ಪತಿ ರಾಮು ನಿಧನದ ಬಳಿಕ ಮತ್ತೆ ನಟನೆ ಆರಂಭಿಸಿದ ಮಾಲಾಶ್ರೀ; ಹೊಸ ಸಿನಿಮಾದಲ್ಲಿ ಡಾಕ್ಟರ್​ ಪಾತ್ರ

Malashree New Movie: ದೀರ್ಘ ಗ್ಯಾಪ್​ನ ನಂತರ ಮಾಲಾಶ್ರೀ ಅವರು ಹೊಸ ಸಿನಿಮಾಗಾಗಿ ಬಣ್ಣ ಹಚ್ಚಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಅವರಿಗೆ ಡಾಕ್ಟರ್​ ಪಾತ್ರ ನೀಡಲಾಗಿದೆ.

ಪತಿ ರಾಮು ನಿಧನದ ಬಳಿಕ ಮತ್ತೆ ನಟನೆ ಆರಂಭಿಸಿದ ಮಾಲಾಶ್ರೀ; ಹೊಸ ಸಿನಿಮಾದಲ್ಲಿ ಡಾಕ್ಟರ್​ ಪಾತ್ರ
ಮಾಲಾಶ್ರೀ, ಕೋಟಿ ರಾಮು
Follow us
TV9 Web
| Updated By: ಮದನ್​ ಕುಮಾರ್​

Updated on: Mar 27, 2022 | 12:25 PM

ನಟಿ ಮಾಲಾಶ್ರೀ (Malashree) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಪಕ್ಕದ ಮನೆ ಹುಡುಗಿ ಪಾತ್ರದಿಂದ ಹಿಡಿದು ಪೊಲೀಸ್​ ಅಧಿಕಾರಿವರೆಗೆ ಎಲ್ಲ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರ ಹಳೇ ಸಿನಿಮಾಗಳು (Malashree Movies) ಟಿವಿಯಲ್ಲಿ ಪ್ರಸಾರವಾದಾಗ ರೆಪ್ಪೆ ಮುಚ್ಚದೇ ನೋಡುವ ಜನರಿದ್ದಾರೆ. ನಟನೆಯಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ದಶಕಗಳ ಹಿಂದೆಯೇ ಸಾಬೀತು ಮಾಡಿದರು. ಇತ್ತೀಚಿನ ವರ್ಷಗಳಲ್ಲಿ ಕಾರಣಾಂತರಗಳಿಂದ ಮಾಲಾಶ್ರೀ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ. ಕಳೆದ ವರ್ಷ ಅವರ ಪತಿ ಕೋಟಿ ರಾಮು (Koti Ramu) ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಕೊರೊನಾದಿಂದ ರಾಮು ಕೊನೆಯುಸಿರು ಎಳೆದ ಬಳಿಕ ಮಾಲಾಶ್ರೀ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು. ಆ ನೋವಿನ ನಡುವೆಯೂ ಬದುಕು ಮುಂದುವರಿಯಲೇಬೇಕು. ಈಗ ಅವರು ಮತ್ತೆ ನಟನೆಗೆ ಮರಳಿದ್ದಾರೆ. ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಯಾರು? ಮಾಲಾಶ್ರೀ ಪಾತ್ರ ಯಾವ ರೀತಿ ಇರಲಿದೆ? ಸದ್ಯ ಈ ಚಿತ್ರದ ಕೆಲಸಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಮಾಲಾಶ್ರೀ ಅವರು ಈ ಹಿಂದೆ ಕೊನೆಯದಾಗಿ ನಟಿಸಿದ್ದು ‘ಉಪ್ಪು ಹುಳಿ ಖಾರ’ ಚಿತ್ರದಲ್ಲಿ. ಆ ಸಿನಿಮಾ ತೆರೆಕಂಡು ನಾಲ್ಕೂವರೆ ವರ್ಷ ಕಳೆದಿದೆ. ದೀರ್ಘ ಗ್ಯಾಪ್​ನ ನಂತರ ಮಾಲಾಶ್ರೀ ಮತ್ತೆ ಬಣ್ಣ ಹಚ್ಚಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಅವರಿಗೆ ಡಾಕ್ಟರ್​ ಪಾತ್ರ ನೀಡಲಾಗಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್​ ಆಗಿಲ್ಲ. ಸಿನಿಮಾದ ಟೈಟಲ್​ ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

15 ವರ್ಷಗಳ ಕಾಲ ಸೇನೆಯಲ್ಲಿ ಡಾಕ್ಟರ್​ ಆಗಿ ಕೆಲಸ ಮಾಡಿದ ನಂತರ ಊರಿಗೆ ಮರಳಿದ ವೈದ್ಯೆಯಾಗಿ ಮಾಲಾಶ್ರೀ ನಟಿಸುತ್ತಿದ್ದಾರೆ. ಕೊರೊನಾ ಮಹಾಮಾರಿ ಹರಡಿದ್ದಾಗ ಲಾಕ್​ಡೌನ್​ ಮಾಡಲಾಗಿತ್ತು. ಆ ಸಂದರ್ಭದಲ್ಲಿ ನಡೆದ ನೈಜ ಘಟನೆಗಳನ್ನು ಪ್ರೇರಣೆಯಾಗಿ ಇಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಆ್ಯಕ್ಷನ್​, ಥ್ರಿಲ್ಲರ್​ ಮತ್ತು ಸೆಂಟಿಮೆಂಟ್​ ಅಂಶಗಳು ಈ ಚಿತ್ರದಲ್ಲಿ ಇರಲಿವೆ. ಈ ಸಿನಿಮಾದ ಬಹುತೇಕ ದೃಶ್ಯಗಳು ಆಸ್ಪತ್ರೆಯಲ್ಲೇ ನಡೆಯುತ್ತವೆ ಎಂಬುದು ಮತ್ತೊಂದು ವಿಶೇಷ. ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಸಹ ರವೀಂದ್ರ ವಂಶಿ ಅವರೇ ಬರೆದಿದ್ದಾರೆ.

ವೃತ್ತಿಯಲ್ಲಿ ಡೆವಲಪರ್​ ಮತ್ತು ಪ್ರಮೋಟರ್​ ಆಗಿರುವ ಬೆಂಗಳೂರಿನ ಬಿ.ಎಸ್. ಚಂದ್ರಶೇಖರ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸ್ವರ್ಣಗಂಗಾ ಫಿಲ್ಮ್ಸ್​ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್​ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಒಂದು ಹಂತದ ಚಿತ್ರೀಕರಣವನ್ನು ಮುಗಿಸಿಕೊಳ್ಳಲಾಗಿದೆ. ಯುಗಾದಿ ಹಬ್ಬ ಮುಗಿದ ನಂತರ ಎರಡನೇ ಹಂತದ ಶೂಟಿಂಗ್​ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ.

ಮಾಲಾಶ್ರೀ ಅವರ ಜೊತೆಗೆ ಡಾಕ್ಟರ್​ ಪಾತ್ರದಲ್ಲಿ ಪ್ರಮೋದ್‌ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ರಂಗಾಯಣ ರಘು ಅವರು ಬಣ್ಣ ಹಚ್ಚುತ್ತಿದ್ದಾರೆ. ಇನ್ನುಳಿದಂತೆ ಸಾಧು ಕೋಕಿಲ, ಬಿಗ್‌ಬಾಸ್ ವಿನ್ನರ್​ ಮಂಜು ಪಾವಗಡ, ಕುರಿ ರಂಗ, ಅಶ್ವಿನ್, ವರ್ಧನ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಪ್ರಮೋದ್‌ ಭಾರತೀಯ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನ, ಜಾಗ್ವಾರ್‌ ಸಣ್ಣಪ್ಪ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಮಾಲಾಶ್ರೀ ಅವರು ಕಮ್​ಬ್ಯಾಕ್​ ಮಾಡುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ:

ಮಾಲಾಶ್ರೀ ರಾಮು ಚಿತ್ರಕ್ಕೆ ಸ್ಯಾಂಡಲ್​ವುಡ್​ ನಟರ ಬೆಂಬಲ; ಶಿವಣ್ಣ, ರವಿಚಂದ್ರನ್​, ಉಪ್ಪಿ ಹೇಳಿದ್ದೇನು?

ಕೋಟಿ ರಾಮು ಹುಟ್ಟುಹಬ್ಬ; ಕಣ್ಣೀರು ತುಂಬಿಕೊಂಡು ಭಾವುಕ ಪತ್ರ ಬರೆದ ನಟಿ ಮಾಲಾಶ್ರೀ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು