರ್ ಡಿಕ್ಕಿ ಸಾವು ಪ್ರಕರಣ; ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

ನಗರದ ಜೋಗಿಮಟ್ಟಿ ಅರಣ್ಯಕ್ಕೆ ಹೊಂದಿದ ಗಿರಿಧಾಮದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಣ ಹುಲ್ಲಿಗೆ ಹೊತ್ತಿದ ಬೆಂಕಿಯಿಂದ ಗಿಡಮರಗಳು ನಾಶವಾಗಿವೆ. ರಾತ್ರಿ ಹೊತ್ತು ಸುಮಾರು 2 ತಾಸು ಗಿರಿಧಾಮ ಹೊತ್ತಿ ಉರಿದಿದ್ದು, ಕಿಡಿಗೇಡಿಗಳ ಕೃತ್ಯದಿಂದ ಅರಣ್ಯ ನಾಶ ಶಂಕೆ ವ್ಯಕ್ತವಾಗಿದೆ.

ರಸ್ತೆ ದಾಟುವ ವೇಳೆ ಯುವತಿಗೆ ಕ್ಯಾಂಟರ್ ಡಿಕ್ಕಿ ಸಾವು ಪ್ರಕರಣ; ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ
ಯುವತಿ ಹಿಮಾದ್ರಿ
Edited By:

Updated on: Mar 27, 2022 | 8:47 AM

ಬೆಂಗಳೂರು: ರಸ್ತೆ ದಾಟುವ ವೇಳೆ ಯುವತಿಗೆ ಕ್ಯಾಂಟರ್ ಡಿಕ್ಕಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರದಾನ (Eye Donate)  ಮಾಡಿ ಸಾವಿನಲ್ಲೂ ಯುವತಿ ಹಿಮಾದ್ರಿ(23) ಸಾರ್ಥಕತೆ ಮೆರೆದಿದ್ದಾಳೆ. ಶುಕ್ರವಾರ ಪೀಣ್ಯ ಮೆಟ್ರೋ ನಿಲ್ದಾಣ ಸಮೀಪ ರಸ್ತೆ ದಾಟುವಾಗ ಕ್ಯಾಂಟರ್ ಗುದ್ದಿತ್ತು. ತೀವ್ರ ರಕ್ತಸ್ರಾವವಾಗಿದ್ದ ಕಾರಣ ಚಿಕಿತ್ಸೆ ಫಲಿಸದೇ ಹಿಮಾದ್ರಿ ಕೊನೆಯುಸಿರೆಳೆದಿದ್ದರು. ಹೆಸರಘಟ್ಟ ರಸ್ತೆಯ ಸೋಲದೇವನಹಳ್ಳಿಯಲ್ಲಿ ಕುಟುಂಬ ವಾಸವಿದ್ದು, ಪೋಷಕರು ಒಮ್ಮತದ ತೀರ್ಮಾನ ಮಾಡಿ ಹಿಮಾದ್ರಿಯ ನೇತ್ರಗಳನ್ನು ದಾನ ಮಾಡಿದ್ದಾರೆ. ಪೀಣ್ಯಾ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೋಗಿಮಟ್ಟಿ ಅರಣ್ಯ ಗಿರಿಧಾಮದಲ್ಲಿ ಕಾಣಿಸಿಕೊಂಡ ಬೆಂಕಿ:

ಚಿತ್ರದುರ್ಗ: ನಗರದ ಜೋಗಿಮಟ್ಟಿ ಅರಣ್ಯಕ್ಕೆ ಹೊಂದಿದ ಗಿರಿಧಾಮದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಣ ಹುಲ್ಲಿಗೆ ಹೊತ್ತಿದ ಬೆಂಕಿಯಿಂದ ಗಿಡಮರಗಳು ನಾಶವಾಗಿವೆ. ರಾತ್ರಿ ಹೊತ್ತು ಸುಮಾರು 2 ತಾಸು ಗಿರಿಧಾಮ ಹೊತ್ತಿ ಉರಿದಿದ್ದು, ಕಿಡಿಗೇಡಿಗಳ ಕೃತ್ಯದಿಂದ ಅರಣ್ಯ ನಾಶ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯ ರಕ್ಷಕರ ಮೇಲೆ ಹಲ್ಲೆ ಆರೋಪ:

ರಾಮನಗರ: ಬೆಳೆ ಪರಿಹಾರ ಹಾಗೂ ಆನೆ ತಡೆ ಕಂದಕ ಪರಿಶೀಲನೆಗೆ ಹೋದಾಗ ಅರಣ್ಯ ರಕ್ಷಕರಾದ ನರಸಿಂಹ ಹಾಗೂ ಚಂದ್ರು ಎಂಬುವವರ ಮೇಲೆ ಹಲ್ಲೆ ಮಾಡಲಾದ ಆರೋಪ ಕೇಳಿಬಂದಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮದ ಬಳಿಯ ಘಟನೆ ನಡೆದಿದೆ. ಗ್ರಾಮದ ನಾಸೀರ್ ಎಂಬಾತನಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಈ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:

​ಕೀಳು ಮಟ್ಟಕ್ಕೆ ಬಂತು ಫ್ಯಾನ್ಸ್​ ವಾರ್​; ದಳಪತಿ ವಿಜಯ್​ ನಿಧನ ಎಂದು ಫೇಕ್​ ನ್ಯೂಸ್​ ಹಬ್ಬಿಸಿದ ಅಜಿತ್​ ಫ್ಯಾನ್ಸ್​

ಇಂದು ‘ಮೇಕಿಂಗ್ ಆಫ್ ದಿ ಕಾಶ್ಮೀರ್ ಫೈಲ್ಸ್’ ಕಾರ್ಯಕ್ರಮ; ವಿಮರ್ಶೆ ಮತ್ತು ಸಂವಾದದಲ್ಲಿ ಭಾಗಿಯಾಗಲಿರುವ ನಟ ಪ್ರಕಾಶ್ ಬೆಳವಾಡಿ