ಮೋಜು ಮಸ್ತಿಗಾಗಿ ಮನೆಗಳ್ಳತನ; ಬಂದ ಹಣದಿಂದ ಪತ್ನಿ ಜೊತೆ ದೇಶ ಸುತ್ತುತ್ತಿದ್ದ ಆಸಾಮಿ ಅರೆಸ್ಟ್
ಮಹಿಳೆಯನ್ನ ಕೆಳಗೆ ತಳ್ಳಿ ಸರ ಕಸಿದುಕೊಂಡು ಹೋಗಿರುವಂತಹ ಘಟನೆ ನಡೆದಿದೆ. ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರಿಂದ ಕೃತ್ಯ ಎಸಗಲಾಗಿದ್ದು, ಮೈಕೋ ಲೇಔಟ್ ಬಳಿಯ ವಿಜಯಾ ಲೇಔಟ್ನಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಮೋಜು ಮಸ್ತಿಗಾಗಿ ಮನೆಗಳ್ಳತನ (HOME ROBBERY) ಮಾಡಿದ್ದ ಆರೋಪಿ ಸೆರೆಯಾಗಿದ್ದಾನೆ. ಕೆ.ಆರ್.ಪುರಂನ ಇಮ್ರಾನ್ ಖಾನ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರ ಪೊಲೀಸರಿಂದ ಅರೆಸ್ಟ್ ಮಾಡಲಾಗಿದೆ. 6 ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿ ಇಮ್ರಾನ್ ಖಾನ್, 147 ಗ್ರಾಂ ಚಿನ್ನಾಭರಣ, 1.517 ಕೆಜಿ ಬೆಳ್ಳಿ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಹೆಂಡತಿಯ ಜಾಲೀ ಟ್ರಿಪ್ಗೆ ಗಂಡ ಖತರ್ನಾಕ್ ಪ್ಲ್ಯಾನ್ ಮಾಡಿದ್ದ. ಈತನ ಕೆಲಸದ ಅಸಲಿ ಕಥೆ ಕೇಳಿಯೇ ಪೊಲೀಸರು ಶಾಕ್ ಆಗಿದ್ದರು. ಈತ ಟಾರ್ಗೆಟ್ ಮಾಡಿದ ಮನೆಗಳು ಮಿಸ್ಸ್ ಆಗೋ ಮಾತೇ ಇಲ್ಲ. ಬೆಳ್ಳಂಬೆಳಿಗ್ಗೆಯೇ ಏರಿಯಾಗೆ ಎಂಟ್ರಿ ಕೊಟ್ಟು ಬೀಗ ಹಾಕಿದ ಮನೆಗಳ ಕಳ್ಳತನ ಮಾಡುತ್ತಿದ್ದ. ಖಚಿತ ಮಾಹಿತಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಆಸಾಮಿ ತಗಲಾಕಿ ಕೊಂಡಿದ್ದಾನೆ. ಮೋಜು ಮಸ್ತಿಯ ಜೀವನಕ್ಕೆ ಕದಿಯುತಿದ್ದ ಆರೋಪಿ, ಬಂದ ಹಣದಲ್ಲಿ ಪತ್ನಿ ಜೊತೆ ದೇಶ ಸುತ್ತುತಿದ್ದ. ಗೋವಿಂದರಾಜನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಮಹಿಳೆಯನ್ನ ಕೆಳಗೆ ತಳ್ಳಿ ಸರ ಕಸಿದುಕೊಂಡು ಹೋಗಿರುವಂತಹ ಘಟನೆ ನಡೆದಿದೆ. ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರಿಂದ ಕೃತ್ಯ ಎಸಗಲಾಗಿದ್ದು, ಮೈಕೋ ಲೇಔಟ್ ಬಳಿಯ ವಿಜಯಾ ಲೇಔಟ್ನಲ್ಲಿ ಘಟನೆ ನಡೆದಿದೆ. ಪ್ರಪುಲ್ಲಾ ಎಂಬುವರ 65 ಗ್ರಾಂ ಸರವನ್ನು ಆಸಾಮಿಗಳು ಕದಿದ್ದಾರೆ. ಇಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಇಟ್ಟುಕೊಂಡಿದ್ದ ಮಹಿಳೆ, ಪೂಜೆಗೆ ಹೂವು ಹಣ್ಣು ತರಲು ಸ್ನೇಹಿತೆ ಜೊತೆ ಮಾರ್ಕೆಟ್ಗೆ ಹೋಗಿದ್ದ ಪ್ರಪುಲ್ಲಾ. ಮಾರ್ಕೆಟ್ನಿಂದ ವಾಪಸ್ ಬರುವಾಗ ಸರಗಳ್ಳತನ ಮಾಡಲಾಗಿದೆ. ಪ್ರಪುಲ್ಲಾರನ್ನ ಕೆಳಗೆ ತಳ್ಳಿ ಸರ ಕಸಿದು ಎಸ್ಕೇಪ್ ಆಗಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆ ಮಕ್ಕಳ ನಡುವೆ ಜಗಳ ಸಾವಿನಲ್ಲಿ ಅಂತ್ಯ:
ಮೈಸೂರು: ತಂದೆ ಮಕ್ಕಳ ನಡುವಿನ ಜಗಳ ತಂದೆ ಸಾವಿನಲ್ಲಿ ಅಂತ್ಯವಾಗಿರುವಂತಹ ಘಟನೆ ನಡೆದಿದೆ. ಹುಣಸೂರು ತಾಲ್ಲೂಕಿನ ಸೀಗರಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ದೇವರಾಜ್ ( 55 ) ಮೃತ ದುರ್ದೈವಿ. ದೇವರಾಜ್ಗೆ ಮೂವರು ಹೆಣ್ಣು ಮಕ್ಕಳು. ತಂದೆಯಿಂದ ಮಗಳ ಮಾಂಗಲ್ಯದ ಚೈನ್ನನ್ನು ಜಮೀನಿನ ಖರ್ಚಿಗಾಗಿ ದೇವರಾಜು ಗಿರವಿ ಇಟ್ಟಿದ್ದ. ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದು, ಮಕ್ಕಳು ಹಿಮ್ಮೆಟಿಸುವ ವೇಳೆ ಆಯತಪ್ಪಿ ಆಕಸ್ಮಿಕವಾಗಿ ಟಿ.ವಿ.ಸ್ಟ್ಯಾಂಡ್ ಮೇಲೆ ಬಿದ್ದು ತಲೆಗೆ ಪೆಟ್ಟಾಗಿ, ತೀವ್ರ ರಕ್ತಸ್ರಾವದಿಂದ ದೇವರಾಜು ಮೃತಪಟ್ಟಿದ್ದಾನೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಲ್ಲಂಗಡಿ ಬೀಜ ಬಿತ್ತನೆ ಮಾಡಿ 8ಲಕ್ಷ ರೂ. ನಷ್ಟ:
ಕೊಡಗು: ತಿಳಿಯದೆ ಕಲ್ಲಂಗಡಿ ಬಿತ್ತನೆ ಬೀಜ ನೆಟ್ಟು, ರೈತಯೋರ್ವ 8 ಲಕ್ಷ ರೂ. ನಷ್ಟ ಅನುಭವಿಸಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರೈತರಿಗೆ ಕಳಪೆ ಬೀಜ ಪೂರೈಕೆ ಮಾಡಲಾಗಿದ್ದು, ಕಳಪೆ ಕಲ್ಲಂಗಡಿ ಬೀಜ ಬಿತ್ತನೆ ಮಾಡಿ ರೈತ ತಿಮ್ಮೇಗೌಡ ಕೈ ಸುಟ್ಟು ಕೊಂಡಿದ್ದಾನೆ. ವಕ್ಕಲ್ ಸಂಸ್ಥೆಯ ಕಾವ್ಯಾ ಕಲ್ಲಂಗಡಿ ಬೀಜ ಖರೀದಿಸಿದ್ದ ತಿಮ್ಮೇಗೌಡ, ಎರಡು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ. 90 ದಿನ ಕಳೆದರೂ ಫಸಲು ನೀಡದ ಬೆಳೆ. ಕಲ್ಲಂಗಡಿ ಬೆಳೆಯಲು ರೈತ ಎಂಟು ಲಕ್ಷ ರೂ ಸಾಲ ಮಾಡಿದ್ದಾರೆ. ಪರಿಹಾರ ನೀಡುವಂತೆ ಬೀಜ ಪೂರೈಕೆ ಕಂಪೆನಿಗೆ ಮನವಿ ಮಾಡಿದ್ದು, ಪರಿಹಾರ ಸಿಗದಿದ್ದಲ್ಲಿ ರೈತನಿಂದ ಆತ್ಮಹತ್ಯೆ ಬೆದರಿಕೆ ಹಾಕಲಾಗಿದೆ.
ಇದನ್ನೂ ಓದಿ;
ಆನೆಗಳ ಹಿಂಡನ್ನು ಕಾಡಿಗಟ್ಟಲು ಮೈಸೂರಿನಿಂದ ಚಿಕ್ಕಮಗಳೂರಿಗೆ ಬಂದ ದಸರಾ ಆನೆಗಳು; ವಿಡಿಯೋ ನೋಡಿ