ಬಾಕ್ಸ್ ಆಫೀಸ್ನಲ್ಲಿ ಎರಡನೇ ದಿನವೂ ‘ಆರ್ಆರ್ಆರ್’ ಅಬ್ಬರ; ಶೀಘ್ರವೇ 500 ಕೋಟಿ ಕ್ಲಬ್?
ಎರಡನೇ ದಿನ ಈ ಸಿನಿಮಾ 90 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಹಿಂದಿ ಅವತರಣಿಕೆಯಿಂದ ಚಿತ್ರಕ್ಕೆ 26.5 ಕೋಟಿ ರೂಪಾಯಿ ಸಂದಾಯವಾಗಿದೆ. ತೆಲುಗು ವರ್ಷನ್ನಲ್ಲಿ 32 ಕೋಟಿ ಗಳಿಕೆ ಆಗಿದೆ.
‘ಆರ್ಆರ್ಆರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ (RRR Movie Box Office Collection) ಬಿರುಗಾಳಿ ಎಬ್ಬಿಸಿದೆ. ಮೊದಲ ದಿನ ಸುಮಾರು 250 ಕೋಟಿ ರೂಪಾಯಿ ಬಾಚಿಕೊಂಡಿದ್ದ ಈ ಚಿತ್ರ ಎರಡನೇ ದಿನವೂ ತನ್ನ ಅಬ್ಬರ ಮುಂದುವರಿಸಿದೆ. ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ ಎರಡನೇ ದಿನ ಅಂದರೆ ಶನಿವಾರ (ಮಾರ್ಚ್ 26) ಚಿತ್ರದ ಕಲೆಕ್ಷನ್ ತಗ್ಗಿದೆ. ಆದರೆ, ಸಿನಿಮಾ ಗಳಿಕೆ ಮಾಡುತ್ತಿರುವ ವೇಗ ನೋಡಿದರೆ ಶೀಘ್ರವೇ 500 ಕೋಟಿ ಕ್ಲಬ್ ಸೇರುವ ಎಲ್ಲಾ ಲಕ್ಷಣ ಗೋಚರವಾಗುತ್ತಿದೆ. ಈ ಮೂಲಕ ಹೊಸ ದಾಖಲೆ ಬರೆಯಲು ‘ಆರ್ಆರ್ಆರ್’ ಚಿತ್ರ ರೆಡಿ ಆದಂತಿದೆ. ಹಲವು ದಾಖಲೆಗಳನ್ನು ಅಳಿಸಿ, ಹೊಸ ದಾಖಲೆಗಳನ್ನು ‘ಆರ್ಆರ್ಆರ್’ (RRR Movie) ಸೃಷ್ಟಿ ಮಾಡುತ್ತಿದೆ.
ಮೊದಲ ದಿನ ಕರ್ನಾಟಕದಿಂದ 16 ಕೋಟಿ ರೂಪಾಯಿ, ಆಂಧ್ರ ಹಾಗೂ ತೆಲಂಗಾಣದಿಂದ 120 ಕೋಟಿ, ಹಿಂದಿ ವರ್ಷನ್ನಿಂದ 25 ಕೋಟಿ, ತಮಿಳುನಾಡು ಹಾಗೂ ಕೇರಳದಿಂದ ಚಿತ್ರಕ್ಕೆ 17 ಕೋಟಿ, ವಿದೇಶದಿಂದ 78 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ ಈ ಚಿತ್ರ ಸುಮಾರು 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ ಎರಡೇ ದಿನಕ್ಕೆ ಸುಮಾರು 350 ಕೋಟಿ ರೂ. ದಾಟಿದೆ!
ಎರಡನೇ ದಿನ ಈ ಸಿನಿಮಾ 90 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಹಿಂದಿ ಅವತರಣಿಕೆಯಿಂದ ಚಿತ್ರಕ್ಕೆ 26.5 ಕೋಟಿ ರೂಪಾಯಿ ಸಂದಾಯವಾಗಿದೆ. ತೆಲುಗು ವರ್ಷನ್ನಲ್ಲಿ 32 ಕೋಟಿ ಗಳಿಕೆ ಆಗಿದೆ. ಎರಡನೇ ದಿನ ತೆಲುಗು ವರ್ಷನ್ನಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗಳಿಕೆ ಆಗಿದ್ದು ಇದೇ ಮೊದಲು ಎಂದು ಸಿನಿಪಂಡಿತರು ಹೇಳಿದ್ದಾರೆ. ಹೀಗಾಗಿ, ಚಿತ್ರದ ಒಟ್ಟೂ ಗಳಿಕೆ 340-350 ಕೋಟಿ ರೂಪಾಯಿ ಆಗಿದೆ.
In two days, #RRR has grossed A$1.28 Million at the #Australia Box office..
— Ramesh Bala (@rameshlaus) March 27, 2022
ಇಂದು (ಮಾರ್ಚ್ 27) ಭಾನುವಾರ. ಹೀಗಾಗಿ, ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ಹಲವು ಶೋಗಳು ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಕಾರಣಕ್ಕೆ ಇಂದಿನ ಗಳಿಕೆ 100 ಕೋಟಿ ರೂಪಾಯಿ ದಾಟಬಹುದು ಎನ್ನಲಾಗುತ್ತಿದೆ. ಮುಂದಿನ ವಾರಕ್ಕೆ ಈ ಚಿತ್ರ 500 ಕೋಟಿ ರೂಪಾಯಿ ಕ್ಲಬ್ ಸೇರಿದರೂ ಅಚ್ಚರಿ ಏನಿಲ್ಲ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು.
ಈ ಸಿನಿಮಾದಲ್ಲಿ ಬರುವ ಪಾತ್ರಗಳು ನಿಜವಾದವು. ಆದರೆ, ಕಥೆ ಕಾಲ್ಪನಿಕವಾಗಿದೆ. ಈ ಫ್ಯಾಂಟಸಿ ಕಥೆಯನ್ನು ಅಭಿಮಾನಿಗಳು ತುಂಬಾನೇ ಇಷ್ಟಪಟ್ಟಿದ್ದಾರೆ. ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿದೆ. ಈ ಚಿತ್ರದ ಪ್ರಚಾರಕ್ಕೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ ದಾಟಿದೆ.
Alia Bhatt: ‘ಆರ್ಆರ್ಆರ್’ ಚಿತ್ರ ನೋಡಿ ನಿರಾಸೆಗೊಂಡ ಆಲಿಯಾ ಭಟ್ ಫ್ಯಾನ್ಸ್
Published On - 1:46 pm, Sun, 27 March 22