ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರರು
ನಗರದ ಯಲಹಂಕದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಸಿಸಿಕ್ಯಾಮರಾದಲ್ಲಿ ಚಿರತೆ ಚಲನವಲನ ಸೆರೆಯಾಗಿದ್ದು, ದೃಶ್ಯ ಜನರಲ್ಲಿ ಭೀತಿ ಉಂಟುಮಾಡಿದೆ. ರೈಲ್ವೆ ವೆಲ್ ಫ್ಯಾಕ್ಟರಿ ಬಳಿ ಚಿರತೆ ಕಾಣಿಸಿಕೊಂಡಿದೆ.
ತುಮಕೂರು: ಕೆ.ಎಸ್.ಆರ್.ಟಿ.ಸಿ ಹಾಗೂ ದ್ವಿಚಕ್ರ (KSRTC bus and Bike Accident) ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೆರಗಳಪಾಳ್ಯಯ ಸಿಮೆಂಟ್ ಇಟ್ಟಿಗೆ ಕರ್ಖಾನೆ ಬಳಿ ಘಟನೆ ಸಂಭವಿಸಿದ್ದು, ಮಧುಗಿರಿಯಿಂದ ಬೆಂಗಳೂರಿಗೆ ಹೊಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಮಾರ್ಗ ಮಧ್ಯೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡಿದ ಪರಿಣಾಮ ಮಧುಗಿರಿಯ ಗೊಂದಿಹಳ್ಳಿ ಮೂಲದ ನಿವಾಸಿಗಳಾದ ಗಂಡ ಸಾಂಬಶಿವಪ್ಪ(70) ಮತ್ತು ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಮಧುಗಿರಿ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಧುಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿರತೆ ಪ್ರತ್ಯಕ್ಷ; ಭಯಗೊಂಡ ಜನರು:
ಬೆಂಗಳೂರು: ನಗರದ ಯಲಹಂಕದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಸಿಸಿಕ್ಯಾಮರಾದಲ್ಲಿ ಚಿರತೆ ಚಲನವಲನ ಸೆರೆಯಾಗಿದ್ದು, ದೃಶ್ಯ ಜನರಲ್ಲಿ ಭೀತಿ ಉಂಟುಮಾಡಿದೆ. ರೈಲ್ವೆ ವೆಲ್ ಫ್ಯಾಕ್ಟರಿ ಬಳಿ ಚಿರತೆ ಕಾಣಿಸಿಕೊಂಡಿದೆ. ಯಲಹಂಕ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ಈಜಲು ಹೋಗಿ ಕೆರೆಪಾಲಾದ ಬಾಲಕ:
ಆನೇಕಲ್: ಈಜಲು ತೆರಳಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸರ್ಜಾಪುರದ ದೊಡ್ಡಕೆರೆ ಯಲ್ಲಿ ಘಟನೆ ಸಂಭವಿಸಿದ್ದು, ಸಂತೋಷ್ (13) ಮೃತಪಟ್ಟ ಬಾಲಕ. ಶನಿವಾರ ಮನೆಯಿಂದ ತೆರಳಿದ್ದ ಸಂತೋಷ್, ರಾತ್ರಿ ಕಳೆದ್ರೂ ಮನೆಗೆ ಬಾರದ ಹಿನ್ನೆಲೆ ಹುಡುಕಾಟ ನಡೆಸಲಾಗಿದೆ. ದೊಡ್ಡ ಕೆರೆ ಬಳಿ ಹುಡುಕಿದಾಗ ನೀರಲ್ಲಿ ತೇಲಿದ್ದ ಶವ ಪತ್ತೆಯಾಗಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಎಗ್ಗಿಲ್ಲದೇ ನಡೆಯುತ್ತಿದೆ ಬಡ್ಡಿ ದಂಧೆ ವ್ಯವಹಾರ;
ಗದಗ: ನಗರದಲ್ಲಿ ಎಗ್ಗಿಲ್ಲದೇ ಬಡ್ಡಿ ದಂಧೆ ವ್ಯವಹಾರ ನಡೆದಿದೆ. ಬಡ್ಡಿ ಹಣಕ್ಕಾಗಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಬಡ್ಡಿ ದಂಧೆಕೋರರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮೃತ್ಯುಂಜಯ ಭರಮಗೌಡರ ಎಂಬಾತನಿಗೆ ಬಡ್ಡಿ ದಂಧೆಕೋರರು ಅಮಾನವೀಯವಾಗಿ ಥಳಿಸಿದ್ದಾರೆ. ಗದಗ ನಗರದ ಕೆಸಿ ರಾಣಿ ರಸ್ತೆಯಲ್ಲಿರೋ ಮನೆಯಿಂದ ಮಾರ್ಚ್ 23 ರಂದು ಎಳೆದ್ಯೊಯ್ದು ಹಲ್ಲೆ ಆರೋಪ ಮಾಡಲಾಗಿದೆ. ಬೆಟಗೇರಿ ವ್ಯಾಪ್ತಿಯ ಜಮೀನಿಗೆ ಕರೆದ್ಯೊಯ್ದು ಹಿಗ್ಗಾಮುಗ್ಗಾ ಥಳಿಸಿ ಎರಡು ದಿನ ಕೂಡಿ ಹಾಕಿದ್ದು, ಉಮೇಶ್ ಸುಂಕದ, ಉದಯ ಸುಂಕದ ಸೇರಿ ಮೂವರು ಹಲ್ಲೆ ಆರೋಪ ಮಾಡಲಾಗಿದೆ. ಎರಡು ಲಕ್ಷಕ್ಕೆ ಒಂದು ಲಕ್ಷ ಬಡ್ಡಿ ನೀಡುವಂತೆ ಒತ್ತಾಯ ಮಾಡಲಾಗಿದ್ದು, ಯುವಕನಿಗೆ ಎದೆ, ಕಾಲಿನ ಮೂಳೆ ಮುರಿಯುವಂತೆ ಕಿರಾತಕರು ಥಳಿಸಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಯುವಕ ನರಳಾಡುತ್ತಿದ್ದಾನೆ. ಪದೇ ಪದೇ ಮನೆಗೆ ಬಂದು ಮೃತ್ಯುಂಜಯ ತಾಯಿಗೆ ಬೆದರಿಕೆ ಹಾಕಿರೋ ಆರೋಪ ಮಾಡಲಾಗಿದೆ. ಪುತ್ರನ ನರಳಾಟ ಕಂಡು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಗದಗ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಕಲಾಗಿದೆ.
ಗಾಂಜಾ ಅಡ್ಡೆ ಮೇಲೆ ಪೊಲೀಸ್ ದಾಳಿ:
ಚಾಮರಾಜನಗರ: ಗಾಂಜಾ ಅಡ್ಡೆ ಮೇಲೆ ಕೋರಮಂಗಲ ಪೊಲೀಸರು ದಾಳಿ ಮಾಡಿದ್ದು, 40 ಲಕ್ಷ ಮೌಲ್ಯದ 102 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಐದು ಜನ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ ಮಾಡಲಾಗಿದೆ. ಗಾಂಜಾವನ್ನ ಚಾಮರಾಜನಗರ ಜಿಲ್ಲೆಯಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು. ಕೋರಮಂಗಲ ಹೆಚ್.ಎಸ್.ಆರ್ ಲೇಔಟ್ ಕೆ.ಆರ್.ಪುರಂ ಬೇಗೂರು ಕೋಣನಕುಂಟೆ ಸುತ್ತಾಮುತ್ತ ಗಾಂಜಾ ಮಾರಾಟ ಮಾಡಲಾಗುತ್ತಿತ್ತು. ಬಂಧಿತರ ವಿರುದ್ದ ಜೆಪಿನಗರ ಮಡಿವಾಳ ಆಡುಗೋಡಿ ಕೋಣನಕುಂಟೆ ಯಲ್ಲಿ ಈ ಹಿಂದೆ ಕೂಡ ಹಲವು ಪ್ರಕರಣ ದಾಖಲಾಗಿವೆ. ಈ ಹಿಂದೆ ಗಾಂಜಾ ಮಾರಾಟ ಹಾಗೂ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು, ಬಂಧಿತರ ವಿರುದ್ದ ಎನ್.ಡಿ.ಪಿ.ಎಸ್ ಅಡಿ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ಹಾಗೂ ಗೂಡ್ಸ್ ಮಧ್ಯೆ ಅಪಘಾತ ಸ್ಥಳದಲ್ಲೇ ಬಾಲಕ ಸಾವು:
ರಾಯಚೂರು: ಆಟೋ ಹಾಗೂ ಗೂಡ್ಸ್ ವಾಹನದ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ಹಿರೆ ಹಳ್ಳದ ಬಳಿ ಘಟನೆ ಸಂಭವಿಸಿದೆ. ಹುಲಿರಾಜು(15)ಮೃತ ಬಾಲಕ. ನಾಗರಾಜ್, ಈರಪ್ಪ ಹಾಗೂ ಯಲ್ಲಪ್ಪಗೆ ಗಾಯಗಳಾಗಿದ್ದು, ನಗರದ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಶಿಫ್ಟ್ ಮಾಡಲಾಗಿದೆ. ಮಾನ್ವಿ ಮಾರ್ಗವಾಗಿ ಹೋಗುತ್ತಿದ್ದ ಆಟೋಗೆ ಗೂಡ್ಸ್ ವಾಹನ ಡಿಕ್ಕಿದ ಹಿನ್ನೆಲೆ ಹುಲಿರಾಜು ಸ್ಥಳ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಮಾನ್ವಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ:
ಬಾಕ್ಸ್ ಆಫೀಸ್ನಲ್ಲಿ ಎರಡನೇ ದಿನವೂ ‘ಆರ್ಆರ್ಆರ್’ ಅಬ್ಬರ; ಶೀಘ್ರವೇ 500 ಕೋಟಿ ಕ್ಲಬ್?
Published On - 2:01 pm, Sun, 27 March 22